Hello ಸ್ನೇಹಿತರೇ, ಇಂದಿನ ನಮ್ಮ ಲೇಖನದಲ್ಲಿ ನಾವು ಗೃಹ ಲಕ್ಷ್ಮಿ ಯೋಜನೆ, ಈ ರೀತಿಯಾಗಿ ಅರ್ಜಿ ಸಲ್ಲಿಸಿ ಇದರ ಬಗ್ಗೆ ತಿಳಿಯೋಣ. ಇದರ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ..
ಈ ಬಾರಿಯ ಆರ್ಥಿಕ ವರ್ಷದಲ್ಲಿಯೇ ಐದು ಯೋಜನೆಗಳನ್ನು ಈಡೇರುಸುವುದಾಗಿ ಸಿದ್ದರಾಮಯ್ಯ (siddaramaiah) ಘೋಷಿಸಿದ್ದಾರೆ. ಇನ್ನು ಯೋಜನೆಗಳಿಗೆ ಒಂದಿಷ್ಟು ಷರತ್ತುಗಳನ್ನು ಕೂಡ ಸೇರಿಸಲಾಗಿದೆ. ಇದೀಗ ಗೃಹಲಕ್ಷ್ಮಿ ಯೋಜನೆಯ ಕುರಿತು ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯ ಬಗ್ಗೆ ಒಂದಿಷ್ಟು ವಿವರಗಳನ್ನು ತಿಳಿಯೋಣ.
ಗೃಹಲಕ್ಷ್ಮಿ ಯೋಜನೆಯ ಲಭ್ಯತೆ
ಮನೆ ಒಡತಿಗೆ ಮಾಸಿಕವಾಗಿ 2000 ನೀಡಲು ಸರ್ಕಾರ ನಿರ್ಧರಿಸಿದೆ. 18 ವರ್ಷ ಮೇಲ್ಪಟ್ಟ ಕುಟುಂಬದ ಮುಖ್ಯಸ್ಥೆಗೆ ಈ ಗೃಹಲಕ್ಷ್ಮಿ ಯೋಜನೆ ಲಭ್ಯವಾಗಲಿದೆ. ಕುಟುಂಬದ ಮುಖ್ಯಸ್ಥೆ ಯಾರು ಎನ್ನುವುದನ್ನು ಕುಟುಂಬದ ಸದಸ್ಯರೇ ನಿರ್ಧರಿಸಬೇಕು ಎಂದು ಮುಖ್ಯಮಂತ್ರಿ ಅವರು ಹೇಳಿಕೆ ನೀಡಿದ್ದಾರೆ. ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಬಳಕೆದಾರರಾದ ಪ್ರತಿ ಮಹಿಳೆಯು ಯೋಜನೆಯ ಫಲಾನುಭವಿ ಆಗಲಿದ್ದಾರೆ. ಇನ್ನು ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಯ ಬಗ್ಗೆ ಮಾಹಿತಿ ತಿಳಿಯೋಣ.
ಪ್ರಮುಖ ಲಿಂಕ್‌ಗಳು:
ಇತ್ತೀಚಿನ ಸುದ್ದಿ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳು | APPLY HERE ಕ್ಲಿಕ್ |
ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ
ಗೃಹಲಕ್ಷ್ಮಿ ಯೋಜನೆಯು ಆಗಸ್ಟ್ 15 ಸ್ವತಂತ್ರ ದಿನಾಚರಣೆಯ ದಿನದಂದು ಪ್ರತಿ ಮನೆಯ ಒಡತಿಗೆ ಮಾಸಿಕ 2,000 ರೂ. ಖಾತೆಗೆ ಜಮಾ ಆಗಲಿದೆ. ಇನ್ನು ಜೂನ್ 15 ರಿಂದ ಜುಲೈ 15 ರ ವಳಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸಮಯಾವಕಾಶ ನೀಡಲಾಗಿದೆ.
ಜುಲೈ 15 ರವಳಗೆ ಅರ್ಹ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಇನ್ನು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ವಿವರಗಳನ್ನು ನೀಡುವ ಮೂಲಕ ಅರ್ಜಿ ಸಲ್ಲಿಸಬೇಕು. ವೃದ್ದಾಪ್ಯ ವೇತನ, ವಿಧವಾ ವೇತನ ಹಾಗೂ ಪಿಂಚಣಿ ಪಡೆಯುತ್ತಿರುವ ಮಹಿಳೆಯರು ಕೂಡ ಈ ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಕೆ
* ಗೃಹಲಕ್ಷ್ಮಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಮೊದಲು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ ಸಲ್ಲಿಸಬೇಕು.
* ಮನೆಯ ಯಜಮಾನಿ ಯಾರು ಎಂಬುದನ್ನು ಆಯಾ ಮನೆಯವರೇ ಉಲ್ಲೇಖಿಸಬೇಕು.
* ಈ ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಹಾಕಬೇಕು.
* ಜೂನ್ 15 ರಿಂದ ಜುಲೈ 15 ರ ಅವಧಿಯಲ್ಲಿ ಅರ್ಜಿ ಹಾಕಬೇಕು.
* ಈ ಯೋಜನೆ ಆಗಸ್ಟ್ 15 ರಿಂದ ಚಾಲನೆಯಾಗಲಿದೆ.