ನಿಮ್ಮ ಕ್ರೆಡಿಟ್ ಸ್ಕೋರ್ ನಿಮ್ಮ ಹಣಕಾಸಿನ ಆರೋಗ್ಯದ ನಿರ್ಣಾಯಕ ಅಂಶವಾಗಿದೆ ಮತ್ತು ಅನುಕೂಲಕರ ಸಾಲದ ನಿಯಮಗಳು ಮತ್ತು ಹಣಕಾಸಿನ ಅವಕಾಶಗಳನ್ನು ಪ್ರವೇಶಿಸಲು ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ನಿರ್ವಹಿಸುವುದು ಅತ್ಯಗತ್ಯ. ಭಾರತದಲ್ಲಿ ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಕ್ರೆಡಿಟ್ ಸ್ಕೋರ್ಗಳಲ್ಲಿ ಒಂದಾಗಿದೆ CIBIL ಸ್ಕೋರ್, ಇದು 300 ರಿಂದ 900 ರವರೆಗೆ ಇರುತ್ತದೆ. ನಿಮ್ಮ CIBIL ಸ್ಕೋರ್ ಅನ್ನು ಹೆಚ್ಚಿಸಲು ನೀವು ಬಯಸಿದರೆ, ಆರೋಗ್ಯಕರ ಆರ್ಥಿಕ ಭವಿಷ್ಯಕ್ಕೆ ದಾರಿ ಮಾಡಿಕೊಡಲು ಈ ಐದು ಅಗತ್ಯ ಹಂತಗಳನ್ನು ಅನುಸರಿಸಿ.
ಸಾಮಾನ್ಯವಾಗಿ ಜನರು ಹೆಚ್ಚಾಗಿ Credit ಕಾರ್ಡುಗಳನ್ನು ಬಳಸುತ್ತಾರೆ. ಇನ್ನು Credit card ಬಳಸುವ ಪ್ರತಿ ಬಳಕೆದಾರರಿಗೆ Credit score ನ ಬಗ್ಗೆ ವಿವರ ತಿಳಿದಿರುತ್ತದೆ. ಗೃಹ ಸಾಲ, ಕಾರು ಸಾಲ ಮತ್ತು ವೈಯಕ್ತಿಕ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಪಡೆಯಲು ಉತ್ತಮ CIBIL ಸ್ಕೋರ್ ಹೊಂದುವುದು ಬಹಳ ಅವಶ್ಯಕವಾಗಿದೆ.
CIBIL ಸ್ಕೋರ್ ನ ಸಹಾಯದಿಂದ ನೀವು ಅಗತ್ಯವಿದ್ದಾಗ ಸುಲಭವಾಗಿ ಸಾಲವನ್ನು ಪಡೆಯಬಹುದು. ಆದರೆ ಇಂದಿನ ದಿನಗಳಲ್ಲಿ ಉತ್ತಮ ಕ್ರೆಡಿಟ್ ಸ್ಕೋರ್ ರಚಿಸುವುದು ತುಂಬಾ ಕಷ್ಟ. ಸಣ್ಣ ಸಣ್ಣ ತಪ್ಪು ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಇದೀಗ ನೀವು ಈ 5 ನಿಯಮವನ್ನು ಪಾಲಿಸುವ ಮೂಲಕ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಯಾಗುದನ್ನು ತಪ್ಪಿಸಬಹುದಾಗಿದೆ.
ಈ 5 ನಿಯಮ ಪಾಲಿಸಿದರೆ ನಿಮ್ಮ ಕ್ರೆಡಿಟ್ ಸ್ಕೋರ್ 750 ಕ್ಕಿಂತ ಹೆಚ್ಚಿರುತ್ತದೆ
ಸಾಲಕ್ಕಾಗಿ ಮತ್ತೆ ಮತ್ತೆ ವಿಚಾರಿಸಬಾರದು
ನೀವು ಯಾವುದೇ ಬ್ಯಾಂಕ್ ಅಥವಾ NBFC ಕಂಪನಿಯಲ್ಲಿ ಸಾಲಕ್ಕಾಗಿ ವಿಚಾರಿಸಿದಾಗ, ನಿಮ್ಮ ಕ್ರೆಡಿಟ್ ವರದಿಯನ್ನು ಬ್ಯಾಂಕ್ ಅಥವಾ NBFC ಗಮನಿಸುತ್ತದೆ. ಬ್ಯಾಂಕ್ ಕ್ರೆಡಿಟ್ ವರದಿಯನ್ನು ಒಮ್ಮೆ ಪರಿಶೀಲನೆ ಮಾಡಿದರೆ CIBIL ಸ್ಕೋರ್ 5 ರಿಂದ 10 ಅಂಕಗಳನ್ನು ಕಡಿಮೆ ಮಾಡುತ್ತದೆ.
EMI ಅನ್ನು ಸಮಯಕ್ಕೆ ಪಾವತಿಸಬೇಕು
ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಕಾಪಾಡಿಕೊಳ್ಳಲು EMI ಗಳನ್ನು ಸಮಯಕ್ಕೆ ಸರಿಯಾಗಿ ಠೇವಣಿ ಮಾಡಬೇಕು. ಸಮಯಕ್ಕೆ EMI ಪಾವತಿಸಲು ನಿಮ್ಮ ಬ್ಯಾಂಕ್ ಖಾತೆಯಿಂದ ಸ್ವಯಂ ಡೆಬಿಟ್ ಆಯ್ಕೆಯನ್ನು ನೀವು ಆರಿಸಿಕೊಳ್ಳಬಹುದು. ಇದರಿಂದ ನೀವು ಸಮಯಕ್ಕೆ ಸರಿಯಾಗಿ EMI ಅನ್ನು ಪಾವತಿಸಬಹುದಾಗಿದೆ.
ಕ್ರೆಡಿಟ್ ಕಾರ್ಡ್ ಮಿತಿ
ಕ್ರೆಡಿಟ್ ಕಾರ್ಡ್ ಮಿತಿ 40 ಪ್ರತಿಶತದವರೆಗೆ ಇರುವುದು ಉತ್ತಮ. ನಿಮ್ಮ ಕ್ರೆಡಿಟ್ ಮಿತಿಯನ್ನು ಮೀರಿದರೆ ನಿಮ್ಮನ್ನು ಕ್ರೆಡಿಟ್ ಹಂಗ್ ಎಂದು ಪರಿಗಣಿಸಲಾಗುತ್ತದೆ . ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.
ಸುರಕ್ಷಿತ ಸಾಲವನ್ನು ತೆಗೆದುಕೊಳ್ಳುದು ಉತ್ತಮ
ನೀವು ಪದೇ ಪದೇ ಅಸುರಕ್ಷಿತ ಸಾಲಗಳನ್ನು ತೆಗೆದುಕೊಂಡಾಗ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಬ್ಯಾಂಕ್ ಗಳ ದೃಷ್ಟಿಯಲ್ಲಿ ನಿಮ್ಮನ್ನು ಆರ್ಥಿಕವಾಗಿ ಅಸ್ಥಿರ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಹೆಚ್ಚಿನ ಅಗತ್ಯವಿದ್ದಾಗ ಮಾತ್ರ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಬೇಕು.
ಅವಧಿ ಪೂರ್ಣಗೊಳ್ಳುವ ಮುನ್ನ ಸಾಲವನ್ನು ಮರುಪಾವತಿಸಿ
ನೀವು ತೆಗೆದುಕೊಂಡ ಸಾಲವನ್ನು ಆ ಸಾಲದ ಅವಧಿ ಮುಗಿಯುವ ಮುನ್ನ ಪಾವತಿ ಮಾಡಬೇಕು. ಏಕೆಂದರೆ ಇದು ಬ್ಯಾಂಕ್ ಗಳೊಂದಿಗೆ ನಿಮ್ಮ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.