ಜಲಸಂಪನ್ಮೂಲಗಳ ಮೇಲೆ ಅವಲಂಬಿತವಾಗಿರುವ ಕೃಷಿ ಸಮುದಾಯಗಳು ಮತ್ತು ಕೈಗಾರಿಕೆಗಳಿಗೆ ಗಮನಾರ್ಹವಾದ ಪ್ರಗತಿಯಲ್ಲಿ, ಸ್ವಾಗತಾರ್ಹ ಬದಲಾವಣೆಯು ಫಲಪ್ರದವಾಗಿದೆ. ಇಂದಿನಿಂದ, ಪಂಪ್ ಸೆಂಟರ್‌ಗಳಿಗೆ ನಿರಂತರ ಏಳು ಗಂಟೆಗಳ ಮೂರು-ಹಂತದ ವಿದ್ಯುತ್ ಪೂರೈಕೆಯು ನೀರನ್ನು ನಿರ್ವಹಿಸುವ ಮತ್ತು ಕೃಷಿ ಮತ್ತು ಇತರ ಅಗತ್ಯ ಅಗತ್ಯಗಳಿಗಾಗಿ ಬಳಸಿಕೊಳ್ಳುವ ವಿಧಾನವನ್ನು ಪರಿವರ್ತಿಸುತ್ತದೆ. ಪಂಪ್ ಸೆಂಟರ್ ಗಳಿಗೆ ನಿರಂತರ ಏಳು ತಾಸು ತ್ರಿಫೇಸ್ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿರುವುದು ಕೃಷಿ ಮತ್ತು ನೀರು ನಿರ್ವಹಣೆ ಕ್ಷೇತ್ರದಲ್ಲಿ ಮೈಲಿಗಲ್ಲು.
ರಾಜ್ಯದ ರೈತರಿಗೆ ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ ನೀಡಿದ್ದು, ಇಂದಿನಿಂದ ರೈತರ ಪಂಪ್ ಸೆಂಟ್ ಗಳಿಗೆ 7 ಗಂಟೆ ನಿರಂತರ ವಿದ್ಯುತ್ ನೀಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇನ್ನು ಓದಿ ; ಕೇಂದ್ರ ಸರ್ಕಾರದಿಂದ ಸಿಗಲಿದೆ ಪ್ರತಿ ಮನೆಗೆ ಫ್ಯಾನ್ ಮತ್ತು ಅಡುಗೆ ಮಾಡಲು ಇಂಡಕ್ಷನ್, ಕೇಂದ್ರದ ಘೋಷಣೆ.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂಧನ ಇಲಾಖೆಯ ಜೊತೆ ಪರಿಶೀಲನೆ ಸಭೆ ನಡೆದಿದ್ದು, ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ರೈತರ ಪಂಪ್ ಸೆಂಟ್ ಗಳಿಗೆ 7 ಗಂಟೆ ನಿರಂತರ ವಿದ್ಯುತ್ ನೀಡುತ್ತೇವೆ ಎಂದು ಈ ಹಿಂದೆಯೇ ಘೋಷಿಸಿದ್ದೆವು, ಅಂತೆಯೇ ಇಂದಿನಿಂದ ರೈತರ ಪಂಪ್ ಸೆಂಟ್ ಗಳಿಗೆ 7 ಗಂಟೆ ನಿರಂತರ ವಿದ್ಯುತ್ ನೀಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಇಂಧನ ಇಲಾಖೆ ಜೊತೆ ಕಳೆದ ವಾರವೇ ಸಭೆ ನಡೆಸಿ ವಿದ್ಯುತ್ ನೀಡುವ ಬಗ್ಗೆ ನಿರ್ಧರಿಸಿದ್ದೇವೆ ಎಂದರು.
ಅದೇ ರೀತಿ ವಿದ್ಯುತ್ ಕೊರತೆ ನೀಗಿಸಲು ಬೇರೆ ರಾಜ್ಯಗಳಿಂದ ಕಲ್ಲಿದ್ದಲು ಖರೀದಿ ಬಗ್ಗೆ ಇಂಧನ ಇಲಾಖೆ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಉಂಟಾದ ವಿದ್ಯುತ್ ಕೊರತೆ ನೀಗಿಸಲು ಬೇರೆ ರಾಜ್ಯಗಳಿಂದ ಕಲ್ಲಿದ್ದಲು ಖರೀದಿಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ. . ಸಭೆಯಲ್ಲಿ ಇಂಧನ ಸಚಿವ ಕೆ.ಜೆ ಚಾರ್ಜ್ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.