ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ, ಇಂದು ಕಾವೇರಿ ಕಿಚ್ಚು ತೀವ್ರಗೊಳ್ಳುತ್ತಿದೆ. ಈ ಪರಿಣಾಮ ಇಂದು ಬೆಂಗಳೂರು ಬಂದ್ ಕೂಡ ನಡೆಯಲಿದೆ. ಬೆಂಗಳೂರು ಬಂದ್ ಪರಿಣಾಮ ಶಾಲಾ-ಕಾಲೇಜುಗಳಿಗೂ ರಜೆ ಘೋಷಣೆ ಮಾಡಲಾಗಿದೆ. ಹಾಗಾದ್ರೇ ಇಂದಿನ ಬಂದ್ ವೇಳೆ ಏನಿರುತ್ತೆ?
ಏನಿರಲ್ಲ? ಅನ್ನೋ ಬಗ್ಗೆ ಮುಂದೆ ಓದಿ.
ಕರ್ನಾಟಕ ಜಲ ಸಂರಕ್ಷಣಾ ಸಮಿತಿಯಿಂದ ಇಂದು ಬೆಂಗಳೂರು ಬಂದ್ ನಡೆಸಲಾಗುತ್ತಿದೆ. ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ಗೆ ಕರೆ ನೀಡಲಾಗಿದೆ. ಇಂದಿನ ಬೆಂಗಳೂರು ಬಂದ್ ಗೆ ಕನ್ನಪರ ಸಂಘಟನೆಗಳು, ರೈತಪರ ಸಂಘಟನೆಗಳು, ಸಾರಿಗೆ, ಶಿಕ್ಷಕರ ಸಂಘಟನೆಗಳು ಸೇರಿದಂತೆ 150ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಸಂಪೂರ್ಣ ಬೆಂಬಲ ನೀಡಿದ್ದಾವೆ.
ಇನ್ನೂ ಇಂದಿನ ಬಂದ್ ಗೆ ಎಫ್ ಕೆಸಿಸಿಐ, ಬೀದಿ ಬದಿ ವ್ಯಾಪಾರಸ್ಥರು ಸೇರಿದಂತೆ 50ಕ್ಕೂ ಹೆಚ್ಚು ಸಂಘಟನೆಗಳು ನೈತಿಕ ಬೆಂಬಲವನ್ನು ಸೂಚಿಸಿದ್ದಾವೆ. ಈ ಪರಿಣಾಮ ಬೆಂಗಳೂರು ಸಂಪೂರ್ಣ ಇಂದು ಸ್ತಬ್ಧವಾಗೋ ಸಾಧ್ಯತೆ ಇದೆ.
ಬೆಂಗಳೂರು ಬಂದ್ ಯಾಕೆ.? ಬೇಡಿಕೆ ಏನು?
ಇಂದು ನಡೆಯುತ್ತಿರುವ ಬಂದ್ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಿ ಆಗಿದೆ.
ರಾಜ್ಯ ಸರ್ಕಾರ ಕೂಡಲೇ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಬೇಕು. ಸಂಕಷ್ಟ ಸೂತ್ರ ಜಾರಿಯಾಗುವವರೆಗೂ ನೀರು ಬಿಡಲ್ಲ ಅಂತ ನಿರ್ಣಯ ಕೈಗೊಳ್ಳಬೇಕು. ರಾಜ್ಯದ ಭಾವನೆಗಳನ್ನು ಕೇಂದ್ರ ಸರ್ಕಾರ, ಕಾವೇರಿ ನಿರ್ವಹಣಾ ಮಂಡಳಿಗೆ ತಿಳಿಸಬೇಕು ಅಂತ ಒತ್ತಾಯಿಸಿ ಆಗಿದೆ.
ಇನ್ನೂ ರಾಜ್ಯಕ್ಕೆ ಅನ್ಯಾಯ ಮಾಡುತ್ತಿರುವ ನಿರ್ವಹಣಾ ಪ್ರಾಧಿಕಾರವನ್ನು ಕೂಡಲೇ ರದ್ದುಪಡಿಸಬೇಕು. ಒತ್ತಡಗಳಿಗೆ ಮಣಿಯದೇ, ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ನಿರ್ವಹಣಾ ಮಂಡಳಿ ರಚಿಸಬೇಕು. ಚುನಾವಣಾ ಆಯೋಗ ರೀತಿಯಲ್ಲಿ 4 ರಾಜ್ಯಗಳ ತಜ್ಞರು, ರೈತ ಪ್ರತಿನಿಧಿಗಳನ್ನು ಒಳಗೊಂಡ ಮಂಡಳಿ ಸ್ಥಾಪಿಸಬೇಕು ಅಂತ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇಂದು ಬೆಂಗಳೂರು ಬಂದ್ ನಡೆಸಲಾಗುತ್ತಿದೆ.
ಏನಿರುತ್ತೆ.?
ಇಂದಿನ ಬೆಂಗಳೂರು ಬಂದ್ ವೇಳೆಯಲ್ಲಿ ಮೆಟ್ರೋ ರೈಲು, ಬಿಎಂಟಿಸಿ ಬಸ್, ಕೆಎಸ್ ಆರ್ ಟಿಸಿ ಬಸ್ ಸಂಚಾರ ಸಾಮಾನ್ಯವಾಗಿರಲಿದೆ. ದಿನಸಿ, ತರಕಾರಿ ಅಂಗಡಿಗಳು ಓಪನ್ ಇರ್ತಾವೆ.
ಔಷಧಿ ಅಂಗಡಿಗಳು, ಆಸ್ಪತ್ರೆ, ಹೋಟೆಲ್, ಹಾಪ್ ಕಾಮ್ಸ್, ಕೆಲ ಮಾರುಕಟ್ಟೆಗಳು, ಓಲಾ, ಊಬರ್, ಆಟೋ ರಿಕ್ಷಾ ಎಂದಿನಂತೆ ಇರಲಿದೆ.
ಏನಿರಲ್ಲ?
ಇಂದು ಬೆಂಗಳೂರು ಬಂದ್ ಸಂದರ್ಭದಲ್ಲಿ ಶಾಲಾ-ಕಾಲೇಜುಗಳು, ಖಾಸಗಿ ಸಾರಿಗೆ ವಾಹನಗಳು, ಎಪಿಎಂಸಿ, ಆಭರಣ ಮಳಿಗೆಗಳು, ಚಲನಚಿತ್ರ, ಧಾರವಾಹಿ ಚಿತ್ರೀಕರಣ, ಬಿಬಿಎಂಪಿ ಸೇವೆಗಳು ಭಾಗಶಹ ಬಂದ್ ಆಗಲಿವೆ.