ಇತ್ತೀಚಿನ ವರ್ಷಗಳಲ್ಲಿ, ಕ್ರಿಕೆಟ್ ದಿಗಂತದಲ್ಲಿ ಹೊಸ ನಕ್ಷತ್ರವು ಪ್ರಕಾಶಮಾನವಾಗಿ ಹೊಳೆಯುತ್ತಿದೆ ಮತ್ತು ಅವರ ಹೆಸರು ರೋಹಿತ್ ಶರ್ಮಾ.
ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿಶ್ವದಾಖಲೆ ಬರೆದರು. ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಸಿಕ್ಸರ್ ಬಾರಿಸಿದ ಮೊದಲ ಆಟಗಾರರಾಗಿ ಹೊರಹೊಮ್ಮಿದರು.ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ದಿಗ್ಗಜರ ದಾಖಲೆ ಪುಡಿ ಮಾಡಿದ್ದಾರೆ.
ಆಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ ರೋಹಿತ್ ಶರ್ಮಾ , 63 ಎಸೆತದಲ್ಲಿ ಶತಕ ಪೂರೈಸಿದ್ದಾರೆ. ಏಕದಿನದಲ್ಲಿ 31ನೇ ಸೆಂಚುರಿ ದಾಖಲಿಸಿದ ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್, ರಿಕಿ ಪಾಟಿಂಗ್, ಸನತ್ ಜಯಸೂರ್ಯ ಸೇರಿದಂತೆ ಹಲವರ ದಾಖಲೆ ಪುಡಿ ಮಾಡಿದ್ದಾರೆ.
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಸೆಂಚುರಿ ಸಿಡಿಸಿದ ದಾಖಲೆ ಇದೀಗ ರೋಹಿತ್ ಶರ್ಮಾ ಪಾಲಾಗಿದೆ. ರೋಹಿತ್ ಶರ್ಮಾ ಇದೀಗ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 7ನೇ ಸೆಂಚುರಿ ದಾಖಲಿಸಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ 6 ಶತಕದ ಮೂಲಕ ಗರಿಷ್ಠ ಸೆಂಚುರಿ ದಾಖಲೆ ಬರೆದಿದ್ದ ಸಚಿನ್ ತೆಂಡೂಲ್ಕರ್ ಇದೀಗ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಜೊತೆಗೆ . ಇದರ ಜೊತೆಗೆ ವಿಶ್ವಕಪ್ನಲ್ಲಿ ಅತಿ ವೇಗದ 1 ಸಾವಿರ ರನ್ ಪೂರೈಸಿದ ಜಂಟಿ ಅಗ್ರ ಆಟಗಾರ ಖ್ಯಾತಿಗೂ ಪಾತ್ರರಾದರು.
ರೋಹಿತ್ ಬ್ಯಾಟ್ನಿಂದ ಮೂರು ಪ್ರಕಾರದ ಕ್ರಿಕೆಟ್ನಲ್ಲಿ (ಟೆಸ್ಟ್, ಏಕದಿನ, ಟಿ20) ಈವರೆಗೂ 556 ಸಿಕ್ಸರ್ ಸಿಡಿದಿವೆ. ಕ್ರಿಸ್ಗೇಲ್ 553 ಸಿಕ್ಸರ್ ಬಾರಿಸಿದ್ದರು.ಅಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಸಿಕ್ಸರ್ಗಳನ್ನು ಬಾರಿಸುವ ಮೂಲಕ ದಾಖಲೆ ಸೃಷ್ಟಿಸಿದರು.
ರೋಹಿತ್ ಶರ್ಮಾ 473 ಇನ್ನಿಂಗ್ಸ್ ಮೂಲಕ 556 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಇದಕ್ಕೂ ಮೊದಲು 200, 400 ಮತ್ತು 500 ಸಿಕ್ಸರ್ಗಳನ್ನು ಬಾರಿಸಿದ ವೇಗದ ಬ್ಯಾಟರ್ ಆಗಿದ್ದರು. 300 ಸಿಕ್ಸರ್ಗಳನ್ನು ಬಾರಿಸಿದ ಎರಡನೇ ವೇಗದ ಬ್ಯಾಟರ್ ಕೂಡ ರೋಹಿತ್ ಆಗಿದ್ದಾರೆ.