ಇತ್ತೀಚೆಗೆ ನಡೆದ ಭೀಕರ ಬೆಂಕಿಯಲ್ಲಿ 18 ಬಸ್ಸುಗಳು ಬೂದಿಯಾದ ಘಟನೆ ಮತ್ತೊಮ್ಮೆ ನಮ್ಮ ನಗರವನ್ನು ಬೆಚ್ಚಿಬೀಳಿಸಿದೆ. ಈ ಘಟನೆಗಳು ಅಗ್ನಿ ಸುರಕ್ಷತಾ ಕ್ರಮಗಳ ಪ್ರಾಮುಖ್ಯತೆ ಮತ್ತು ಅಂತಹ ವಿನಾಶಕಾರಿ ಘಟನೆಗಳನ್ನು ತಡೆಗಟ್ಟಲು ಸಾಮೂಹಿಕ ಪ್ರಯತ್ನಗಳ ಅಗತ್ಯತೆಯ ಸಂಪೂರ್ಣ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತವೆ.
ರಾಜ್ಯ ರಾಜಧಾನಿಯಲ್ಲಿ ಸೋಮವಾರ (ಅ 30) ಮತ್ತೊಂದು ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಹೊಸಕೆರೆ ಹಳ್ಳಿಯ ವೀರಭದ್ರ ನಗರದಲ್ಲಿರುವ ಗ್ಯಾರೇಜ್ ನಲ್ಲಿ ಬೆಂಕಿ ಹೊತ್ತಿಕೊಂಡು ದುರಸ್ತಿಗೆಂದು ಇಟ್ಟಿದ್ದ ಸುಮಾರು 18 ಕ್ಕೂ ಬಸ್ ಗಳು ಸುಟ್ಟು ಭಸ್ಮವಾಗಿವೆ.
10 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಲು ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದವು. ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ.
ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ, ಆದರೆ ಶಾರ್ಟ್ ಸರ್ಕ್ಯೂಟ್ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಬಸ್ ಡಿಪೋ ಹತ್ತಿರವೇ ಗ್ಯಾರೇಜ್ ಕೆಲಸ ಮಾಡಲಾಗುತ್ತಿತ್ತು.
“ನಾವು ಇದನ್ನು ನಿರ್ಲಕ್ಷ್ಯ ಎಂದು ಕರೆಯಲಾಗುವುದಿಲ್ಲ. ಅವರೆಲ್ಲರೂ ವೆಲ್ಡಿಂಗ್ ಮತ್ತು ವೈರಿಂಗ್ ಕೆಲಸ ಮಾಡುವ ಕಾರ್ಮಿಕರು, ಎಲ್ಲವೂ ಸುಟ್ಟುಹೋಗಿರುವ ಕಾರಣ, ಸದ್ಯಕ್ಕೆ ನಾವು ಬೆಂಕಿಯ ಮೂಲದ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಪೆಟ್ರೋಲಿಯಂ ಉತ್ಪನ್ನಗಳಿಂದ ತಯಾರಿಸಿದ ಬಹಳಷ್ಟು ವಸ್ತುಗಳು ಇವೆ. ಇವೆಲ್ಲವೂ ಸುಲಭವಾಗಿ ಬೆಂಕಿಗೆ ಆಹುತಿಯಾಗುತ್ತವೆ. ಡಿಪೋದಲ್ಲಿ ಅಗ್ನಿಶಾಮಕಗಳನ್ನು ಇಡಬೇಕಿತ್ತು. ಮಾಲಕರಿಗೆ ಅರಿವಿನ ಕೊರತೆಯಿದೆ” ಎಂದು ಉನ್ನತ ಅಗ್ನಿ ಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಗ್ನಿ ಅವಘಡದಲ್ಲಿ ಖಾಸಗಿ ಬಸ್ ಗಳು ಸುತ್ತು ಹೋಗಿದ್ದು ಕೋಟ್ಯಂತರ ರೂ. ನಷ್ಟ ಅಂದಾಜಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಡಿಸಿಎಂ, ಸಚಿವ ಭೇಟಿ
ಅಗ್ನಿ ಅವಘಡ ನಡೆದ ಸ್ಥಳಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ರಾಮಲಿಂಗಾ ರೆಡ್ಡಿ ಅವರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.