ಈರುಳ್ಳಿ ಬೆಲೆ ಕೆಲವು ದೇಶಗಳಲ್ಲಿ ಗ್ರಾಹಕರನ್ನು ಚಿಂತೆಗೀಡು ಮಾಡಿದೆ. ಈ ಅತ್ಯಗತ್ಯ ಅಡಿಗೆ ಪದಾರ್ಥವು ಪ್ರಪಂಚದಾದ್ಯಂತದ ವಿವಿಧ ಪಾಕಪದ್ಧತಿಗಳಲ್ಲಿ ಪ್ರಧಾನವಾಗಿದೆ, ಆದರೆ ಅದರ ಬೆಲೆಗಳಲ್ಲಿನ ಏರಿಳಿತಗಳು ಮನೆಯ ಬಜೆಟ್‌ಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ. ಇತ್ತೀಚೆಗಷ್ಟೇ ಈರುಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದ್ದು, ಹೆಚ್ಚುತ್ತಿರುವ ಬೆಲೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ನೆಮ್ಮದಿಯ ಸುದ್ದಿಯಾಗಿದೆ.
ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಮೂರು ದಿನದಿಂದ ಯಶವಂತಪುರ ಎಪಿಎಂಸಿಗೆ ಈರುಳ್ಳಿ ಪೂರೈಕೆ ಹೆಚ್ಚಾಗಿದ್ದು, ಏರುಗತಿಯಲ್ಲಿದ್ದ ಈರುಳ್ಳಿ ಬೆಲೆ ಕೊಂಚ ಕಡಿಮೆಯಾಗಿದೆ. ಈರುಳ್ಳಿ ಪೂರೈಕೆ ಇದೇ ರೀತಿ ಮುಂದುವರೆದರೆ ಮೂರ್ನಾಲ್ಕು ದಿನಗಳಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿಯೂ ಈರುಳ್ಳಿ ದರ ಕಡಿಮೆಯಾಗಲಿದೆ.
ಇನ್ನು ಓದಿ : 13 ಜಿಲ್ಲೆಗಳಲ್ಲಿ ಏರಿಕೆ ಕಂಡ ಪೆಟ್ರೋಲ್ ದರ! ಗ್ರಾಹಕರಿಗೆ ಜೇಬಿಗೆ ಮತ್ತೆ ಕತ್ತರಿ!
ಕಳೆದ ಒಂದು ತಿಂಗಳಿಂದ ಯಶವಂತಪುರ ಎಪಿಎಂಸಿಗೆ 50 ಕೆಜಿಯ ಸುಮಾರು 60 ಸಾವಿರ ಚೀಲ ಬರುತ್ತಿತ್ತು. ಹೀಗಾಗಿ ಈರುಳ್ಳಿ ಸಗಟು ದರ ಕೆಜಿಗೆ 60 ರಿಂದ 70 ರೂಪಾಯಿವರೆಗೆ ಏರಿಕೆಯಾಗಿತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ದರ 100 ರೂ ದಾಟಿತ್ತು.
ಕಳೆದ ಮೂರು ನಾಲ್ಕು ದಿನಗಳಿಂದ ಈರುಳ್ಳಿ ಪೂರೈಕೆ ಹೆಚ್ಚಾಗಿದೆ. ಸುಮಾರು 80,000 ಚೀಲ ಮಾರುಕಟ್ಟೆಗೆ ಬರುತ್ತಿದ್ದು, ಸಗಟು ದರ ಕೆಜಿಗೆ 50 ರಿಂದ 55 ರೂ. ಆಗಿದೆ. ನಿರಂತರವಾಗಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆ ಆದಲ್ಲಿ ಮೂರ್ನಾಲ್ಕು ದಿನಗಳಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿಯೂ ದರ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ.