ಕೆಲವು ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ನಿರ್ಧಾರ ತೀವ್ರ ಕಳವಳಕಾರಿಯಾಗಿದೆ. ನಿರ್ದಿಷ್ಟ ಸಂದರ್ಭಗಳಲ್ಲಿ ಇದು ಅಗತ್ಯವಾಗಬಹುದು, ಈ ಕ್ರಿಯೆಯನ್ನು ಎಚ್ಚರಿಕೆಯಿಂದ ಮತ್ತು ಸೂಕ್ಷ್ಮತೆಯಿಂದ ಸಮೀಪಿಸುವುದು ಅತ್ಯಗತ್ಯ.
ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಈಗಾಗಲೇ ನಾಲ್ಕು ಅನುಷ್ಠಾನಗೊಂಡಿದೆ. ಇನ್ನು ಒಂದು ಯೋಜನೆ ಅನುಷ್ಠಾನ ಬಾಕಿ ಇದೆ. ಇನ್ನೇನು ಕೆಲವೇ ದಿನಗಳಲ್ಲಿ ನಿರುದ್ಯೋಗ ಭತ್ಯೆ ಯೋಜನೆಯಾದ ಯುವ ನಿಧಿ ಕೂಡ ಯಾರಿಗೆ ಬರಲಿದೆ.
ಇನ್ನು ಎರಡನೇದಾಗಿ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳಲ್ಲಿ Gruha jyothi ಯೋಜನೆ ಜಾರಿಯಾಗಿತ್ತು. ಜುಲೈ ನಿಂದ ರಾಜ್ಯದ ಜನತೆ ಉಚಿತ ವಿದ್ಯುತ್ ನ ಲಾಭ ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಘೋಷಣೆ ಹೊರಡಿಸಿತ್ತು. ಸದ್ಯ ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ವಿದ್ಯುತ್ ಇಲಾಖೆಯಿಂದ ಜನರಿಗೆ ಸೂಚನೆ ನೀಡಲಾಗಿದೆ.
ಉಚಿತ ಕರೆಂಟ್ ಖುಷಿಯಲ್ಲಿ ಕರೆಂಟ್ ಬಿಲ್ ಕಟ್ಟಲು ಮರೆತ ಜನ
ಇನ್ನು ಗೃಹ ಜ್ಯೋತಿ ಯೋಜನೆಯಡಿ ರಾಜ್ಯದ ಜನತೆ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ, ಆದರೆ ನಿಗದಿತ ಯೂನಿಟ್ ಗಿಂತ ಹೆಚ್ಚಾಗಿ ವಿದ್ಯುತ್ ಅನ್ನು ಬಳಕೆ ಮಾಡುತ್ತಿದ್ದರೆ ಅಂತವರು ಹೆಚ್ಚುವರಿ ಕರೆಂಟ್ ಬಿಲ್ ಅನ್ನು ಪಾವತಿಸಬೇಕಾಗುತ್ತದೆ. ಹೆಚ್ಚುವರಿಯಾಗಿ ಬಳಕೆ ಮಾಡಿರುವ ವಿದ್ಯುತ್ ಗೆ ಇಲಾಖೆ ಕರೆಂಟ್ ಬಿಲ್ ಅನ್ನು ನೀಡುತ್ತಿದೆ. ಆದರೆ ಉಚಿತ ವಿದ್ಯುತ್ ಪಡೆಯುವ ಖುಷಿಯಲ್ಲಿದ್ದ ಜನರು ಹೆಚ್ಚುವರಿ ಕರೆಂಟ್ ಬಿಲ್ ಕಟ್ಟುವುದನ್ನು ಮರೆತಿದ್ದಾರೆ.
ಇನ್ನು ಓದಿ : ಕೇಂದ್ರ ಸರ್ಕಾರದಿಂದ ಸಿಗಲಿದೆ ಪ್ರತಿ ಮನೆಗೆ ಫ್ಯಾನ್ ಮತ್ತು ಅಡುಗೆ ಮಾಡಲು ಇಂಡಕ್ಷನ್, ಕೇಂದ್ರದ ಘೋಷಣೆ.
ಬಿಲ್ ಕಟ್ಟದ ಜನರಿಗೆ ಬೆಸ್ಕಾಂನಿಂದ ಎಚ್ಚರಿಕೆ
ಸದ್ಯ ರಾಜ್ಯದಲ್ಲಿ ಜನರು ಹೆಚ್ಚುವರಿ ವಿದ್ಯುತ್ ಬಿಲ್ ಪಾವತಿಯನ್ನು ಬಾಕಿ ಇಟ್ಟುಕೊಂಡಿರುವುದರಿಂದ BESCOM ಗೆ ನೂರಾರು ಕೋಟಿ ಬಿಲ್ ಪಾವತಿ ಬಾಕಿ ಇದೆ. ಗೃಹ ಜ್ಯೋತಿ ಆರಂಭವಾದಾಗಿನಿಂದ ಜನರು ಬಾಕಿ ಬಿಲ್ ಪಾವತಿ ಮಾಡುತ್ತಿಲ್ಲ ಎನ್ನಬಹುದು. ಬೆಸ್ಕಾಂ ವ್ಯಾಪ್ತಿಯಲ್ಲಿನ 10.55 ಲಕ್ಷ ಜನರು ಬಿಲ್ ಪಾವತಿಯನ್ನು ಮಾಡುತ್ತಿಲ್ಲ.
ಇದರಿಂದಾಗಿ ಬೆಸ್ಕಾಂ ಗೆ 147 ಕೋಟಿ ರೂ. ಹೊರೆಯಾಗಿದೆ. ಹೀಗಾಗಿ ಹೆಚ್ಚುವರಿ ವಿದ್ಯುತ್ ಬಿಲ್ ಪಾವತಿ ಬಾಕಿ ಇರುವವರ ಕರೆಂಟ್ ಕನೆಕ್ಷನ್ ಅನ್ನು ಕಟ್ ಮಾಡಲು ಬೆಸ್ಕಾಂ ನಿರ್ಧರಿಸಿದೆ. ನಿಗದಿತ ಸಮಯದೊಳಗೆ ಬಿಲ್ ಪಾವತಿ ಮಾಡಲು ಬೆಸ್ಕಾಂ ಜನರಿಗೆ ಎಚ್ಚರಿಕೆ ನೀಡಿದೆ. ನಿಮ್ಮ ಮನೆಯ ವಿದ್ಯುತ್ ಬಿಲ್ ಪಾವತಿ ಬಾಕಿ ಇದ್ದರೆ ಇಂದೇ ಬಿಲ್ ಪಾವತಿ ಪೂರ್ಣಗೊಳಿಸಿ. ಇಲ್ಲವಾದರೆ ನೀವು ಉಚಿತ ವಿದ್ಯುತ್ ನಿಂದ ವಂಚಿತರಬೇಕಾಗುತ್ತದೆ.