ಪರಿಸರ ಸಂರಕ್ಷಣೆಯತ್ತ ಒಂದು ದಿಟ್ಟ ಹೆಜ್ಜೆಯಲ್ಲಿ, ಸರ್ಕಾರವು ಇತ್ತೀಚೆಗೆ ರಸ್ತೆಗಳಿಂದ ಹೆಚ್ಚು ಹೊರಸೂಸುವ ಕಾರುಗಳನ್ನು ನಿಷೇಧಿಸಲು ನಿರ್ಧರಿಸುವ ಮೂಲಕ ಮಹತ್ವದ ಹೆಜ್ಜೆಯನ್ನು ತೆಗೆದುಕೊಂಡಿದೆ. ಉಲ್ಲಂಘಿಸುವವರಿಗೆ ₹ 20,000 ದಂಡ ವಿಧಿಸಲಾಗುತ್ತದೆ, ಈ ಉಪಕ್ರಮವು ವಾಹನ ಮಾಲಿನ್ಯದ ದುಷ್ಪರಿಣಾಮಗಳನ್ನು ತಗ್ಗಿಸಲು ಮತ್ತು ಸ್ವಚ್ಛ, ಆರೋಗ್ಯಕರ ಪರಿಸರಕ್ಕೆ ದಾರಿ ಮಾಡಿಕೊಡುವ ಗುರಿಯನ್ನು ಹೊಂದಿದೆ. ಈ ನಿಷೇಧದ ಪರಿಣಾಮಗಳು, ಅದರ ಹಿಂದಿನ ಕಾರಣಗಳು ಮತ್ತು ಗಾಳಿಯ ಗುಣಮಟ್ಟ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಅದರ ಸಂಭಾವ್ಯ ಪ್ರಭಾವವನ್ನು ಪರಿಶೋಧಿಸುತ್ತದೆ.
ದೇಶದಲ್ಲಿ ವಾಹನಗಳಿಗೆ ಸಂಬಂಧಿಸಿದಂತೆ ಅನೇಕ ನಿಯಮಗಳು ಬದಲಾಗುತ್ತ ಇರುತ್ತವೆ. ವಾಹನ ಸವಾರರ ಸುರಕ್ಷತೆಗಾಗಿ ಸರ್ಕಾರ ವಿವಿಧ ನಿಯಮವನ್ನು ಪರಿಚಯಿಸಿದೆ.
ಇನ್ನು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಹಳೆಯ ವಾಹನಗಳ ನೋಂದಣಿ, ವಾಹನಗಳ ನಂಬರ್ ಪ್ಲೇಟ್ ಸೇರಿದಂತೆ ಅನೇಕ ಹೊಸ ಹೊಸ ನಿಯಮವನ್ನು ಜಾರಿಗೆ ತಂದಿದೆ. ಸರ್ಕಾರ ಪರಿಚಯಿಸಿರುವ ಹೊಸ ನಿಯಮದ ಬಗ್ಗೆ ವಾಹನ ಮಾಲೀಕರಿಗೆ ಸರ್ಕಾರ ಆಗಾಗ ಎಚ್ಚರಿಕೆ ನೀಡುತ್ತಿದೆ. ಸದ್ಯ ಸರ್ಕಾರ ಇಂತಹ ಕಾರ್ ಗಳನ್ನೂ ಬ್ಯಾನ್ ಮಾಡಲು ನಿರ್ಧಾರ ಮಾಡಿದೆ.
ಇಂತಹ ಕಾರುಗಳನ್ನ ಬ್ಯಾನ್ ಮಾಡಲು ನಿರ್ಧಾರ ಮಾಡಿದ ಸರ್ಕಾರ
ಇದೀಗ ದೆಹಲಿ ಸರ್ಕಾರ ರಸ್ತೆಗಳಲ್ಲಿ ಸಂಚರಿಸುತ್ತಿರುವ ವಾಹನಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಹೊಸ ನಿಯಮದ ಬಗ್ಗೆ ದೆಹಲಿ ಸರ್ಕಾರ ರಾಜ್ಯದ ಜನತೆಗೆ ಆದೇಶ ನೀಡಿದೆ. ದೆಹಲಿ ಸರ್ಕಾರ BS3 ಮತ್ತು BS4 ಮಾನದಂಡಗಳ ವಾಹನಗಳನ್ನು ನಿಷೇಧಿಸಲು ಚಿಂತನೆ ನಡೆಸಿದೆ. ಈ ಎಂಜಿನ್ ಹೊಂದಿರುವ ವಾಹನಗಳು ರಸ್ತೆಯಲ್ಲಿ ಓಡುವುದನ್ನು ಕಂಡರೆ ತಕ್ಷಣವೇ ದಂಡ ವಿಧಿಸಲಾಗುತ್ತದೆ ಎಂದು ವಾಹನ ಮಾಲೀಕರಿಗೆ ದೆಹಲಿ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇದರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳು ಸೇರಿವೆ.
ಇಂತಹ ವಾಹನವನ್ನು ರಸ್ತೆಗೆ ತಂದರೆ 20,000 ರೂ. ದಂಡ ಖಚಿತ
ಜನರ ಆರೋಗ್ಯದ ಮೇಲೆ ಮಾಲಿನ್ಯದ ಪರಿಣಾಮವನ್ನು ತಡೆಯಲು ಮುಖ್ಯವಾಗಿ ವಾತಾವರಣವನ್ನು ಸ್ವಚ್ಛವಾಗಿರಿಸಿಕೊಳ್ಳಲು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ದೆಹಲಿಯಲ್ಲಿ ಮಾಲಿನ್ಯದ ಮಟ್ಟ ಗಣನೀಯವಾಗಿ ಹದೆಗೆಟ್ಟಿದೆ. ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಕಾರಣ CAQM ದೆಹಲಿ NCR ನಲ್ಲಿ GRAP-3 ನಿಯಮಗಳನ್ನು ಜಾರಿಗೆ ತಂದಿದೆ. ಮುಂದಿನ ದಿನಗಳಲ್ಲಿ ಈ ನಿಯಮ ಬೆಂಗಳೂರಿನಲ್ಲಿ ಕೂಡ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದರ ಅಡಿಯಲ್ಲಿ, ತುರ್ತು ಸೇವೆಗಳು, ಸರ್ಕಾರಿ ನಿರ್ಮಾಣ ಕಾರ್ಯಗಳು ಮತ್ತು ಕಾರ್ಯತಂತ್ರದ ಪ್ರಾಮುಖ್ಯತೆಯ ನಿರ್ಮಾಣ ಕಾರ್ಯಗಳನ್ನು ಹೊರತುಪಡಿಸಿ ದೆಹಲಿ NCR ನಲ್ಲಿ ಎಲ್ಲಾ ರೀತಿಯ ನಿರ್ಮಾಣ ಮತ್ತು ಉರುಳಿಸುವಿಕೆಯ ಮೇಲೆ ಸಂಪೂರ್ಣ ನಿಷೇಧವನ್ನು ವಿಧಿಸಿದೆ. ನೀವು BS3 ಅಥವಾ BS4 ವಾಹನವನ್ನು ಹೊಂದಿದ್ದರೆ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ನಿಯಮ ಉಲ್ಲಂಘನೆಯಾದರೆ 20,000 ರೂ. ದಂಡ ವಿಧಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.