ನಮ್ಮ ರಾಷ್ಟ್ರದ ಬೆನ್ನೆಲುಬನ್ನು ಬೆಂಬಲಿಸುವ ಮಹತ್ವದ ಕ್ರಮದಲ್ಲಿ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿಯಲ್ಲಿ ಆರ್ಥಿಕ ಸಹಾಯವನ್ನು ಹೆಚ್ಚಿಸುವ ಮೂಲಕ ಭಾರತ ಸರ್ಕಾರವು ಶ್ಲಾಘನೀಯ ಹೆಜ್ಜೆಯನ್ನು ತೆಗೆದುಕೊಂಡಿದೆ. ನೆರವಿನ ಮೊತ್ತವನ್ನು 12,000 ರೂ.ಗೆ ಏರಿಸುವುದಾಗಿ ಘೋಷಿಸಿರುವುದು ರೈತರ ಮತ್ತು ಕೃಷಿ ಕ್ಷೇತ್ರದ ಕಲ್ಯಾಣಕ್ಕೆ ಸರಕಾರ ಬದ್ಧವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನವೆಂಬರ್ 15 ರ ಬುಧವಾರದಂದು ಸುಮಾರು 8.5 ಕೋಟಿ ಅರ್ಹ ರೈತರಿಗೆ 18,000 ಕೋಟಿ ರೂಪಾಯಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15 ನೇ ಕಂತನ್ನು ಬಿಡುಗಡೆ ಮಾಡಿದರು. ಈಗ ಪಿಎಂ ಕಿಸಾನ್ ಫಲಾನುಭವಿಗಳಿಗೆ ಕಂತಿನ ಮೊತ್ತವನ್ನು ಹೆಚ್ಚಿಸುವ ಘೋಷಣೆಯನ್ನು ಮಾಡಿದ್ದಾರೆ.
ಹೌದು, ಪಿಎಂ ಕಿಸಾನ್ ಯೋಜನೆಯಡಿಯಲ್ಲಿ, ಅರ್ಹ ರೈತರು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂಪಾಯಿಗಳನ್ನು ಪಡೆಯಬಹುದಾಗಿದೆ. ಅಂದರೆ ವಾರ್ಷಿಕವಾಗಿ ಒಟ್ಟಾಗಿ 6,000 ರೂಪಾಯಿ ಹಣವನ್ನು ಪ್ರತಿ ವರ್ಷ ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಆದರೆ ಈ ಮೊತ್ತವನ್ನು 12 ಸಾವಿರ ರೂಪಾಯಿಗೆ ಏರಿಸಲಾಗುತ್ತದೆ. ಆದರೆ ಈ ಒಂದು ರಾಜ್ಯದ ರೈತರಿಗೆ ಮಾತ್ರ ಇದು ಅನ್ವಯವಾಗುತ್ತದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ…
ಯಾವ ರಾಜ್ಯದ ರೈತರಿಗೆ ಅನ್ವಯ?
ರಾಜಸ್ಥಾನದಲ್ಲಿ ರಾಜಕೀಯ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಿರುವ ರಾಜಸ್ಥಾನದ ರೈತರಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ. ರಾಜ್ಯ ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ರೈತರಿಗೆ ವರ್ಷಕ್ಕೆ 12,000 ರೂಪಾಯಿ ನೀಡಲಿದೆ ಎಂದು ಪ್ರಧಾನಿ ಮೋದಿ ರಾಜಸ್ಥಾನದ ರೈತರಿಗೆ ತಿಳಿಸಿದ್ದಾರೆ.
ರಾಜಸ್ಥಾನದ ಹನುಮಾನ್ಗಢದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರೈತರಿಗೆ ಮೋಸ ಮಾಡಿದವರನ್ನು ಬಿಡಲಾಗುವುದಿಲ್ಲ. ರಾಜಸ್ಥಾನ ಬಿಜೆಪಿಯು ರೈತರಿಂದ ಎಂಎಸ್ಪಿ ಮೇಲೆ ಬೆಳೆಗಳನ್ನು ಖರೀದಿಸಲು ನಿರ್ಧರಿಸಿದೆ. ಇದು ಮಾತ್ರವಲ್ಲದೆ ಪಕ್ಷ ಅಧಿಕಾರಕ್ಕೆ ಬಂದರೆ ಬೋನಸ್ ಅನ್ನು ರೈತರಿಗೂ ಸಹ ನೀಡಲಾಗುವುದು ಎಂದು ಹೇಳಿದರು.
“ಇನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೂಲಕ ರೈತರಿಗೆ ಈ ಹಿಂದೆ ವಾರ್ಷಿಕವಾಗಿ ಆರು ಸಾವಿರ ರೂಪಾಯಿ ನೀಡಲಾಗುತ್ತಿತ್ತು. ಆದರೆ ಈ ಮೊತ್ತವನ್ನು ಹನ್ನೆರಡು ಸಾವಿರ ರೂಪಾಯಿಗೆ ಏರಿಸಲು ರಾಜಸ್ಥಾನ ಬಿಜೆಪಿ ನಿರ್ಧರಿಸಿದೆ,” ಎಂದು ಪ್ರಧಾನಿ ಮೋದಿ ಹೇಳಿದರು. ಪ್ರಧಾನಿ ಮೋದಿ ಮತ್ತೊಂದು ಭರವಸೆ ನೀಡಿದ್ದು, ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ರಚಿಸಿದರೆ ಇಂಧನ ಬೆಲೆಗಳನ್ನು ಪರಿಷ್ಕರಿಸಲಾಗುವುದು ಎಂದು ಹೇಳಿದರು.
ಖಾತೆಗೆ ಹಣ ಬಂದಿದೆಯೇ ಚೆಕ್ ಮಾಡಿ
ಹಂತ 1: ಮೊದಲು PM ಕಿಸಾನ್ ವೆಬ್ಸೈಟ್ pmkisan.gov.in ಗೆ ಭೇಟಿ ನೀಡಿ
ಹಂತ 2: ಬಲ ಭಾಗದಲ್ಲಿರುವ Know Your Status ಮೇಲೆ ಕ್ಲಿಕ್ ಮಾಡಿಕೊಳ್ಳಿ.
ಹಂತ 3: ನಿಮ್ಮ ರಿಜಿಸ್ಟ್ರೇಷನ್ ಸಂಖ್ಯೆಯನ್ನು, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ, Get Data ಎಂಬುವುದನ್ನು ಆಯ್ಕೆ ಮಾಡಿ
ಹಂತ 4: ಬಳಿಕ ಸ್ಟೇಟಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ
ಏನಿದು ಪಿಎಂ ಕಿಸಾನ್ ಯೋಜನೆ?
ಅರ್ಹ ರೈತರು ಪಿಎಂ ಕಿಸಾನ್ ಯೋಜನೆಯಡಿಯಲ್ಲಿ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ಎರಡು ಸಾವಿಯ ರೂಪಾಯಿಗಳನ್ನು ಪಡೆಯಬಹುದಾಗಿದೆ. ಅಂದರೆ ವಾರ್ಷಿಕವಾಗಿ ಒಟ್ಟಾಗಿ ರೈತರು ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಆರು ಸಾವಿರ ರೂಪಾಯಿ ಹಣವನ್ನು ಪಡೆಯಬಹುದು. ಪ್ರತಿ ವರ್ಷ ಮೂರು ಕಂತುಗಳಲ್ಲಿ ಈ ಹಣವನ್ನು ನೀಡಲಾಗುತ್ತದೆ.
ಸಾಮಾನ್ಯವಾಗಿ ಈ ಮೂರು ಕಂತುಗಳಲ್ಲಿ ಮೊದಲ ಕಂತನ್ನು ಏಪ್ರಿಲ್-ಜುಲೈ ನಡುವೆ, ಎರಡನೇ ಕಂತನ್ನು ಆಗಸ್ಟ್-ನವೆಂಬರ್ ನಡುವೆ ಮತ್ತು ಮೂರನೇ ಕಂತನ್ನು ಡಿಸೆಂಬರ್-ಮಾರ್ಚ್ ನಡುವೆ ಜಮೆ ಮಾಡಲಾಗುತ್ತದೆ. ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಈ ಯೋಜನೆಯನ್ನು ಫೆಬ್ರವರಿ 2019 ರಲ್ಲಿ ಪ್ರಾರಂಭಿಸಲಾಯಿತು.