rtgh

ರಾಜ್ಯ ಸರ್ಕಾರದಿಂದ ಜನತೆಗೆ ‘ಬಿಗ್ ಶಾಕ್’: ಜನನ, ಮರಣ ನೋಂದಣಿ `ವಿಳಂಬ ಶುಲ್ಕ’ ಹೆಚ್ಚಿಸಿ ಅಧಿಕೃತ ಆದೇಶ.


ಜನನ ಮತ್ತು ಮರಣ ನೋಂದಣಿ ವಿಳಂಬ ಶುಲ್ಕವನ್ನು ಹೆಚ್ಚಿಸುವ ರಾಜ್ಯ ಸರ್ಕಾರದ ವಿವಾದಾತ್ಮಕ ನಿರ್ಧಾರದ ವಿರುದ್ಧ ಸಾರ್ವಜನಿಕ ಆಕ್ರೋಶ

ನಾಗರಿಕರಲ್ಲಿ ವ್ಯಾಪಕ ಕಳವಳವನ್ನು ಉಂಟುಮಾಡಿದ ಕ್ರಮದಲ್ಲಿ, ಜನನ ಮತ್ತು ಮರಣ ನೋಂದಣಿಯ ವಿಳಂಬ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸುವ ಆದೇಶವನ್ನು ರಾಜ್ಯ ಸರ್ಕಾರವು ಅಧಿಕೃತವಾಗಿ ಹೊರಡಿಸಿದೆ. ಈ ನಿರ್ಧಾರವು ತಕ್ಷಣವೇ ಜಾರಿಗೆ ಬರುತ್ತದೆ, ಈ ನಿರ್ಣಾಯಕ ಜೀವನದ ಘಟನೆಗಳನ್ನು ನಿಗದಿತ ಸಮಯದ ಚೌಕಟ್ಟಿನೊಳಗೆ ನೋಂದಾಯಿಸಲು ವಿಫಲರಾದ ವ್ಯಕ್ತಿಗಳ ಮೇಲೆ ಭಾರೀ ಆರ್ಥಿಕ ಹೊರೆಯನ್ನು ಹೇರುತ್ತದೆ.

state government to increase the birth and death registration delay fee
state government to increase the birth and death registration delay fee

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದಂತ ಜನತೆಗೆ, ರಾಜ್ಯ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಅದೇ ಜನನ, ಮರಣ ನೋಂದಣಿ ವಿಳಂಬ ಶುಲ್ಕವನ್ನು ಹೆಚ್ಚಿಸಿ, ಅಧಿಕೃತ ಆದೇಶ ಹೊರಡಿಸಿದೆ.

ಈ ಕುರಿತಂತೆ ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿಗಳು ಹಾಗೂ ಪ್ರಭಾರ ನಿರ್ದೇಶಕರು ಎಲ್ಲಾ ಜಿಲ್ಲಾಧಿಕಾರಿಗಳು, ಜನನ, ಮರಣ ನೋಂದಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಆ ಪತ್ರದಲ್ಲಿ ಭಾರತ ಸರ್ಕಾರದ ಜನನ, ಮರಣಗಳ ನೋಂದಣಿ (ತಿದ್ದುಪಡಿ) ಅಧಿನಿಯಮ 2023ಕ್ಕೆ ಅನುಗುಣವಾಗಿ ಕರ್ನಾಟಕ ಜನನ, ಮರಣಗಳ ನೋಂದಣಿ ನಿಯಮ 9ಕ್ಕೆ, ತಿದ್ದುಪಡಿ ಮಾಡಿ, ಕರ್ನಾಟಕ ಜನನ, ಮರಣ ನೋಂದಣಿ ನಿಯಮಗಳು 2023 ರನ್ನು ಉಲ್ಲೇಖ (2) ಅಧಿಸೂಚನೆಯಲ್ಲಿ ಹೊರಡಿಸಲಾಗಿದೆ ಎಂದಿದ್ದಾರೆ.

ಈ ಅಧಿಸೂಚನೆಯನ್ವಯ ಒಂದು ವರ್ಷದ ನಂತರ ನೋಂದಾಯಿಸುವ ಜನನ, ಮರಣ ಘಟನೆಗಳಿಗೆ ಮೊದಲನೇ ವರ್ಗದ ದಂಡಾಧಿಕಾರಿ ಅಥವಾ ಮಹಾಪ್ರಾಂತ ದಂಡಾಧಿಕಾರಿಯ (Presidency Magistrate) ಆದೇಶದ ಬದಲಿಗೆ ಇನ್ನು ಮುಂದೆ ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿ (Assistant Commissioner) ರವರ ಆದೇಶವನ್ನು ಪಡೆಯುವ ಬಗ್ಗೆ ಹಾಗೂ ವಿಳಂಬ ಶುಲ್ಕವನ್ನು ಕ್ರಮವಾಗಿ ನಿಯಮ 9(1), 9(2) ಮತ್ತು 9(3)ಕ್ಕೆ ರೂ.100/-, ರೂ.200/- ಮತ್ತು ರೂ.500/- ಗಳಿಗೆ ಪರಿಷ್ಕರಿಸಲಾಗಿದೆ. ಸದರಿ ಅಧಿಸೂಚನೆಯ ಪ್ರತಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದ್ದು, ತಮ್ಮ ಅವಗಾಹನ ಮತ್ತು ಮುಂದಿನ ಕ್ರಮಕ್ಕಾಗಿ ಸಲ್ಲಿಸಿದೆ ಎಂದು ಹೇಳಿದ್ದಾರೆ.

ಹೀಗಿದೆ ಅಧಿಕೃತ ಆದೇಶದಂತೆ ಜನನ, ಮರಣಿ ನೋಂದಣಿಯ ವಿಳಂಬ ಶುಲ್ಕದ ವಿವರ

-ಜನನ, ಮರಣ ಘಟಿಸಿದ 21 ದಿನಗಳ ನಂತ್ರ ಹಾಗೂ 30 ದಿನಗಳೊಳಗಾಗಿ ನೋಂದಾಯಿಸುವ ವಿಳಂಬ ನೋಂದಣಿ ಹಾಲಿ ಶುಲ್ಕ ರೂ.2ರಿಂದ ರೂ.100ಕ್ಕೆ ಹೆಚ್ಚಳ ಮಾಡಲಾಗಿದೆ.

-ಜನನ, ಮರಣ ಘಟಿಸಿದ 30 ದಿನಗಳ ನಂತ್ರ ಹಾಗೂ 1 ವರ್ಷದ ಒಳಗಾಗಿ ನೋಂದಾಯಿಸುವ ವಿಳಂಬ ನೋಂದಣಿ ಶುಲ್ಕವನ್ನು ರೂ.5 ರಿಂದ 200ಕ್ಕೆ ಹೆಚ್ಚಿಸಲಾಗಿದೆ.

-ಜನನ, ಮರಣ ಘಟಿಸಿದ 1 ವರ್ಷದ ನಂತ್ರದ ವಿಳಂಬ ನೋಂದಣಿ ಶುಲ್ಕವನ್ನು ಹಾಲಿ ಇರುವ ರೂ.10ರಿಂದ ರೂ.500ಕ್ಕೆ ಪರಿಷ್ಕರಿಸಲಾಗಿದೆ.

ಅಂದಹಾಗೇ ನ.9ರಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಜನನ, ಮರಣ ನೋಂದಣಿ ( Registration of Births and Deaths ) ನಿಯಮಗಳು 1999ರ ನಿಯಮಗಳ ಪ್ರಕಾರ ವಿಳಂಬ ನೋಂದಣಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಹಾಲಿ ಪಾವತಿಸುತ್ತಿರುವ ವಿಳಂಬ ಶುಲ್ಕವನ್ನು ಪರಿಷ್ಕರಿಸಲು ನಿಯಮಗಳಿಗೆ ತಿದ್ದುಪಡಿ ಮಾಡಲು ಅನುಮೋದಿಸಿತ್ತು. ಅದರಂತೆ ಇದೀಗ ಅಧಿಕೃತವಾಗಿ ವಿಳಂಬ ಶುಲ್ಕವನ್ನು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.


Leave a Reply

Your email address will not be published. Required fields are marked *