ಶುದ್ಧ ಇಂಧನ ಬಳಕೆಯನ್ನು ಉತ್ತೇಜಿಸುವ ಮತ್ತು ಆರ್ಥಿಕ ಯೋಗಕ್ಷೇಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತವು ದೃಢವಾದ LPG (ದ್ರವೀಕೃತ ಪೆಟ್ರೋಲಿಯಂ ಅನಿಲ) ಸಬ್ಸಿಡಿ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಶುದ್ಧ ಅಡುಗೆ ಇಂಧನವನ್ನು ಪ್ರತಿ ಮನೆಗೆ ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುವ ಗುರಿಯನ್ನು ಹೊಂದಿದ್ದು, ಸಬ್ಸಿಡಿ ಉಪಕ್ರಮವು ರಾಷ್ಟ್ರದಾದ್ಯಂತ ಆರ್ಥಿಕ ಬೆಳವಣಿಗೆ ಮತ್ತು ಪರಿಸರ ಸುಸ್ಥಿರತೆಗೆ ಪ್ರಮುಖ ಚಾಲಕವಾಗಿದೆ.

ಇತ್ತೀಚಿಗೆ ದೇಶದಲ್ಲಿ ಹೊಸ ಹೊಸ ನಿಯಮಗಳನ್ನ ಜಾರಿಗೆ ತರಲಾಗುತ್ತಿದೆ. ದಿನನಿತ್ಯದ ಅಗತ್ಯ ವಸ್ತುಗಳಲ್ಲಿ ಗ್ಯಾಸ್ ಬಹಳ ಮುಖ್ಯವಾಗಿದೆ. ಈಗಾಗಲೇ ಸಾಕಷ್ಟು ಕುಟುಂಬಗಳಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ ಮಾಡಲಾಗುತ್ತಿದೆ. ಇದೀಗ ಕೇಂದ್ರ ಸರ್ಕಾರ LPG ಗ್ರಾಹಕರಿಗೆ ಹೊಸ ಆದೇಶವನ್ನು ಹೊರಡಿಸಿದೆ.
LPG ಗ್ರಾಹಕರಿಗೆ ಕೇಂದ್ರ ಸರ್ಕಾರದ ಹೊಸ ಆದೇಶ
ನೀವು LPG ಅನಿಲದ ಗ್ರಾಹಕರಾಗಿದ್ದರೆ ಕೇಂದ್ರ ಸರ್ಕಾರದ ಈ ಹೊಸ ನಿಯಮವನ್ನು ತಿಳಿಯುದು ಅವಶ್ಯಕವಾಗಿದೆ. ಹೌದು LPG ಗ್ರಾಹಕರ ಕುರಿತಂತೆ ಕೇಂದ್ರ ಸರ್ಕಾರ ಹೊಸ ನಿರ್ಧಾರವನ್ನು ಪ್ರಕಟಿಸಿದೆ. ಅದೇನೆಂದರೆ LPG ಗ್ರಾಹಕರು LPG ಗ್ಯಾಸ್ ಸಿಲಿಂಡರ್ ಗೆ e-kyc ಮಾಡುವಂತೆ ಆದೇಶ ಹೊರಡಿಸಿದೆ.
ಈಗಾಗಲೇ ಹಲವು ನಾಗರೀಕ ಸೇವೆಗಳಿಗೆ e-kyc ಕಡ್ಡಾಯಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಈ ನಿಯಮದ ಪ್ರಕಾರ LPG ಗ್ರಾಹಕರು e-kyc ಮಾಡಿಸದಿದ್ದರೆ ಅವರ ಕನೆಕ್ಷನ್ ರದ್ದಾಗಲಿದೆ.
e-kyc ಅಪ್ಡೇಟ್ ಮಾಡಲು ಡಿಸೇಂಬರ್ 31 ಕೊನೆಯ ದಿನ
LPG ಮೂಲಗಳ ಪ್ರಕಾರ, ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಗ್ರಾಹಕರ ಬಯೋಮೆಟ್ರಿಕ್ ಗುರುತಿಸುವಿಕೆಯನ್ನು ವಿತರಕರ ಮೂಲಕ ಮಾಡಲಾಗುತ್ತದೆ. ಗ್ಯಾಸ್ ಸಿಲಿಂಡರ್ ಡೆಲಿವರಿ ಮಾಡುವವರು ತಮ್ಮ ಮೊಬೈಲ್ ಫೋನ್ ಗಳಲ್ಲಿ ನಿರ್ದಿಷ್ಟ ಅಪ್ಲಿಕೇಶನ್ ಮೂಲಕ LPG ಗ್ರಾಹಕರ ಬೆರಳಚ್ಚು ಅಥವಾ ಮುಖವನ್ನು ಸ್ಕ್ಯಾನ್ ಮಾಡುತ್ತಾರೆ.
ನಂತರ ಅವರು ನಿರ್ದಿಷ್ಟ ವೆಬ್ ಸೈಟ್ ನಲ್ಲಿ ಬಯೋಮೆಟ್ರಿಕ್ ಗುರುತಿನ ಮಾಹಿತಿಯನ್ನು ಅಪ್ಲೋಡ್ ಮಾಡುತ್ತಾರೆ. e-kyc ಅಪ್ಡೇಟ್ ಮಾಡಲು ಡಿಸೇಂಬರ್ 31 ಕೊನೆಯ ದಿನ ಆಗಿದೆ. ಈ ದಿನಾಂಕದ ಒಳಗೆ ಗ್ಯಾಸ್ ಸಿಲಿಂಡರ್ ಡೆಲಿವರಿ ಮಾಡುವವರು ಬಂದಾಗ ನಿಮ್ಮ e-kyc ಅನ್ನು ಅಪ್ಡೇಟ್ ಮಾಡಿಸಬೇಕು ಇಲ್ಲದಿದ್ದರೆ ನಿಮ್ಮ ಗ್ಯಾಸ್ ಕನೆಕ್ಷನ್ ರದ್ದಾಗಲಿದೆ.
- ಸಮಾಜ ಕಲ್ಯಾಣ ಇಲಾಖೆಯ ನೂತನ ಯೋಜನೆ – ಭೂಮಿ ಖರೀದಿಗೆ ಶೇ. 50% ಸಹಾಯಧನ! - August 31, 2025
- Bele Parihara 2025: ಮಳೆಯಿಂದ ಹಾನಿಯಾದ ಬೆಳೆ ಹಾನಿಗೆ ಪರಿಹಾರ ಬಿಡುಗಡೆ! ಕಂದಾಯ ಇಲಾಖೆಯಿಂದ ಅಪ್ಡೇಟ್ - August 30, 2025
- NextGen Edu Scholarship – ಪಿಯುಸಿ ವಿದ್ಯಾರ್ಥಿಗಳಿಗೆ ನೆಕ್ಸ್ಟ್ಜೆನ್ ₹15,000 ವಿದ್ಯಾರ್ಥಿವೇತನ ಪಡೆಯಲು ಅವಕಾಶ! - August 30, 2025