Farmers Crop Loss
Farmers Crop Loss : ರೈತರು ಎದುರಿಸುತ್ತಿರುವ ಸಂಕಷ್ಟವನ್ನು ನಿವಾರಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಅನಿರೀಕ್ಷಿತ ಸಂದರ್ಭಗಳಿಂದ ಬೆಳೆ ನಷ್ಟ ಅನುಭವಿಸಿದವರಿಗೆ ಸಮಗ್ರ ಪರಿಹಾರ ಪ್ಯಾಕೇಜ್ ಘೋಷಿಸಿದೆ. ಈ ಪೂರ್ವಭಾವಿ ಹೆಜ್ಜೆಯು ನಮ್ಮ ರಾಷ್ಟ್ರದ ಆರ್ಥಿಕತೆಯ ಬೆನ್ನೆಲುಬನ್ನು ಬೆಂಬಲಿಸುವ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುತ್ತದೆ.
ರಾಜ್ಯ ಸರ್ಕಾರದಿಂದ ರೈತರ ಬೆಳೆಹಾನಿಗೆ ಪರಿಹಾರವನ್ನು ಘೋಷಣೆ ಮಾಡಿತ್ತು. ಅದರಂತೆ ಮುಂದಿನ ವಾರ ಹೆಕ್ಟೇರ್ ಗೆ 22,500ರವರೆಗೆ ಬೆಳೆಹಾನಿ ಪರಿಹಾರ ಪಾವತಿ ಮಾಡಲಾಗುತ್ತಿದೆ.
ಈ ಕುರಿತಂತೆ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಮಾಹಿತಿ ನೀಡಿದ್ದು, ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಎನ್ ಡಿ ಆರ್ ಎಫ್ ಅನುದಾನ ನಿರೀಕ್ಷಿಸಿ, ಬೆಳೆಹಾನಿ ಪರಿಹಾರದ ಮೊದಲ ಕಂತಾಗಿ ಅರ್ಹ ರೈತರಿಗೆ ತಲಾ 2,000 ಪಾವತಿಸಲು ತಿರ್ಮಾನಿಸಲಾಗಿದೆ.
ಇನ್ನು ಓದಿ : ಹುಷಾರ್!! ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿದವರಿಗೆ ಕೇಂದ್ರದಿಂದ ಖಡಕ್ ಆದೇಶ.
ಮುಂದಿನವಾರ ಆ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದರು.
ಇನ್ನೂ ಶೇ.33ಕ್ಕಿಂತ ಹೆಚ್ಚು ಹಾನಿಯಾದ ವಿಸ್ತೀರಣಕ್ಕೆ ಪ್ರತಿ ಹೆಕ್ಟೇರ್ ಗೆ ಪರಿಹಾರ ದರ ಕೂಡ ನಿಗದಿ ಪಡಿಸಲಾಗಿದೆ. ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್ ಗೆ ರೂ.8,500 ಪರಿಹಾರ ನೀಡಲಾಗುತ್ತದೆ. ನೀರಾವರಿ ಬೆಳೆಗೆ 17,000 ಹಾಗೂ ಬಹು ವಾರ್ಷಿಕ ಬೆಳೆಗೆ ರೂ.22,500ರವರೆಗೆ ಬೆಳೆ ಪರಿಹಾರ ನೀಡೋದಾಕಿ ತಿಳಿಸಿದರು.
ಇನ್ನು ಓದಿ : ಯಾವುದೇ ಕಚೇರಿಗೆ ಹೋಗದೆ ಮನೆಯಲ್ಲಿ ಕುಳಿತು ಆಯುಷ್ಮನ್ ಕಾರ್ಡ್ ಮಾಡಿಸಿ.
ಕೇಂದ್ರದಿಂದ ಅನುದಾನ ಬಂದ ಕೂಡಲೇ ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ಬರ ಪರಿಹಾರವನ್ನು ರೈತರಿಗೆ ನೀಡಲಾಗುತ್ತದೆ ಎಂಬುದಾಗಿ ಹೇಳಿದ್ದಾರೆ.
Pingback: Aadhaar Card Updates : ಆಧಾರ್ ಕಾರ್ಡ್ ಉಚಿತ ʻನವೀಕರಣʼಕ್ಕೆ ಕೇವಲ 5 ದಿನಗಳು ಮಾತ್ರ ಉಳಿದಿವೆ! ಬೇಗ ಅಪ್ ಡೇಟ್ ಮಾಡಿಸಿ