Ram Photo Note on RS 500 Note
ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು ಭಗವಾನ್ ರಾಮನ ಚಿತ್ರವನ್ನು ಒಳಗೊಂಡಿರುವ ಹೊಸ 500 ರೂ ನೋಟಿನ ಸುತ್ತ ಊಹಾಪೋಹಗಳು ಮತ್ತು ವದಂತಿಗಳಿಂದ ತುಂಬಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ವದಂತಿಗಳನ್ನು ನಿಗ್ರಹಿಸಲು ತ್ವರಿತವಾಗಿ ಪ್ರತಿಕ್ರಿಯಿಸಿದೆ, ಅಂತಹ ಯಾವುದೇ ಕರೆನ್ಸಿಯ ದೃಢೀಕರಣವನ್ನು ಸ್ಪಷ್ಟವಾಗಿ ನಿರಾಕರಿಸಿದೆ ಮತ್ತು ತಪ್ಪು ಮಾಹಿತಿಯನ್ನು ನಿರ್ಲಕ್ಷಿಸುವಂತೆ ಸಾರ್ವಜನಿಕರನ್ನು ಒತ್ತಾಯಿಸಿದೆ.

Table of Contents
ಸದ್ಯ ಇಡೀ ದೇಶದ ಜನರು Rama Mandira ಉದ್ಘಾಟನೆಗಾಗಿ ಕಾಯುತ್ತಿದ್ದಾರೆ. ಹಿಂದೂಗಳ ಬಹುನಿರೀಕ್ಷಿತ ರಾಮ ಮಂದಿರ ಉದ್ಘಾಟನೆ ಇನ್ನೇನು ನಾಲ್ಕು ದಿನಗಳಲ್ಲಿ ನೆರವೇರಲಿದೆ. ರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಕ್ತರು ಕಾಯುತ್ತಿದ್ದಾರೆ. ಸದ್ಯ ರಾಮ ಮಂದಿರ ಉಧ್ಘಾಟನೆಯ ಖುಷಿಯಲ್ಲಿದ್ದ ಜನರಿಗೆ ಇದೀಗ ಗೊಂದಲ ಉಂಟಾಗುವಂತಹ ವಿಚಾರವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಜನವರಿ 22 ರಂದು ಚಲಾವಣೆಗೆ ಬರಲಿದೆ ರಾಮ ಮಂದಿರದ 500 ರೂ. ನೋಟುಗಳು
ಸಧ್ಯ ಸೋಶಿಯಲ್ ಮೀಡಿಯಾದಲ್ಲಿ 500 ರೂ. ಹೊಸ ವಿನ್ಯಾಸದ ನೋಟಿನ ಚಲಾವಣೆಯ ಕುರಿತು ಸುದ್ದಿಗಳು ವೈರಲ್ ಆಗುತ್ತಿದೆ. 500 ರೂ. ನೋಟಿನಲ್ಲಿ ಮಹಾತ್ಮಗಾಂಧಿ ಹಾಗು ಕೆಂಪು ಕೋಟೆಯ ಬದಲಾಗಿ ಬೇರೆ ಚಿತ್ರವನ್ನು ಹಾಕಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಹೊಸ ನೋಟಿನ ಚಿತ್ರವನ್ನು ಕಂಡು ಜನಸಾಮಾನ್ಯರು ಅಚ್ಚರಿ ಪಡುತ್ತಿದ್ದಾರೆ. ಮತ್ತೆ 500 ರೂ.ನೋಟು ಬ್ಯಾನ್ ಆಗುತ್ತಾ ಎನ್ನುವ ಚಿಂತೆ ಜನಸಮಾನ್ಯರಲ್ಲಿ ಮೂಡಿದೆ.
ಇನ್ನು ಓದಿ: Ram Mandir: ಅಯೋಧ್ಯೆಗೆ ಉಚಿತ ರೈಲು ಪ್ರಯಾಣ ಯೋಜನೆ! ಶ್ರೀರಾಮನ ದರ್ಶನಕ್ಕೆ ಉಚಿತ ರೈಲು ಪ್ರಯಾಣ.
ವೈರಲ್ 500 ನೋಟಿನಲ್ಲಿ ಭಗವಾನ್ ರಾಮ

ಅಯೋಧ್ಯೆಯ ರಾಮಮಂದಿರ ಮತ್ತು ರಾಮಮಂದಿರದ ಭಾವಚಿತ್ರಗಳಿಂದ ಅಲಂಕರಿಸಲ್ಪಟ್ಟ 500 ರೂಪಾಯಿ ನೋಟುಗಳ ಮಾರ್ಫಿಂಗ್ ಚಿತ್ರಗಳು ಆನ್ ಲೈನ್ ನಲ್ಲಿ ಹರಿದಾಡುತ್ತಿವೆ. ವೈರಲ್ ಫೋಟೋಗಳಲ್ಲಿ ನೋಟಿನ ಮುಂಭಾಗದಲ್ಲಿ ಭಗವಾನ್ ರಾಮನನ್ನು ಮತ್ತು ನೋಟಿನ ಹಿಂಭಾಗದಲ್ಲಿ ಮಹಾತ್ಮ ಗಾಂಧಿ ಮತ್ತು ಕೆಂಪು ಕೋಟೆಯ ಸಾಂಪ್ರದಾಯಿಕ ಚಿತ್ರಗಳನ್ನು ಬದಲಿಸಿ ರಾಮಮಂದಿರವನ್ನು ಚಿತ್ರಿಸಲಾಗಿದೆ.
ರಾಮ ಮಂದಿರದ 500 ರೂ. ನೋಟಿನ ಬಗ್ಗೆ RBI ಸ್ಪಷ್ಟನೆ
ಈ ನೋಟುಗಳನ್ನು ಜನವರಿ 22, 2024 ರಂದು ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು ಎಂಬ ಸುದ್ದಿಯೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ನೋಟುಗಳ ಚಿತ್ರಗಳನ್ನು ಎಡಿಟ್ ಮಾಡಲಾಗಿದ್ದು, ಹೊಸ ನೋಟುಗಳ ಬಿಡುಗಡೆಗೆ ಸಂಬಂಧಿಸಿದಂತೆ Reserve Bank of India ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈಗ ಚಲಾವಣೆಯಲ್ಲಿರುವ 500 ರೂ.ನೋಟಿನ ಹೊರತಾಗಿ ರಾಮ ಮಂದಿರ ಚಿತ್ರವಿರುವ 500 ರೂ. ನೋಟುಗಳು ಚಲಾವಣೆಗೆ ಬರುವುದಿಲ್ಲ ಎಂದು RBI ಸ್ಪಷ್ಟಪಡಿಸಿದೆ.
- ವಿರಾಟ್ ಕೊಹ್ಲಿ RCB ಯಲ್ಲಿ ಮತ್ತೆ ನಾಯಕನಾಗಿ ಮರಳಲು ಸಜ್ಜು – IPL 2025 ಗೆ ಮುಹೂರ್ತ - October 30, 2024
- ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ರಾಜ್ಯದಲ್ಲಿ ಮತ್ತೆ ನರ್ಸಿಂಗ್ ಸೀಟುಗಳು ಖಾಲಿ! ಭರ್ತಿಗೆ ಅದೇಶ ನೀಡಿದ ಸರ್ಕಾರ - April 24, 2024
- ಕರ್ನಾಟಕದಲ್ಲಿ 500+ ಅಂಗನವಾಡಿ ಹುದ್ದೆಗಳಿಗೆ ನೇಮಕಾತಿ! ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ. - March 28, 2024