Reduce Cooking Oil Prices
cooking oil: ಗ್ರಾಹಕರು ತಮ್ಮ ದೈನಂದಿನ ಜೀವನದ ಮೇಲೆ ಹೆಚ್ಚುತ್ತಿರುವ ವೆಚ್ಚಗಳ ಪ್ರಭಾವದಿಂದ ಹಿಡಿತ ಸಾಧಿಸುತ್ತಿರುವಾಗ ಈ ಪೂರ್ವಭಾವಿ ಉಪಕ್ರಮವು ನಿರ್ಣಾಯಕ ಸಮಯದಲ್ಲಿ ಬರುತ್ತದೆ. ಈ ತುರ್ತು ಸಮಸ್ಯೆಯನ್ನು ಪರಿಹರಿಸಲು ಕೇಂದ್ರವು ಕೈಗೊಂಡಿರುವ ಮಹತ್ವದ ಕ್ರಮಗಳ ವಿವರಗಳನ್ನು ಪರಿಶೀಲಿಸೋಣ.
ಅಡುಗೆ ಎಣ್ಣೆ ಬೆಲೆಯಲ್ಲಿನ ಏರಿಕೆಯು ನಾಗರಿಕರಲ್ಲಿ ಕಳವಳಕ್ಕೆ ಕಾರಣವಾಗಿದೆ, ಇತ್ತೀಚಿನ ತಿಂಗಳುಗಳಲ್ಲಿ ಅಗತ್ಯ ಅಡುಗೆ ಸಾಮಗ್ರಿಗಳ ಬೆಲೆ ಸ್ಥಿರವಾದ ಏರಿಕೆಗೆ ಸಾಕ್ಷಿಯಾಗಿದೆ. ಜಾಗತಿಕ ಪೂರೈಕೆ ಸರಪಳಿಯ ಅಡಚಣೆಗಳು, ಅಂತಾರಾಷ್ಟ್ರೀಯ ತೈಲ ಬೆಲೆಗಳ ಏರಿಳಿತ ಮತ್ತು ಹೆಚ್ಚಿದ ಬೇಡಿಕೆಯಂತಹ ಅಂಶಗಳು ಈ ಮೇಲ್ಮುಖ ಪ್ರವೃತ್ತಿಗೆ ಕಾರಣವಾಗಿವೆ. ಪರಿಸ್ಥಿತಿಯ ತುರ್ತನ್ನು ಅರಿತು, ಅಡುಗೆ ತೈಲ ಬೆಲೆಯನ್ನು ಸ್ಥಿರಗೊಳಿಸಲು ಮತ್ತು ಕಡಿಮೆ ಮಾಡಲು ನಿರ್ಣಾಯಕ ಕ್ರಮ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ.
ಕಳೆದ ವರ್ಷದಿಂದ ಜನರು ಹಣದುಬ್ಬರತೆಯ ಪರಿಣಮವನ್ನು ಎದುರಿಸುತ್ತಿದ್ದಾರೆ ಎನ್ನಬಹುದು. ಯಾವುದೇ ವಸ್ತುವನ್ನು ಖರೀದಿಸಬೇಕಿದ್ದರು ಜನರು ಹೆಚ್ಚಿನ ಹಣವನ್ನು ನೀಡಬೇಕಾಗಿತ್ತು. ಜನ ಸಾಮಾನ್ಯರು ಬೆಲೆ ಏರಿಕೆಯ ಪರಿಣಾಮದಿಂದ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದರು.
ವಸ್ತುವಿನ ಬೆಲೆ ಇಳಿಕೆಯ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದರು. ಸದ್ಯ ಸರಕಾರ ದಿನ ನಿತ್ಯ ಅಡುಗೆಗೆ ಬೇಕಾಗುವ ಅಡುಗೆ ಎಣ್ಣೆಯ ಬೆಲೆಯನ್ನು ಪರಿಷ್ಕರಿಸಲು ನಿರ್ಧರಿಸಿದೆ. ಈ ಮೂಲಕ ಜನತೆಗೆ ಸರ್ಕಾರ ಸಿಹಿಸುದ್ದಿ ನೀಡಿದೆ.
ಬೆಲೆ ಇಳಿಕೆ ಮಾಡಲು ಕೇಂದ್ರದ ಮಹತ್ವದ ಕ್ರಮ
ಸೂರ್ಯಕಾಂತಿ ಎಣ್ಣೆ, ತಾಳೆ ಎಣ್ಣೆ ಮತ್ತು ಸೋಯಾಬೀನ್ ಎಣ್ಣೆಯಂತಹ ಖಾದ್ಯ ತೈಲಗಳ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರ ಖಾದ್ಯ ತೈಲ ಕಂಪನಿಗಳಿಗೆ ಸೂಚಿಸಿದೆ. ಸದ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೆಲೆ ಇಳಿಕೆಯಾಗುತ್ತಿದೆ. ಆದರೆ ದೇಶಿಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೆಲೆ ಕಡಿಮೆಯಾಗಿಲ್ಲ. ಕಳೆದ ವರ್ಷ ಡಿಸೇಂಬರ್ ನಲ್ಲಿ ಬೆಲೆ ಸ್ವಲ್ಪ ಕಡಿಮೆಯಾಗಿತ್ತು. ಹೊಸ ವರ್ಷದಲ್ಲಿ ಅಡುಗೆ ಎಣ್ಣೆಯ ಬೆಲೆಯಲ್ಲಿ ವ್ಯತ್ಯಾಸವಾಗಲಿದೆ.
ಜಾಗತಿಕ ಬೆಲೆಗೆ ಅನುಗುಣವಾಗಿ ತೈಲ ಬೆಲೆಯನ್ನು ತಗ್ಗಿಸುವಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ತೈಲ ಕಂಪನಿಗಳಿಗೆ ಸೂಚಿಸಿದೆ. ತೈಲ ಕಂಪನಿಗಳು ಬೆಲೆ ಕಡಿಮೆ ಮಾಡುವಲ್ಲಿ ವಿಫಲವಾಗಿರುವ ಬಗ್ಗೆಯೂ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಖಾದ್ಯ ತೈಲ ಬೆಲೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಅಡುಗೆ ಎಣ್ಣೆ ಖರೀದಿಸುವವರಿಗೆ ಬಿಗ್ ರಿಲೀಫ್!
ಕಚ್ಚಾ ಪಾಮ್ ಎಣ್ಣೆ, ಕಚ್ಚಾ ಸೂರ್ಯಕಾಂತಿ ಎಣ್ಣೆ ಮತ್ತು ಕಚ್ಚಾ ಸಿಯಾಬೀನ್ ಎಣ್ಣೆಯ ಮೇಲಿನ ಕಡಿಮೆ ಆಮದು ಸುಂಕ ರಚನೆಯು ಆರಂಭದಲ್ಲಿ ಮಾರ್ಚ್ 2024 ರಲ್ಲಿ ಮುಕ್ತಾಯಗೊಳ್ಳಲಿದೆ. ಇದನ್ನು ಮುಂದಿನ ವರ್ಷದವರೆಗೆ ವಿಸ್ತರಿಸಲಾಗಿದೆ. ಖಾದ್ಯ ತೈಲದ ಮೇಲಿನ ಕಡಿಮೆ ಆಮದು ಸುಂಕಗಳು ಮುಂದಿನ ವರ್ಷ ಮಾರ್ಚ್ ವರೆಗೆ ಮುಂದುವರಿಯಲಿದೆ.
ಸಚಿವಾಲಯವು ಕಚ್ಚಾ ಮತ್ತು ಸಂಸ್ಕರಿಸಿದ ಖಾದ್ಯ ತೈಲಗಳ ಆಮದಿನ ಮೇಲಿನ ರಿಯಾಯಿತಿ ಸುಂಕ ದರಗಳನ್ನು ಮಾರ್ಚ್ 31, 2025 ರ ವರೆಗೆ ಒಂದು ವರ್ಷದವರೆಗೆ ವಿಸ್ತರಿಸಿದೆ. ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ ಆಮದು ಸುಂಕವನ್ನು ಶೇ.17.5 ರಿಂದ ಶೇ.12.5ಕ್ಕೆ ಇಳಿಸಲಾಗಿದೆ.