rtgh

Valentine’s Day: ವ್ಯಾಲೆಂಟೈನ್ ಡೇ’ ಆಚರಣೆಯ ಹಿಂದೆ ಇದೆ ಈ ರೋಚಕ ಕಥೆ.


Valentine’s Day on February 14

Valentine’s Day: ಪ್ರಪಂಚವು ಕೆಂಪು ಮತ್ತು ಗುಲಾಬಿ ಬಣ್ಣದ ಛಾಯೆಗಳಲ್ಲಿ ಕಂಗೊಳಿಸುತ್ತಿದೆ ಮತ್ತು ಗುಲಾಬಿಗಳ ಪರಿಮಳವು ಗಾಳಿಯನ್ನು ತುಂಬುತ್ತದೆ, ಪ್ರೇಮಿಗಳ ದಿನವನ್ನು ಪ್ರತಿ ವರ್ಷ ಫೆಬ್ರವರಿ 14 ರಂದು ಆಚರಿಸಲಾಗುತ್ತದೆ, ಇದು ಪ್ರೀತಿ, ಪ್ರಣಯ ಮತ್ತು ಹೃತ್ಪೂರ್ವಕ ಸನ್ನೆಗಳಿಗೆ ಮೀಸಲಾದ ಸಮಯವಾಗಿದೆ. ಆದರೆ ಚಾಕೊಲೇಟ್‌ಗಳು ಮತ್ತು ಹೂವುಗಳ ಸಾಂಪ್ರದಾಯಿಕ ಬಲೆಗಳನ್ನು ಮೀರಿ ಆಳವಾದ, ಹೆಚ್ಚು ಆಳವಾದ ಕಥೆಯಿದೆ-ಸಬಲೀಕರಣ, ಭರವಸೆ ಮತ್ತು ಪ್ರೀತಿಯ ಪರಿವರ್ತಕ ಶಕ್ತಿ.

Do you know the purpose of celebrating Valentine's Day on February 14
Do you know the purpose of celebrating Valentine’s Day on February 14

ಫೆಬ್ರುವರಿ ತಿಂಗಳು ಬಂದಾಗಿದೆ ಹಾಗೂ ಫೆಬ್ರುವರಿ 7ನೇ ತಾರೀಖಿನಿಂದ ಪ್ರೀತಿಯ ಹಬ್ಬ ‘ವ್ಯಾಲೆಂಟೈನ್ ಡೇ’ ಆಚರಣೆ ಕೂಡ ಆರಂಭವಾಗಿದೆ. ಹಲವಾರು ಅಂಗಡಿ ಮುಂಗಟ್ಟುಗಳಲ್ಲಿ, ಮಾರುಕಟ್ಟೆ ಹಾಗೂ ಇ-ಕಾಮರ್ಸ್ ತಾಣಗಳಲ್ಲಿ ಈ ಹಬ್ಬದ ಕುರಿತ ಚಟುವಟಿಕೆಗಳನ್ನು ನೀವು ನೋಡಬಹುದಾಗಿದೆ. ಆದರೆ, ನೀವು ನಿಮ್ಮ ಪ್ರೀತಿ ಪಾತ್ರರ ಜೊತೆ ಆಚರಿಸಿಕೊಳ್ಳುವ ಈ ಹಬ್ಬ ಏತಕ್ಕಾಗಿ ಆಚರಿಸಲಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ. ಇಲ್ಲ ಎಂದಾದಲ್ಲಿ ಇಲ್ಲಿದೆ ಈ ಹಬ್ಬ ಆಚರಣೆಯ ಹಿಂದಿನ ರೋಚಕ ಕಥೆ.

ಫೆಬ್ರುವರಿ 7 ತಾರಿಖೀಗೆ ‘ವ್ಯಾಲೆಂಟೈನ್ ವೀಕ್’ ಆಚರಣೆ ಆರಂಭಗೊಂಡಿದೆ. ಎಲ್ಲ ಪ್ರೀತಿಯ ಹಕ್ಕಿಗಳ ಮನದಲ್ಲಿ ಈ ಹಬ್ಬದ ಆಚರಣೆಯ ಕುರಿತು ಸಂಭ್ರಮ ಮನೆಮಾಡಿದೆ. ಕೆಲವರು ಈ ಇಡೀ ವಾರವನ್ನು ತಮ್ಮ ಪ್ರೀತಿ ಪಾತ್ರರಿಗೆ ಪ್ರೇಮ ನಿವೇದನೆ ಮಾಡುವ ಉದ್ದೇಶದಿಂದ ಕಾಯುತ್ತಿದ್ದಾರೆ. ಇನ್ನೂ ಕೆಲವರು ಇಡೀ ವಾರವನ್ನು ತಮ್ಮ ಪ್ರೀತಿ ಪಾತ್ರರ ಜೊತೆಗೆ ಸಡಗರದಿಂದ ಆಚರಿಸುವ ತಯಾರಿ ನಡೆಸುತ್ತಿದ್ದಾರೆ. ಯಾರಿಗಾದರು ಕೇಳಿ ಈ ವಾರದ ಏಳು ದಿನಗಳ ಕುರಿತು ನಿಮಗೆ ಮಾಹಿತಿ ನೀಡುತ್ತಾರೆ. ಆದರೆ, ಈ ಹಬ್ಬ ಆಚರಣೆಯ ಹಿನ್ನೆಲೆ ಏನು? ಎಂಬ ಪ್ರಶ್ನೆಗೆ ಅವರ ಬಳಿಯೂ ಉತ್ತರ ಸಿಗುವುದು ಸ್ವಲ್ಪ ಕಷ್ಟ ಸಾಧ್ಯವೇ. ಏಕೆಂದರೆ, ಅಷ್ಟೊಂದು ಆಳದವರೆಗೆ ಯಾರು ಈ ಕುರಿತು ಯೋಚಿಸಿಯೇ ಇರುವುದಿಲ್ಲ. ಕೇವಲ ನೋಡಿರುವುದಷ್ಟನ್ನು ಜನ ಸೆಲೆಬ್ರೇಟ್ ಮಾಡುತ್ತಾರೆ. ಫೆಬ್ರುವರಿ 14ನೇ ತಾರೀಖಿಗೆ ವ್ಯಾಲೆಂಟೈನ್ ಡೇ ಏಕೆ ಆಚರಿಸುತ್ತಾರೆ ಎಂಬ ಮಾಹಿತಿ ನಾವು ನಿಮಗೆ ನೀಡಲಿದ್ದೇವೆ.

ಇನ್ನು ಓದಿ: ವಿದ್ಯಾರ್ಥಿಗಳಿಗಾಗಿ ಸರಸ್ವತಿ ಯೋಜನೆ!! ನಿಮ್ಮ ಖಾತೆಗೆ ಬರಲಿದೆ 15,000 ರಿಂದ 25,000

ಫೆ.14ರಂದು ಯಾವ ಉದ್ದೇಶಕ್ಕೆ ವ್ಯಾಲೆಂಟೈನ್ ಡೇ ಆಚರಿಸುತ್ತಾರೆ?

ಸುಮಾರು 3ನೇ ಶತಮಾದದಲ್ಲಿ ರೋಮ್ ನಲ್ಲಿ ‘ಸಂತ ವ್ಯಾಲೆಂಟೈನ್’ ಹೆಸರಿನ ಪಾದ್ರಿಯೊಬ್ಬ ಜನರ ವಿವಾಹ ಮಾಡಿಸುತ್ತಿದ್ದ. ಆದರೆ, ಆ ಸಮಯದಲ್ಲಿ ರೋಮ್ ರಾಜ ಕ್ಲಾಡಿಯಸ್ ಪ್ರೇಮ ಹಾಗೂ ವಿವಾಹದ ಮೇಲೆ ನಿಷೇಧ ವಿಧಿಸಿದ್ದರು. ಏಕೆಂದರೆ, ಪ್ರೇಮ ಹಾಗೂ ವಿವಾಹದ ಕಾರಣದಿಂದ ಜನರು ಸೈನ್ಯದಲ್ಲಿ ಭರ್ತಿಯಾಗಲು ನಿರಾಕರಿಸುತ್ತಿದ್ದರು. ಏಕೆಂದರೆ ಪ್ರೀತಿಯಲ್ಲಿರುವ ವ್ಯಕ್ತಿಗಳು ತಮ್ಮ ಪ್ರೀತಿಪಾತ್ರರಿಂದ ದೂರಹೋಗಲು ಬಯಸುತ್ತಿರಲಿಲ್ಲ.

ರಾಜಾಜ್ಞೆಯ ಬಳಿಕವೂ ಕೂಡ ವ್ಯಾಲೆಂಟೈನ್ ಪಾದ್ರಿ ಪ್ರೀತಿಯಲ್ಲಿದ್ದ ಜೋಡಿಗಳ ವಿವಾಹ ಮಾಡಿಸುವುದನ್ನು ಮುಂದುವರೆಸುತ್ತಾರೆ. ಅಷ್ಟೇ ಅಲ್ಲ ಅವರು ಹಲವು ಸೈನಿಕರ ವಿವಾಹ ಕೂಡ ನೆರವೇರಿಸುತ್ತಾರೆ. ಈ ಕಾರಣದಿಂದ ಅಲ್ಲಿನ ರಾಜ ಅವರನ್ನು ಜೈಲಿಗೆ ಅಟ್ಟುತ್ತಾನೆ ಮತ್ತು ಫೆಬ್ರುವರಿ 14, 269 ರಲ್ಲಿ ಸಂತ ವ್ಯಾಲೆಂಟೈನ್ ಗೆ ಗಲ್ಲುಶಿಕ್ಷೆ ವಿಧಿಸಲಾಗುತ್ತದೆ. ಈ ಸಮಯದಲ್ಲಿ ಜೈಲಿನಲ್ಲಿದ್ದ ಪಾದ್ರಿ ಜೈಲರ್ ಪುತ್ರಿಗೆ ಪ್ರೇಮ ಪತ್ರವೊಂದನ್ನು ಬರೆದಿರುತ್ತಾರೆ. ಈ ಪತ್ರದ ಕೊನೆಯಲ್ಲಿ ಅವರು ‘ನಿನ್ನ ವ್ಯಾಲೆಂಟೈನ್’ ಎಂದು ಬರೆದಿರುತ್ತಾರೆ. ಪಾದ್ರಿ ವ್ಯಾಲೆಂಟೈನ್ ಅವರ ಈ ತ್ಯಾಗವನ್ನೇ ಪ್ರೀತಿಯ ಕುರುಹ ಎಂದು ತಿಳಿದು ಫೆ.14ರಂದು  ವ್ಯಾಲೆಂಟೈನ್ ಡೇ ಅನ್ನು ಆಚರಿಸಲಾಗುತ್ತಿದೆ.


Leave a Reply

Your email address will not be published. Required fields are marked *