rtgh

ರಾಜ್ಯ ಸರ್ಕಾರದ ‘ಆಶಾಕಿರಣ’ ಯೋಜನೆ: 2.45 ಲಕ್ಷ ಜನರಿಗೆ ಉಚಿತ ಕನ್ನಡಕ ವಿತರಣೆ.!


ಬೆಂಗಳೂರು : ಉಚಿತ ಕಣ್ಣಿನ ಚಿಕಿತ್ಸೆ ನೀಡುವ ರಾಜ್ಯ ಸರ್ಕಾರದ ಮಹತ್ವದ ಆಶಾಕಿರಣ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

Ashakiran Scheme

ಕಾರ್ಯಕ್ರಮವು ಹಾವೇರಿ ನಗರದ ಕೊಳ್ಳಿ ಕಾಲೇಜು ಮೈದಾನದಲ್ಲಿ ನಡೆದಿದ್ದು, ಆಶಾಕಿರಣ ಯೋಜನೆಯಡಿ ನೇತ್ರ ಸಮಸ್ಯೆವುಳ್ಳ ಮಕ್ಕಳಿಗೆ ಸಿದ್ದರಾಮಯ್ಯ ಅವರು ಕನ್ನಡಕವನ್ನು ವಿತರಿಸಿದರು.

ಮೊದಲನೇ ಹಂತದಲ್ಲಿ 4 ಜಿಲ್ಲೆಗಳ 2.45 ಲಕ್ಷ ಮಂದಿಗೆ ಕನ್ನಡಕ ವಿತರಣೆ ಮಾಡುವ ಕಾರ್ಯಕ್ಕೆ ಹಸಿರು ನಿಶಾನೆ ತೋರಿದರು. ಈ ಯೋಜನೆಯಲ್ಲಿ ಮೊದಲ ಹಂತದಲ್ಲಿ ಕಲಬುರಗಿ, ಹಾವೇರಿ, ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆ ಕನ್ನಡಕ ವಿತರಣೆಗೆ ಚಾಲನೆ ಸಿಕ್ಕಿದೆ.

ಇದನ್ನೂ ಸಹ ಓದಿ: ಉಚಿತ ಸ್ಮಾರ್ಟ್ ಫೋನ್ ವಿತರಣೆ ಘೋಷಣೆ ಮಾಡಿದ ಸಿದ್ದರಾಮಯ್ಯ! ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್‌ ನ್ಯೂಸ್

2ನೇ ಹಂತದಲ್ಲಿ ಮಂಡ್ಯ, ಚಿತ್ರದುರ್ಗ, ರಾಯಚೂರು, ಉತ್ತರಕನ್ನಡ ಜಿಲ್ಲೆಗಳಲ್ಲಿ ಹಾವೇರಿಯಲ್ಲಿ ಪುಟ್ಟ ಮಗುವಿಗೆ ಉಚಿತ ಕನ್ನಡಕವನ್ನು ತೊಡಿಸುವ ಮೂಲಕ ‘ಆಶಾಕಿರಣ-ನಿಮ್ಮ ಮನೆ ಬಾಗಿಲಿಗೆ ಕಣ್ಣಿನ ಆರೈಕೆ’ ಯೋಜನೆಗೆ ಭಾನುವಾರ  ಸಿದ್ದರಾಮಯ್ಯ ಚಾಲನೆ ನೀಡಿದರು. ಸರ್ಕಾರದಿಂದ ಮನೆ ಮನೆಗೆ ತೆರಳಿ ಜನರ ಕಣ್ಣಿನತಪಾಸಣೆ ನಡೆಸಿ ಕಣ್ಣಿನ ಪೊರೆ ಸಮಸ್ಯೆಗಳಿಂದ ಬಳಲುತ್ತಿದ್ದವರಿಗೆ ಉಚಿತ ಶಸ್ತ್ರ ಚಿಕಿತ್ಸೆ ಹಾಗೂ ಉಚಿತ ಕನ್ನಡಕವನ್ನು ವಿತರಣೆ ಮಾಡಲಾಯಿತು.

ಆರೋಗ್ಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯ ಕರ್ತೆಯರು ಮನೆಗೆ ಮನೆಗೆ ತೆರಳಿ ತಪಾಸಣೆ ನಡೆಸಲಿದ್ದಾರೆ. ಕಲಬುರಗಿ, ಹಾವೇರಿ, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆಗಳಲ್ಲಿ ಒಟ್ಟು 56,59,036 ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇದರಲ್ಲಿ 8,28,884 ಜನರಿಗೆ ನೇತ್ರ ಸಂಬಂಧಿ ತೊಂದರೆಗಳು ಪತ್ತೆಯಾಗಿದೆ. ಹಾಗೂ 2,45,588 ಜನರಿಗೆ ದೃಷ್ಟಿದೋಷಯಿರುವುದು ಕಂಡು ಬಂದಿದೆ. ಸುಮಾರು 2.45 ಲಕ್ಷ ದೃಷ್ಟಿದೋಷ ಹೊಂದಿರುವ ಜನರಿಗೆ ಉಚಿತ ಕನ್ನಡಕ ವಿತರಣೆಯನ್ನು ಮಾಡಲಾಯಿತು.

ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ. ಮೀಸಲು: ಸಿಎಂ ಸಿದ್ದರಾಮಯ್ಯ

ಶಿಕ್ಷಣ ಇಲಾಖೆಗೆ ಬಂಪರ್‌ ಬಜೆಟ್!! ರಾಜ್ಯ ಸರ್ಕಾರಿ ಶಾಲೆ, ಕಾಲೇಜುಗಳಿಗೆ 850 ಕೋಟಿ


Leave a Reply

Your email address will not be published. Required fields are marked *