ಹಲೋ ಸ್ನೇಹಿತರೇ, ದೇಶದ ಜನ ಸಾಮಾನ್ಯರು ಅಗತ್ಯವಾಗಿ ಬಳಸುವ ಒಂದು ID Card ಗಳಲ್ಲಿ Pan Card ಕೂಡ ಒಂದು. ಅಗತ್ಯವಾದ ಹಣದ ವ್ಯವಹಾರಗಳನ್ನು ಮಾಡಲು ಹಾಗೂ ತೆರಿಗೆ ಪಾವತಿಸಲು ಈ ಪಾನ್ ಕಾರ್ಡ್ ಬಹಳ ಅವಶ್ಯಕವಾಗಿದೆ. ಇತ್ತೀಚಿನ ದಿನಗಳಲ್ಲಿ ಪಾನ್ ಕಾರ್ಡ್ ಇಲ್ಲದೆ ಕೆಲವು ಅಗತ್ಯ ಹಣಕಾಸಿನ ವ್ಯವಹಾರಗಳನ್ನ ಮಾಡಲು ಸಾಧ್ಯವೆ ಇಲ್ಲ. ಇದೀಗ ಸರ್ಕಾರ ಘೋಷಣೆ ಮಾಡಿರುವ ಹೊಸ ಮಾರ್ಗಸೂಚಿಯ ಬಗೆಗಿನ ಹೆಚ್ಚಿನ ವಿವರವನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ಅದಕ್ಕಾಗಿ ತಪ್ಪದೇ ಈ ಲೇಖನವನ್ನು ಕೊನೆವರೆಗೂ ಓದಿ.
ಹೌದು ಸಾಮಾನ್ಯವಾಗಿ 18 ವರ್ಷ ಮೇಲ್ಪಟ್ಟ ಎಲ್ಲಾ ಜನರು ಪಾನ್ ಕಾರ್ಡ್ ಮಾಡಿಸುತ್ತಾರೆ ಮತ್ತು ಈಗಿನ ಕಾಲದಲ್ಲಿ ಬ್ಯಾಂಕ್ ಖಾತೆ ಸೇರಿದಂತೆ ಕೆಲವು ಅಗತ್ಯ ಕೆಲಸಗಳಿಗೆ Pan Card ಬಹಳ ಅವಶ್ಯಕ ಕೂಡ ಆಗಿದೆ. ದೇಶದಲ್ಲಿ ಪಾನ್ ಕಾರ್ಡ್ ಗೆ ಸಂಬಂಧಿಸಿದಂತೆ ಹಲವು ನಿಯಮಗಳು ಜಾರಿಯಲ್ಲಿ ಇದೆ ಅದೆಷ್ಟೋ ಜನರಿಗೆ ಈ ನಿಯಮಗಳ ಬಗ್ಗೆ ಮಾಹಿತಿಯು ತಿಳಿದಿರುವುದಿಲ್ಲ.
ಪಾನ್ ಕಾರ್ಡ್ ಹೊಂದಿರುವ ಇಂತಹ ಜನರಿಗೆ 10000 ರೂ ದಂಡ
- ಆದಾಯ ತೆರಿಗೆ ಇಲಾಖೆಯು ನಿಯಮದ ಪ್ರಕಾರ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಗಳನ್ನು ಹೊಂದಿದವರಿಗೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ.
- ಮದುವೆಯಾದ ನಂತರ ಮಹಿಳೆಯರು ತಮ್ಮ ಪಾನ್ ಕಾರ್ಡ್ ನ ಉಪನಾಮವನ್ನು ಬದಲಾಯಿಸಲೇ ಬೇಕು.
- ಕೆಲವರು ವಂಚನೆಗಾಗಿ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಗಳನ್ನು ಇಟ್ಟುಕೊಂಡಿರುತ್ತಾರೆ, ಇದು ಕಾನೂನು ಬಾಹಿರವಾದ ಚಟುವಟಿಕೆಯಾಗಿದೆ.
ಕೇಂದ್ರದಿಂದ ಬೊಂಬಾಟ್ ಆಫರ್.!! ಸ್ಟಾರ್ಟಪ್ ಗೆ ಸರ್ಕಾರದಿಂದ 50 ಲಕ್ಷ ನೆರವು; ಹೀಗೆ ಅಪ್ಲೇ ಮಾಡಿ
ಆನ್ ಲೈನ್ ಪಾನ್ ಕಾರ್ಡ್ ಸರೆಂಡರ್ ಮಾಡಿಸುವ ವಿಧಾನ:
ನೀವು ಪ್ಯಾನ್ ಕಾರ್ಡ್ ಬದಲಾವಣೆಯ ವಿನಂತಿಯ ಅರ್ಜಿಯನ್ನು ಭರ್ತಿ ಮಾಡಬೇಕು. ವಿಭಾಗ 11 ರಲ್ಲಿ ನೀವು ಎರಡನೇ PAN ಕಾರ್ಡ್ ನ ವಿವರಗಳನ್ನು ನೀಡಬೇಕು. ಇದರ ಪ್ರತಿಯನ್ನು ಸಹ ಲಗತ್ತಿಸಬೇಕು ಹಾಗೂ ನಂತರ NSDL ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಸಲ್ಲಿಸಬಹುದಾಗಿದೆ.
ಆಫ್ ಲೈನ್ ಪಾನ್ ಕಾರ್ಡ್ ಸರೆಂಡರ್ ಮಾಡಿಸುವ ವಿಧಾನ:
ನೀವು ಫಾರ್ಮ್ 49A ನ್ನು ಭರ್ತಿ ಮಾಡಬೇಕು. ಫಾರ್ಮ್ ಅಲ್ಲಿ ಸರೆಂಡರ್ ಮಾಡಬೇಕಾದ ಪಾನ್ ಕಾರ್ಡ್ ನ ವಿವರಗಳು ನಮೂದಿಸಿ ಮತ್ತು ಈ ಫಾರ್ಮ್ ನ್ನು ನಿಮ್ಮ ಹತ್ತಿರದ UTI or NSDL TIN ಫೆಸಿಲಿಟೇಶನ್ ಸೆಂಟರ್‌ಗೆ ಸಲ್ಲಿಸಬೇಕು
ಇತರೆ ವಿಷಯಗಳು:
ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬ ಆಚರಣೆ ನಿಷೇಧ!! ರಾಜ್ಯ ಸರ್ಕಾರದ ಹೊಸ ಆದೇಶ
ಉಚಿತ ಸ್ಮಾರ್ಟ್ ಫೋನ್ ವಿತರಣೆ ಘೋಷಣೆ ಮಾಡಿದ ಸಿದ್ದರಾಮಯ್ಯ! ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್