ಬೆಂಗಳೂರು: ಚಿಲ್ಲರೆ ಮಾರುಕಟ್ಟೆಯಲ್ಲಿ ಏರುಗತಿಯಲ್ಲಿ ಸಾಗಿದ್ದ ಬೆಳ್ಳುಳ್ಳಿಯ ದರ ಇಳಿಕೆಯಾಗುತ್ತಿದೆ. ಮಧ್ಯಪ್ರದೇಶದಿಂದ ಆವಕ ಹೆಚ್ಚಳವಾಗಿದ್ದು, ಸಗಟು ದರದಲ್ಲಿ ಇಳಿಕೆ ಕಂಡು ಬಂದಿದೆ.
ಕಳೆದ ಡಿ. 2ನೇ ವಾರದಲ್ಲಿ ರಾಜ್ಯದ ವಿವಿಧ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಯ ದರವು ಭಾರಿ ಏರಿಕೆ ಆಗಿದ್ದು. ನಾಟಿ ಬೆಳ್ಳುಳ್ಳಿಯ ದರವು ಕೆಜಿಗೆ 500 ರೂ., ಹೈಬ್ರೀಡ್ ಬೆಳ್ಳುಳ್ಳಿಯ ಬೆಲೆ ಕೆಜಿಗೆ 450 ರೂ.ವರೆಗೂ ಮಾರಾಟವಾಗುತ್ತಿದೆ.
ಈಗ ಬೆಲೆ ಇಳಿಕೆಯಾಗಿದ್ದು, ಯಶವಂತಪುರದ ಎಪಿಎಂಸಿಯಲ್ಲಿ ಕೆಜಿಗೆ 70 ರಿಂದ 150 ರೂ.ಗೆ ಇಳಿಕೆ ಕಂಡಿದೆ. ಉತ್ತಮ ಗುಣಮಟ್ಟದ ಬೆಳ್ಳುಳ್ಳಿವು ಬೆಲೆ ಕೆಜಿಗೆ 150 ರೂ. ಇದೆ.
ಇದನ್ನೂ ಸಹ ಓದಿ: ಇಂದಿನಿಂದ 4 ದಿನ ರಾಜ್ಯಾದ್ಯಂತ ಗುಡುಗು ಸಹಿತ ಭಾರೀ ಮಳೆ!! ಹವಾಮಾನ ಇಲಾಖೆ ಅಲರ್ಟ್
ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ ಬೆಲೆ 250 ರೂ. ಇದೆ. ಕೆಲವು ಕಡೆ ಚಿಲ್ಲರೆಯ ವ್ಯಾಪಾರಿಗಳು ಕೆಜಿಗೆ 300 ರೂ. ಬೆಲೆಯಲ್ಲಿ ಮಾರಾಟವನ್ನು ಮಾಡುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ ಈಗ ಕೊಯ್ಲು ಆರಂಭವಾಗಿದೆ. ಅಲ್ಲಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿವು ಬಂದ ನಂತರ ಮುಂದಿನ ವಾರದೊಳಗೆ ಬೆಳ್ಳುಳ್ಳಿ ಸಗಟು ಬೆಲೆ ಕೆಜಿಗೆ 100 ರಿಂದ 120 ರೂ.ಗೆ ಇಳಿಕೆಯಾಗಲಿದೆ. ಚಿಲ್ಲರೆ ಮಾರುಕಟ್ಟೆಯಲ್ಲೂ ಧಾರಣೆ ಸ್ಥಿರವಾಗಲಿದೆ ಎಂದು ಹೇಳಲಾಗಿದೆ.
ಇತರೆ ವಿಷಯಗಳು:
ಚಿನ್ನ ಕೊಳ್ಳುವವರಿಗೆ ಒಳ್ಳೆಯ ಸುದ್ದಿ!! ಇಂದಿನ 10 ಗ್ರಾಂ ಚಿನ್ನದ ದರ ತೀರಾ ಕಡಿಮೆ
ಯುವನಿಧಿ ಫಲಾನುಭವಿಗಳೇ ಫೆ. 29 ರೊಳಗೆ ಈ ಕೆಲಸ ಮಾಡಿ, ಮಾಡದಿದ್ರೆ ಬರಲ್ಲ ನಿರುದ್ಯೋಗ ಭತ್ಯೆ