ನಮಸ್ಕಾರ ಸ್ನೇಹಿತರೆ ದೇಶದಲ್ಲಿ ಅನೇಕ ಜನರು ಖುಷಿಯನ್ನು ಅವಲಂಬಿಸಿರುತ್ತಾರೆ ಹಾಗೆ ಕೃಷಿಗೆ ಬೇಕಾಗಿರುವ ಅಂತಹ ಸಾಧನ ಸಲಕರಣೆಗಳು ಬೀಜ ಗೊಬ್ಬರ ಮತದಾರ ವಸ್ತುಗಳಿಗೆ ಹಣದ ಅವಶ್ಯಕತೆ ತುಂಬಾ ಇರುತ್ತದೆ ಇದರಿಂದ ಕೆಲವ ರೈತರು ಬ್ಯಾಂಕುನ ಮೊರೆ ಹೋಗುತ್ತಾರೆ.
ಇದೀಗ ಬ್ಯಾಂಕಿನಲ್ಲಿ ಕೃಷಿ ಲೋನ್ ಪಡೆಯಲು ಕೆಲವು ಕಂಡಿಶನ್ ಗಳನ್ನು ಬ್ಯಾಂಕ್ ಹಾಕಿದೆ ಈ ಲೇಖನದಲ್ಲಿ ನಾವು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ. ಇದರಿಂದ ಈ ಲೇಖನವನ್ನು ಗಮನವಿಟ್ಟು ಓದಿ.
ವ್ಯವಸಾಯ ಸೇವಾ ಸಹಕಾರಿ ಸಂಘಗಳಿಂದ & ಇತರೆ ಬ್ಯಾಂಕ್ ಗಳಲ್ಲಿ ರೈತರು ಬೆಳೆ ಸಾಲ ಪಡೆಯಲು ಪ್ರೂಟ್ಸ್ ತಂತ್ರಾಂಶಗಳಲ್ಲಿ ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಸೇರ್ಪಡೆ ಮಾಡಿರಬೇಕು & ನಿಮ್ಮ ಜಮೀನಿನ ಪಹಣಿ/ಊತಾರ್/RTC ಗೆ ಆಧಾರ್ ಲಿಂಕ್ ಮಾಡಿದ್ರೆ ಮಾತ್ರ ನಿಮಗೆ ಬೆಳೆ ಸಾಲ ಸಿಗಲಿದೆ ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.
ರೈತರು ಪ್ರತಿ ವರ್ಷ ಮಾರ್ಚ್ ತಿಂಗಳ ಅಂತ್ಯದಲ್ಲಿ ಹಿಂದಿನ ವರ್ಷದ ಸಾಲ ಮರು ಪಾವತಿ ಮಾಡಿ ನಂತರ ಎಪ್ರಿಲ್ / ಮೇ ತಿಂಗಳಿನಲ್ಲಿ ಪುನಃ ಬೆಳೆ ಸಾಲವನ್ನು ಪಡೆದುಕೊಳ್ಳುತ್ತಾರೆ ಅದರೆ ಇನ್ನು ಮುಂದೆ ನಿಮ್ಮ ಜಮೀನಿನ ಮೇಲೆ ಬೆಳೆ ಸಾಲ ಪಡೆಯಲು ಪ್ರೂಟ್ಸ್ ತಂತ್ರಾಂಶ ಅಂದರೆ FID ಸಂಖ್ಯೆ ನಿಮ್ಮ ಹೆಸರಿಗೆ ಇರುವ ಎಲ್ಲಾ ಜಮೀನಿನ ಸರ್ವೆ number ದಾಖಲಿಸಿರಬೇಕು ಹಾಗಿದ್ದರೆ ಮಾತ್ರ ಎಲ್ಲಾ ಜಮೀನಿನ ಮೇಲೆ ಬೆಳೆ ಸಾಲ ನೀಡಲಾಗುವುದು.
ಪ್ರೂಟ್ಸ್(Fruits) ತಂತ್ರಾಂಶ / FID ನಂಬರ್ ಗೆ ಎಲ್ಲಾ ಸರ್ವೆ ನಂಬರ್ ಸೇರ್ಪಡೆ ಮಾಡುವುದು ಹೇಗೆ? ಪಹಣಿ/ಊತಾರ್/RTC ಗೆ ಆಧಾರ್ ಲಿಂಕ್ ಎಲ್ಲಿ ಮಾಡಿಸಬೇಕು & ಏಕೆ? ಬೆ
FID ನಂಬರ್ ಗೆ ಸರ್ವೆ ನಂಬರ್ ಸೇರ್ಪಡೆ ಮಾಡುವುದು ಹೇಗೆ?
ರೈತರು ನಿಮ್ಮ ಹತ್ತಿರದ/ಹೋಬಳಿಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಅರ್ಜಿದಾರ ರೈತರ , ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಎಲ್ಲಾ ಜಮೀನಿನ ಪಹಣಿ ತೆಗೆದುಕೊಂಡು ನೇರವಾಗಿ ಕಚೇರಿ ಸಮಯದಲ್ಲಿ ಭೇಟಿ ನೀಡಿ ಪ್ರೂಟ್ಸ್ ತಂತ್ರಾಂಶ / FID ನಂಬರ್ ಗೆ ಎಲ್ಲಾ ಸರ್ವೆ ನಂಬರ್ ಸೇರ್ಪಡೆ ಮಾಡಿಕೊಳ್ಳಬಹುದು.
ಈಗಾಗಲೇ ನಿಮ್ಮ ಹೆಸರಿಗೆ FID ಆಗಿರುವುದನ್ನು ಚೆಕ್ ಮಾಡುವುದು ಹೇಗೆ?
ರೈತರು ಕೃಷಿ ಇಲಾಖೆಯ ಅಧಿಕೃತ ಪ್ರೂಟ್ಸ್ ವೆಬ್ಸೈಟ್‌ಗೆ ಭೇಟಿ ಮಾಡಿ ಈ ಕೆಳಗಿನ ಹಂತವನ್ನು ಅನುಸರಿಸಿ ನಿಮ್ಮ ಜಮೀನಿನ ಮೇಲೆ FID ಸಂಖ್ಯೆ ರಚನೆ ಆಗಿರುವುದನ್ನು ತಿಳಿದುಕೊಳ್ಳಬೇಕು.
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ FID status check ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿದಾರ ರೈತರ ಆಧಾರ್ ಕಾರ್ಡ್ ನಂಬರ್ ಹಾಕಿ FID ನಂಬರ್ ಆಗಿರುವುದನ್ನು ತಿಳಿಯಿರಿ..
ಪಹಣಿ/ಊತಾರ್/RTC ಗೆ ಆಧಾರ್ ಲಿಂಕ್ ಎಲ್ಲಿ ಮಾಡಿಸಬೇಕು & ಏಕೆ?
ರೈತರು ತಮ್ಮ ಜಮೀನ ಪಹಣಿ/RTC ಗೆ ಆಧಾರ್ ಲಿಂಕ್ ಮಾಡಿಸಬೇಕು ನಿಮ್ಮ ಹಳ್ಳಿಯ ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿಯನ್ನು(VA) ಭೇಟಿ ನೀಡಿ.
ಆಧಾರ್ ಲಿಂಕ್ ಏಕೆ?
- ಜಮೀನಿನ ಮಾಲೀಕರ ನಿಖರತೆಯನ್ನು ತಿಳಿಯಲು ಅಧಾರ್ ಲಿಂಕ್ ಮಾಡುವುದು ಕಡ್ಡಾಯ.
- ರಾಜ್ಯ & ಕೇಂದ್ರದ ವಿವಿಧ ಯೋಜನೆಯಡಿ ಸೌಲಭ್ಯ ಪಡೆಯಲು ಸಹಕಾರಿ.
- ಬೆಳೆ ಸಾಲ ಪಡೆಯಲು ಆಧಾರ್ ಲಿಂಕ್ ಮಾಡುವುದು ಕಡ್ಡಾಯ.
- ಕೃಷಿ & ತೋಟಗಾರಿಕೆ ಬೆಳೆಗಳಿಗೆ ಬೆಳೆ ವಿಮೆ & ಬೆಳೆ ಹಾನಿ ಪರಿಹಾರ ಪಡೆಯಲು ಆಧಾರ್ ಲಿಂಕ್ ಕಡ್ಡಾಯ.
ಅಗತ್ಯ ದಾಖಲೆಗಳು
1) ಅರ್ಜಿದಾರರ ಪೋಟೋ (Photo)
2) ಆಧಾರ್ ಕಾರ್ಡ್ (aadhar card)
3) ಪಾನ್ ಕಾರ್ಡ್
4) ಎಲ್ಲಾ ಜಮೀನಿನ ಪಹಣಿ/RTC
5) ರೇಷನ್ ಕಾರ್ಡ್