ಹಲೋ ಸ್ನೇಹಿತರೆ ನಮಸ್ಕಾರ ಈ ದಿನ ಈ ಲೇಖನದಲ್ಲಿ ನಾವು ಿಆರ್‌ಡಿಓ ಹುದ್ದೆಯ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ ಈ ಹುದ್ದೆಗೆ ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಮತ್ತು ದಾಖಲೆಗಳನ್ನು ಈ ಕೆಳಗೆ ನೀಡಿದ್ದೇವೆ ಇದರಿಂದ ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿ.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ನೀವು ಐಟಿಐ ಉತ್ತೀರ್ಣರಾಗಿರಬೇಕು ಹಾಗೂ ಈ ತಿಂಗಳ ಒಳಗೆ ಅಂದರೆ ಮೇ 31ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ನಿಮಗೆ ಕೆಳಗಡೆ ಲಿಂಕ್ ಗಳನ್ನು ನೀಡಲಾಗಿದೆ.
DRDO ಡಿಫೆನ್ಸ್ ರಿಸರ್ಚ್ and ಡೆವಲಪ್ಮೆಂಟ್ ಆರ್ಗನೈಜೇಷನ್‌ನಲ್ಲಿ ITI ಪಾಸಾದವರಿಗೆ ಉದ್ಯೋಗಾವಕಾಶ. ಸರ್ಕಾರಿ ಸಂಸ್ಥೆಯಲ್ಲಿ ಅದರಲ್ಲೂ ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗ ಇಷ್ಟ ಪಡುವವರು ಈಗಲೇ ಅಪ್ಲೇ ಮಾಡಿ. ಹುದ್ದೆಗಳ ವಿವರ, ಅರ್ಹತೆ, ಅರ್ಜಿಗೆ ಪ್ರಮುಖ ದಿನಾಂಕಗಳನ್ನು ಇಲ್ಲಿ ತಿಳಿಯಿರಿ.
ರಕ್ಷಣಾ ಸಂಶೋಧನೆ & ಅಭಿವೃದ್ಧಿ ಸಂಸ್ಥೆ (DRDO) ಅಗತ್ಯ ಹುದ್ದೆಗಳ ಭರ್ತಿಗಾಗಿ ಎಂಪ್ಲಾಯ್ಮೆಂಟ್ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ITI ಪಾಸಾದವರಿಗೆ ಹಲವು ವಿಭಾಗದಲ್ಲಿ ಹುದ್ದೆಗಳಿದೆ, ಈ ಶಿಕ್ಷಣ ಪಡೆದು ಕೇಂದ್ರ ಸರ್ಕಾರಿ ಸಂಸ್ಥೆಯಲ್ಲಿ, ಅದರಲ್ಲೂ ಸಂಶೋಧನಾ ಸಂಸ್ಥೆಗಳಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿದವರು, ತರಬೇತಿ ಪಡೆಯಲು ಆಸಕ್ತಿ ಇರುವವರು ತಡಮಾಡದೇ ಈಗಲೇ ಅಪ್ಲೇ ಮಾಡಿ. ಪ್ರೋಗ್ರಾಮಿಂಗ್ ಅಸಿಸ್ಟಂಟ್, ಇಲೆಕ್ಟ್ರಿಕಲ್, ಕಂಪ್ಯೂಟರ್ ಆಪರೇಟಿಂಗ್, ಫಿಟ್ಟರ್, ಪೇಂಟರ್, ಇತರೆ ಹಲವು ವಿಭಾಗದಲ್ಲಿ ಹುದ್ದೆಗಳಿವೆ.
ಹುದ್ದೆಗಳ ವಿವರ
- ಕಂಪ್ಯೂಟರ್ ಆಪರೇಟರ್ & ಪ್ರೋಗ್ರಾಮಿಂಗ್ ಅಸಿಸ್ಟಂಟ್: 60
- ಫಿಟ್ಟರ್ : 20
- ಮಷಿನಿಸ್ಟ್ : 16
- ಟರ್ನರ್ : 08
- ವೆಲ್ಡರ್ : 04
- ಇಲೆಕ್ಟ್ರೀಷಿಯನ್ : 12
- ಕಾರ್ಪೆಂಟರ್ : 02
- ಇಲೆಕ್ಟ್ರಾನಿಕ್ಸ್ : 04
- ಬುಕ್ ಬೈಂಡರ್ : 01
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-05-2024
ಉದ್ಯೋಗ ಅವಧಿ : ಒಂದು ವರ್ಷ ತರಬೇತಿ ಇರುತ್ತದೆ.
ಉದ್ಯೋಗ ಸ್ಥಳ : ಹೈದರಾಬಾದ್.
ಮಾಸಿಕ ಸಂಭಾವನೆ : ರೂ.8000-9000 ಪ್ರತಿ ತಿಂಗಳ ಸ್ಟೈಫಂಡ್.
ಅರ್ಜಿ ಸಲ್ಲಿಸಲು ವಿದ್ಯಾರ್ಹತೆ :
ITI ಶಿಕ್ಷಣವನ್ನು ಹುದ್ದೆಯ ವಿಭಾಗಗಳಿಗೆ ಸಂಬಂಧಿಸಿದ ಟ್ರೇಡ್‌ಗಳಲ್ಲಿ ಪಡೆದಿರಬೇಕು. ಎನ್‌ಸಿವಿಟಿ / ಎಸ್‌ಸಿವಿಟಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿರಬೇಕು..
ಇತರೆ ಹೆಚ್ಚಿನ ಮಾಹಿತಿಗಳಿಗಾಗಿ DRDO ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ/ ಕೆಳಗಿನ ನೋಟಿಫಿಕೇಶನ್ ಲಿಂಕ್ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
DRDO ಹುದ್ದೆಗಳಲ್ಲಿ ಆಸಕ್ತಿ ಇರುವವರು ನ್ಯಾಷನಲ್ ಅಪ್ರೆಂಟಿಶಿಪ್ ಟ್ರೈನಿಂಗ್ ಸ್ಕೀಮ್ (NATS) ಪೋರ್ಟಲ್‌ನಲ್ಲಿ ಅಪ್ಲೇ ಮಾಡಬೇಕು..
– ವೆಬ್‌ಸೈಟ್ ವಿಳಾಸ https://portal.mhrdnats.gov.in ಕ್ಕೆ ಭೇಟಿ ಮಾಡಿ.
– ‘Login’ ಎಂಬುದರ ಮೇಲೆ ಕ್ಲಿಕ್ ಮಾಡಿ.
– ತೆರೆದ ವೆಬ್‌ಪೇಜ್‌ನಲ್ಲಿ ಇಮೇಲ್ / ಮೊಬೈಲ್ ಸಂಖ್ಯೆ / User Id ನೀಡಿ, ಪಾಸ್‌ವರ್ಡ್ ನಮೂದಿಸಿ ಲಾಗಿನ್ ಆಗುವ ಮೂಲಕ ಅಪ್ಲೇ ಮಾಡಬೇಕು
ಆಯ್ಕೆ ವಿಧಾನ : ಅರ್ಜಿ ಸಲ್ಲಿಸಿದವರನ್ನು ITI ಶಿಕ್ಷಣದ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ, ಆಯ್ಕೆ ಮಾಡಲಾಗುವುದು.