rtgh

ಪೋಷಕರಿಗೆ ಫುಲ್‌ ಖುಷ್! ಖಾಸಗಿ ಶಾಲೆಗಳಿಗೆ ಬಂತು ಟೆನ್ಶನ್! ಇನ್ಮುಂದೆ ಸರ್ಕಾರಿ ಶಾಲೆಗಳದ್ದೇ ದರ್ಬಾರ್.


ನಮಸ್ಕಾರ ಸ್ನೇಹಿತರೆ ನಾವು ಈ ದಿನ ಈ ಲೇಖನದಲ್ಲಿ ನಿಮಗೆ ಒಂದು ಮಹತ್ವದ ಮಾಹಿತಿಯನ್ನು ನೀಡಲಿದ್ದೇವೆ ಏನೆಂದರೆ ಪೋಷಕರು ತಮ್ಮ ಮಕ್ಕಳನ್ನು ಅತ್ಯುತ್ತಮ ಶಿಕ್ಷಣವನ್ನು ಒದಗಿಸಲು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ ಆದರೆ ಇದೀಗ ಸರ್ಕಾರವು ಇದನ್ನು ತುಂಬಾ ಕಟ್ಟುನಿಟಿನ ವ್ಯವಸ್ಥೆಯನ್ನು ನೀಡಲು ಸರ್ಕಾರಿ ಶಾಲೆಗಳಿಗೆ ಆದೇಶವನ್ನು ನೀಡಿದೆ ಇದರಿಂದ ಬಡಮಕ್ಕಳು ಅತ್ಯುತ್ತಮವಾದ ಶಿಕ್ಷಣವನ್ನು ಪಡೆಯಬಹುದೆಂಬ ನಿರೀಕ್ಷೆಯನ್ನು ಹೊಂದಿದೆ.

Kannada and English medium class in government schools too
Kannada and English medium class in government schools too

ಇನ್ಮುಂದೆ ಸರ್ಕಾರಿ ಶಾಲೆಗಳಲ್ಲಿ ಕಟ್ಟುನಿಟ್ಟಿನ ಪಾಠ ಹಾಗೂ ಸುವ್ಯವಸ್ಥೆಯನ್ನು ನೀಡಲಾಗುತ್ತಿದೆ ಇದರಿಂದ ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಆಕರ್ಷಣೆಯನ್ನು ಮಾಡುತ್ತಿದೆ ಬನ್ನಿ ಈ ಲೇಖನದಲ್ಲಿ ನಾವು ನಿಮಗೆ ಈ ಒಂದು ವಿಷಯದ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದ್ದೇವೆ ಏಕೆಂದರೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಯನ್ನು ನೀಡಲಾಗುತ್ತಿದೆ.

ಹೌದು ಸ್ನೇಹಿತರೆ ನೋಡಿ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ತುಂಬಾ ಚುರುಕಿನಲ್ಲಿ ಇರುತ್ತಾರೆ ಮತ್ತು ಇನ್ನಿತರ ಚಟುವಟಿಕೆಯಲ್ಲೂ ಸಹ ಚುರುಕಿರುತ್ತಾರೆ. ಇದರಿಂದ ಅವರಿಗೆ ಅತಿ ಸುಲಭವಾಗಿ ಜೀವನವನ್ನು ರೂಪಿಸಿಕೊಳ್ಳಬಹುದು ಹಾಗೂ ಕೆಲವು ಬಿಸಿನೆಸ್ ಅಥವಾ ಕೆಲಸಗಳನ್ನು ಹುಡುಕಿಕೊಳ್ಳಬಹುದು.

ಕರ್ನಾಟಕ ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿ ಆರಂಭವಾಗಿದ್ದು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವ ಉದ್ದೇಶದಿಂದ ಸರ್ಕಾರ ದ್ವಿಭಾಷಾ ಬೋಧನಾ ವಿಧಾನವನ್ನು ಅಳವಡಿಸಲು ನಿರ್ಧರಿಸಿದ್ದು ಶಿಕ್ಷಣ ಕ್ಷೇತ್ರದಲ್ಲಿ ಇದೊಂದು ಐತಿಹಾಸಿಕ ಹೆಜ್ಜೆಯಾಗಲಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಪ್ರಸಕ್ತ 2024-25ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದಲ್ಲಿ 872 ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಕನ್ನಡ ಮತ್ತು ಆಂಗ್ಲ ಮಾಧ್ಯಮ ಎರಡು ತರಗತಿಗಳನ್ನು ಆರಂಭಿಸುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಭದ್ರಬುನಾದಿ ಹಾಕಲಿದೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಈ ದ್ವಿಭಾಷಾ ಬೋಧನಾ ವ್ಯವಸ್ಥೆಯು ಹೆಚ್ಚಿನ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

ಕಲ್ಯಾಣ ಭಾಗದಲ್ಲಿ ಕಲಿಕಾ ಸೌಲಭ್ಯ ವಂಚಿತ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಆದ್ಯತೆ ನೀಡುವುದರ ಮೂಲಕ, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದು ತಿಳಿಸಲಾಗಿದೆ.


Leave a Reply

Your email address will not be published. Required fields are marked *