ನಮಸ್ಕಾರ ಸ್ನೇಹಿತರೇ, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ 2024-25ನೇ ಸಾಲಿನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ಆರಂಭಿಸಿದ್ದು, ದನ, ಎಮ್ಮೆ, ಕುರಿ, ಮೇಕೆ, ಹಂದಿ ಮತ್ತು ಕೋಳಿ ಸಾಕಾಣಿಕೆ ನಿರ್ವಹಣೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ
ಈ ಕಾರ್ಯಕ್ರಮದಡಿ, ರೈತರು ತಮ್ಮ ಪಶು ಸಾಕಾಣಿಕೆಗೆ ಸಾಲ ಪಡೆಯಲು 2024ರ ಸೆಪ್ಟೆಂಬರ್ 15 ರಿಂದ 2025ರ ಮಾರ್ಚ್ 31 ರವರೆಗೆ ಅವಕಾಶವಿದೆ. ಆಸಕ್ತ ರೈತರು ತಮ್ಮ ಹತ್ತಿರದ ಪಶು ವೈದ್ಯಕೀಯ ಸೇವಾ ಇಲಾಖೆಗೆ ಭೇಟಿ ನೀಡಿ, ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಸಲ್ಲಿಸಲು ಸೂಚಿಸಲಾಗಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಕಾರ್ಯಕ್ರಮಕ್ಕಾಗಿ ಸಂಪರ್ಕ ಮಾಹಿತಿ
ಪ್ರಸ್ತುತ ಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ರೈತರು ತಮ್ಮ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಯಿಂದ ಪಡೆದು, ತಕ್ಷಣ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು, ಮೊಳಕಾಲ್ಮೂರು ಪ್ರದೇಶಗಳ ರೈತರು ಈ ಸಹಾಯವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದು:
ಸ್ಥಳ | ಸಂಪರ್ಕ ಸಂಖ್ಯೆ |
---|---|
ಚಿತ್ರದುರ್ಗ | 9482943111 |
ಚಳ್ಳಕೆರೆ | 9448816499 |
ಹೊಳಲ್ಕೆರೆ | 9972965479 |
ಹೊಸದುರ್ಗ | 9945298407 |
ಹಿರಿಯೂರು | 9483451044 |
ಮೊಳಕಾಲ್ಮೂರು | 9900964820 |
- Gold Price: ಚಿನ್ನದ ಬೆಲೆ ದಿಢೀರ್ ಏರಿಕೆ: ಬೆಂಗಳೂರಿನಲ್ಲಿ ಮಹಿಳೆಯರು, ಆಭರಣ ಪ್ರಿಯರಿಗೆ ಶಾಕ್! - July 3, 2025
- Adike Bele Vime 2025: ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಲು ಅರ್ಜಿ ಆಹ್ವಾನ! - July 3, 2025
- Free Computer Training: 3 ತಿಂಗಳ ಉಚಿತ ಕಂಪ್ಯೂಟರ್ ತರಬೇತಿ: ನಿರುದ್ಯೋಗಿ ಯುವಕರಿಗೆ ಬಂಗಾರದ ಅವಕಾಶ ನೀಡಿದ ಕೆನರಾ ಬ್ಯಾಂಕ್! - July 2, 2025