ಹೈಲೈಟ್ಸ್:
- ESIC ಬೆಂಗಳೂರಿನಲ್ಲಿ ಖಾಲಿ ಬೋಧಕ ಹುದ್ದೆಗಳು
- ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಭರ್ತಿ
- 27-09-2024 ರಂದು ನೇರ ಸಂದರ್ಶನ
ಇಎಸ್ಐಸಿ ಮೆಡಿಕಲ್ ಕಾಲೇಜು ಪಿಜಿಐಎಂಎಸ್ಆರ್ ಮತ್ತು ಮಾದರಿ ಆಸ್ಪತ್ರೆ, ರಾಜಾಜಿನಗರ, ಬೆಂಗಳೂರು, ತನ್ನ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಮತ್ತು ಸಹಾಯಕ ಪ್ರಾಧ್ಯಾಪಕರು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಹುದ್ದೆಗಳಿಗಾಗಿ ನೇರ ಸಂದರ್ಶನವನ್ನು ನಡೆಸಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿ ಸಲ್ಲಿಸಿ 27-09-2024 ರಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
ಹುದ್ದೆ ವಿವರಗಳು:
- ಪ್ರಾಧ್ಯಾಪಕರು: 03 ಹುದ್ದೆಗಳು (ಡರ್ಮೆಟೊಲಜಿ-1, ಜೆನೆರಲ್ ಮೆಡಿಷನ್-1, Otorhinolaryngology – 1)
- ಸಹ ಪ್ರಾಧ್ಯಾಪಕರು: 08 ಹುದ್ದೆಗಳು (ಎಮರ್ಜೆನ್ಸಿ ಮೆಡಿಸಿನ್-1, Otorhinolaryngology -1, ಪೆಥಾಲಜಿ-1, ಸೈಕಿಯಾಟ್ರಿ-1, ರೇಡಿಯೋ ಡಯಾಗ್ನೋಸಿಸ್-2, ಟ್ರಾನ್ಸ್ಫ್ಯೂಷನ್ ಮೆಡಿಸಿನ್-1, ಫಾರೆನ್ಸಿಕ್ ಮೆಡಿಸಿನ್-1)
- ಸಹಾಯಕ ಪ್ರಾಧ್ಯಾಪಕರು: 06 ಹುದ್ದೆಗಳು (ಕಮ್ಯುನಿಟಿ ಮೆಡಿಸಿನ್-3, ರೇಡಿಯೋ ಡಯಾಗ್ನೋಸಿಸ್-1, ಒಬಿಜಿ-2)
ವೇತನ ಶ್ರೇಣಿಗಳು:
- ಪ್ರಾಧ್ಯಾಪಕರು: ₹2,45,295
- ಸಹ ಪ್ರಾಧ್ಯಾಪಕರು: ₹1,63,116
- ಸಹಾಯಕ ಪ್ರಾಧ್ಯಾಪಕರು: ₹1,40,139
ಸಂದರ್ಶನದ ವಿವರಗಳು:
- ದಿನಾಂಕ: 27-09-2024
- ಸಮಯ: ಬೆಳಿಗ್ಗೆ 09:30 AM ರಿಂದ 10:30 AM
- ಸ್ಥಳ: ನ್ಯೂ ಅಕಾಡೆಮಿಕ್ ಬ್ಲಾಕ್, ಇಎಸ್ಐಸಿ ಎಂಸಿ & ಪಿಜಿಐಎಂಎಸ್ಆರ್, ರಾಜಾಜಿನಗರ, ಬೆಂಗಳೂರು
ಅರ್ಜಿ ಸಲ್ಲಿಸುವುದು ಹೇಗೆ?
- ಅರ್ಜಿ ನಮೂನೆ ESIC ಅಧಿಕೃತ ವೆಬ್ಸೈಟ್ www.esic.gov.in ನಲ್ಲಿ ಲಭ್ಯವಿದೆ. ಅರ್ಜಿದಾರರು ಈ ಅರ್ಜಿಯನ್ನು ಡೌನ್ಲೋಡ್ ಮಾಡಿ, ಭರ್ತಿ ಮಾಡಿ, ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಆವಶ್ಯಕ ದಾಖಲೆಗಳು:
- ವಿದ್ಯಾರ್ಹತೆ ಪ್ರಮಾಣಪತ್ರಗಳು
- ಕಾರ್ಯಕ್ಷಮತೆ ಪ್ರಮಾಣಪತ್ರಗಳು
- UG/PG ಟೀಚರ್ ಸರ್ಟಿಫಿಕೇಟ್ ಮತ್ತು PG ಗೈಡ್ ಸರ್ಟಿಫಿಕೇಟ್
- ಸ್ವಯಂ ದೃಢೀಕರಿಸಿದ ಎಲ್ಲಾ ದಾಖಲೆಗಳು
- ಮೂಲ ದಾಖಲೆಗಳು
- ಮೀಸಲಾತಿ ಅಥವಾ ಅಂಗವಿಕಲರಿಗೆ ಸಂಬಂಧಿಸಿದ ಪ್ರಮಾಣಪತ್ರಗಳು
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಆಯ್ಕೆ ನೇರ ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಹುದ್ದೆಗಳು ಗುತ್ತಿಗೆ ಆಧಾರಿತವಾಗಿದ್ದು, ನೇಮಕಗೊಂಡವರು ಈ ಬೋಧಕ ಹುದ್ದೆಗಳಲ್ಲಿ ತಾತ್ಕಾಲಿಕ ಅವಧಿಗೆ ಸೇವೆ ಸಲ್ಲಿಸಬೇಕಾಗುತ್ತದೆ.
ESIC ನಲ್ಲಿ ಬೋಧಕರ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ www.esic.gov.in ಗೆ ಭೇಟಿ ನೀಡಿ.