SBI Bank Requirement
SBI Bank Requirement : ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) 2025ನೇ ಸಾಲಿನ ಸ್ಪೆಷಲಿಸ್ಟ್ ಕ್ಯಾಡರ್ ಅಧಿಕಾರಿ (SCO) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು 151 ಹುದ್ದೆಗಳಿದ್ದು, ಟ್ರೇಡ್ ಫೈನಾನ್ಸ್ ಆಫೀಸರ್ ಮತ್ತು ಡೆಪ್ಯುಟಿ ಮ್ಯಾನೇಜರ್ (ಆರ್ಕೈವಿಸ್ಟ್) ಹುದ್ದೆಗಳಿವೆ.
ಹುದ್ದೆಗಳ ವಿವರ:
- ಟ್ರೇಡ್ ಫೈನಾನ್ಸ್ ಆಫೀಸರ್: 150 ಹುದ್ದೆಗಳು
- ಡೆಪ್ಯುಟಿ ಮ್ಯಾನೇಜರ್ (ಆರ್ಕೈವಿಸ್ಟ್): 1 ಹುದ್ದೆ
ಅರ್ಜಿ ಸಲ್ಲಿಸುವ ದಿನಾಂಕಗಳು:
- ಆರಂಭ ದಿನಾಂಕ: ಜನವರಿ 3, 2025
- ಕೊನೆ ದಿನಾಂಕ: ಜನವರಿ 23, 2025
ಅರ್ಹತೆ:
- ಡೆಪ್ಯುಟಿ ಮ್ಯಾನೇಜರ್ (ಆರ್ಕೈವಿಸ್ಟ್): ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ (ಕನಿಷ್ಠ 60% ಅಂಕಗಳು) ಮತ್ತು ಆರ್ಕೈವಲ್ ಸ್ಟಡೀಸ್ ಅಥವಾ ರೆಕಾರ್ಡ್ ಮ್ಯಾನೇಜ್ಮೆಂಟ್‌ನಲ್ಲಿ ಡಿಪ್ಲೊಮಾ ಅಥವಾ ಬ್ಯಾಚುಲರ್ ಡಿಗ್ರಿ ಹೊಂದಿರಬೇಕು.
- ಟ್ರೇಡ್ ಫೈನಾನ್ಸ್ ಆಫೀಸರ್: ಯಾವುದೇ ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು.
ಇನ್ನು ಓದಿ: ರೇಷನ್ ಕಾರ್ಡ್ ಅಪ್ಡೇಟ್: ಹೊಸ ಆದೇಶ.! ಜ.31 ರ ಒಳಗಡೆ ಈ ಕೆಲಸ ಮಾಡಿ.
ವಯೋಮಿತಿ:
- ಡೆಪ್ಯುಟಿ ಮ್ಯಾನೇಜರ್ (ಆರ್ಕೈವಿಸ್ಟ್): 27 ರಿಂದ 37 ವರ್ಷ
- ಟ್ರೇಡ್ ಫೈನಾನ್ಸ್ ಆಫೀಸರ್: ಎಸ್‌ಬಿಐ ಅಧಿಕೃತ ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
ವೇತನ ಶ್ರೇಣಿ:
- MMGS-II: ರೂ. 64,820 – 93,960
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ:
- ಸಾಮಾನ್ಯ/ಓಬಿಸಿ/ಇಡಬ್ಲ್ಯೂಎಸ್: ರೂ. 750
- ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿಗೆ ಶುಲ್ಕವಿಲ್ಲ.
ಅರ್ಜಿ ಸಲ್ಲಿಸುವ ವಿಧಾನ
– ಎಸ್‌ಬಿಐ ಕರಿಯರ್ ವೆಬ್‌ಪೇಜ್ https://sbi.co.in/web/careers/current-openings ಗೆ ಭೇಟಿ ನೀಡಿ.
– ಓಪನ್ ಆದ ಪೇಜ್‌ನಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾದ ಎರಡು ಅಧಿಸೂಚನೆಗಳು ಇರುತ್ತವೆ.
– ‘RECRUITMENT OF SPECIALIST CADRE OFFICER ON REGULAR BASIS’ ಎಂದಿರುವ ಲಿಂಕ್‌ಗಳನ್ನು ಕ್ಲಿಕ್ ಮಾಡಿ.
– ಅಧಿಸೂಚನೆ, ಅರ್ಜಿ ಲಿಂಕ್ ಇರುತ್ತದೆ.
– ಮೊದಲು ಅಧಿಸೂಚನೆ ಲಿಂಕ್ ಕ್ಲಿಕ್ ಮಾಡಿ ಅಗತ್ಯವಿದ್ದಲ್ಲಿ ಸುದೀರ್ಘ ಅಧಿಸೂಚನೆ ಓದಿಕೊಳ್ಳಿ.
– ‘Apply Online’ ಎಂದಿರುವಲ್ಲಿ ಕ್ಲಿಕ್ ಮಾಡಿ, ಅರ್ಜಿ ಸಲ್ಲಿಸಿ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಎಸ್‌ಬಿಐ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಜನವರಿ 23, 2025ರೊಳಗೆ ಅರ್ಜಿ ಸಲ್ಲಿಸಬಹುದು.
ಗಮನಿಸಿ:
ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು, ಎಸ್‌ಬಿಐ ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ.