pre-matric and post-matric scholarships
ಬೆಂಗಳೂರು: ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ 2024-25 ನೇ ಸಾಲಿನ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಜಿಯ ಮುಖ್ಯ ಅಂಶಗಳು:
- ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ:
- 10ನೇ ತರಗತಿಯಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
- ಕುಟುಂಬದ ವಾರ್ಷಿಕ ಆದಾಯ ₹2.5 ಲಕ್ಷ ಮೀರಿರಬಾರದು.
- ಮೆಟ್ರಿಕ್ ನಂತರದ ಪ್ರೋತ್ಸಾಹ ಧನ:
- 12th/ಪಿಯುಸಿ, ಡಿಪ್ಲೋಮಾ, ಐ.ಟಿ.ಐ, ಪದವಿ, ಸ್ನಾತಕೋತ್ತರ ಪದವಿ ಕೋರ್ಸುಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದವರು ಅರ್ಹರು.
- ಆದಾಯ ಮಿತಿ: ₹6 ಲಕ್ಷ.
ಪ್ರೋತ್ಸಾಹ ಧನದ ಮೊತ್ತ:
- ದ್ವೀತಿಯ ಪಿಯುಸಿ/ಮೂರು ವರ್ಷದ ಡಿಪ್ಲೋಮಾ: ₹20,000
- ಪದವಿ: ₹25,000
- ಸ್ನಾತಕೋತ್ತರ ಕೋರ್ಸುಗಳು (M.A., M.Sc.): ₹30,000
- ವೈದ್ಯಕೀಯ, ಇಂಜಿನಿಯರಿಂಗ್, ಕೃಷಿ ಕ್ಷೇತ್ರಗಳು: ₹35,000
ಆಧಾರ್ ಜೋಡಣೆ ಮತ್ತು Bio-Metric e-Authentication:
- ವಿದ್ಯಾರ್ಥಿವೇತನದ ಮೊತ್ತವನ್ನು ನೇರವಾಗಿ ಆಧಾರ್ ಜೋಡಿತ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
- Bio-Metric e-Authentication ಪ್ರಕ್ರಿಯೆ EDCS ನಾಗರಿಕ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ಲಭ್ಯವಿದೆ.
ಅಧಿಕೃತ ವೆಬ್ಸೈಟ್ಗಳು:
ವಿದ್ಯಾರ್ಥಿಗಳು ಈ ವೆಬ್ಸೈಟ್ಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದು:
ಸಹಾಯವಾಣಿ ಸಂಖ್ಯೆ: 9482300400
ಮುಖ್ಯ ಮಾಹಿತಿ:
ಈ ವಿದ್ಯಾರ್ಥಿವೇತನದ ಮೂಲಕ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಶಿಕ್ಷಣದ ಪ್ರೋತ್ಸಾಹಕ್ಕಾಗಿ ಪಾರದರ್ಶಕ ಮತ್ತು ಸಮರ್ಥ ವ್ಯವಸ್ಥೆ ಒದಗಿಸುತ್ತಿದೆ. ಅರ್ಹ ವಿದ್ಯಾರ್ಥಿಗಳು ಕೂಡಲೇ ಅರ್ಜಿಯನ್ನು ಸಲ್ಲಿಸಿ ಶೈಕ್ಷಣಿಕ ಆಧಾರದ ಮೇಲೆ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಬಹುದು.
- ಮಹಿಳೆಯರ ಖಾತೆಗೆ ಶೀಘ್ರದಲ್ಲೇ ಗೃಹಲಕ್ಷ್ಮೀ ಹಣ! ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ – ಏಪ್ರಿಲ್ ಕಂತು ಫಿಕ್ಸ್! - June 3, 2025
- ಇನ್ನು ಮುಂದೆ ಟ್ರಾಫಿಕ್ ಪೀಡನೆಗೆ ಬ್ರೇಕ್! DGP ಡಾ. ಎಂ.ಎ. ಸಲೀಂ ಖಡಕ್ ಆದೇಶ – ಸಾರ್ವಜನಿಕರ ಪರದಿನ ಸುಗಮ ಮಾಡುವ 10 ಸ್ಪಷ್ಟ ಮಾರ್ಗಸೂಚಿ - June 3, 2025
- ಜೂನ್ ರಿಂದ ಎಲ್ಪಿಜಿ ಬೆಲೆಯಲ್ಲಿ ಭಾರಿ ಇಳಿಕೆ! ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿನ ಹೊಸ ದರಗಳ ಮಾಹಿತಿ ಇಲ್ಲಿದೆ - June 2, 2025