Recruitment of apprentices at Mysore SESCOM
ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (CESC) 2025 ನೇ ಸಾಲಿನ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 250 ಹುದ್ದೆಗಳು ಲಭ್ಯವಾಗಿದ್ದು, ಗ್ರಾಜುಯೇಟ್ ಅಪ್ರೆಂಟಿಸ್, ಟೆಕ್ನೀಷಿಯನ್ ಅಪ್ರೆಂಟಿಸ್ ಮತ್ತು ನಾನ್-ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
ಅಪ್ರೆಂಟಿಸ್ ಹುದ್ದೆಗಳ ಹಂಚಿಕೆ:
ಗ್ರಾಜುಯೇಟ್ (ಟೆಕ್ನಿಕಲ್) ಅಪ್ರೆಂಟಿಸ್:
- ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್: 77
- ಸಿವಿಲ್ ಇಂಜಿನಿಯರಿಂಗ್: 03
ಒಟ್ಟು: 80
ಡಿಪ್ಲೊಮ ಅಪ್ರೆಂಟಿಸ್:
- ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್: 51
- ಸಿವಿಲ್ ಇಂಜಿನಿಯರಿಂಗ್: 04
ಒಟ್ಟು: 55
ನಾನ್-ಟೆಕ್ನಿಕಲ್ ಗ್ರಾಜುಯೇಟ್ ಅಪ್ರೆಂಟಿಸ್:
- ಬಿ.ಕಾಂ: 55
- ಬಿ.ಬಿ.ಎ: 15
- ಬಿ.ಸಿ.ಎ: 15
- ಬಿ.ಎ: 20
- ಬಿ.ಎಸ್ಸಿ: 10
ಒಟ್ಟು: 115
ಇನ್ನು ಓದಿ : ಅಂಗನವಾಡಿ ಕೇಂದ್ರಗಳಲ್ಲಿ ಉದ್ಯೋಗಾವಕಾಶ: 219 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಮಾಸಿಕ ಸ್ಟೈಪೆಂಡ್ ವಿವರ:
- ಗ್ರಾಜುಯೇಟ್ ಅಪ್ರೆಂಟಿಸ್: ₹9,000
- ಡಿಪ್ಲೊಮ ಅಪ್ರೆಂಟಿಸ್: ₹8,000
ವಿದ್ಯಾರ್ಹತೆ:
- ಗ್ರಾಜುಯೇಟ್ (ಟೆಕ್ನಿಕಲ್): ಬಿಇ / ಬಿ.ಟೆಕ್ ಪಾಸ್ ಆಗಿರಬೇಕು.
- ಗ್ರಾಜುಯೇಟ್ (ನಾನ್-ಟೆಕ್ನಿಕಲ್): ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ, ಬಿ.ಸಿ.ಎ ಪಾಸ್ ಮಾಡಿರಬೇಕು.
- ಟೆಕ್ನೀಷಿಯನ್ ಅಪ್ರೆಂಟಿಸ್: ಮೂರು ವರ್ಷದ ಡಿಪ್ಲೊಮ ಪಾಸ್ ಮಾಡಿರಬೇಕು.
- 2020 ರಿಂದ 2024ರ ಅವಧಿಯ ಪದವೀಧರರು ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭ: 20 ಜನವರಿ 2025
- ಕೊನೆಯ ದಿನ: 06 ಫೆಬ್ರವರಿ 2025
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ, ದಾಖಲೆ ಪರಿಶೀಲನೆ ಮೂಲಕ ಅಂತಿಮ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಅಭ್ಯರ್ಥಿಗಳು CESC ಮೈಸೂರು ಪೋರ್ಟಲ್ ಅಥವಾ NATS ಪೋರ್ಟಲ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
- CESC ಪೋರ್ಟಲ್: cescmysore.karnataka.gov.in
- NATS ಪೋರ್ಟಲ್: portal.mhrdnats.gov.in
ಅಗತ್ಯ ದಾಖಲೆಗಳು:
- ಎಸ್‌ಎಸ್‌ಎಲ್‌ಸಿ ಪ್ರಮಾಣಪತ್ರ
- ಡಿಪ್ಲೊಮ / ಪದವಿ ಪ್ರಮಾಣಪತ್ರ
- ಆಧಾರ್ ಕಾರ್ಡ್
- ಜನ್ಮದಿನಾಂಕ ದಾಖಲಾತಿ
- ಇಮೇಲ್ ವಿಳಾಸ ಮತ್ತು ಮೊಬೈಲ್ ನಂಬರ್
ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಬಹುದು. ಹೆಚ್ಚಿನ ಮಾಹಿತಿ ಕ್ಕೆ CESC ಮೈಸೂರು ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ.