rtgh

ಐಟಿಐ ಪಾಸಾದವರಿಗೆ ಈಶಾನ್ಯ ರೈಲ್ವೆಯಲ್ಲಿ 1104 ಹುದ್ದೆ: ಪರೀಕ್ಷೆ ಇಲ್ಲದೇ ನೇಮಕಾತಿ

North Eastern Railway Recruitment 2024

Spread the love

Railway Recruitment

ಆರ್‌ಆರ್‌ಸಿ (ರೈಲ್ವೆ ನೇಮಕಾತಿ ಮಂಡಳಿ) ಈಶಾನ್ಯ ರೈಲ್ವೆ 2025-26ನೇ ಸಾಲಿಗೆ 1104 ಆಕ್ಟ್‌ ಅಪ್ರೆಂಟಿಸ್‌ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹತ್ತನೇ ತರಗತಿ ಮತ್ತು ಐಟಿಐ ಅಂಕಗಳ ಆಧಾರದಲ್ಲಿ ಯಾವುದೇ ಪರೀಕ್ಷೆ ಇಲ್ಲದೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

North Eastern Railway Recruitment 2024
North Eastern Railway Recruitment 2024

ಹೈಲೈಟ್ಸ್

  • ಉದ್ಯೋಗದ ಪ್ರಾಧಿಕಾರ: ಈಶಾನ್ಯ ರೈಲ್ವೆ
  • ಹುದ್ದೆಗಳ ಸಂಖ್ಯೆ: 1104
  • ಹುದ್ದೆಯ ಅವಧಿ: 1 ವರ್ಷ
  • ಅಪ್ಲಿಕೇಶನ್ ಪ್ರಾರಂಭ ದಿನಾಂಕ: 24-01-2025
  • ಕೊನೆ ದಿನಾಂಕ: 23-02-2025, ಸಂಜೆ 5 ಗಂಟೆಯೊಳಗೆ
  • ಅರ್ಜಿಯ ಶುಲ್ಕ: ₹100 (ಎಸ್‌ಸಿ, ಎಸ್‌ಟಿ, ಮಹಿಳಾ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ವಿನಾಯಿತಿ)

ಹುದ್ದೆಗಳ ವಿಭಾಗವಾರು ವಿವರ:

ಘಟಕಹುದ್ದೆಗಳ ಸಂಖ್ಯೆ
ಮೆಕ್ಯಾನಿಕಲ್ ವರ್ಕ್‌ಶಾಪ್‌ ಗೋರಖ್‌ಪುರ್411
ಸಿಗ್ನಲ್ ವರ್ಕ್‌ಶಾಪ್‌ ಗೋರಖ್‌ಪುರ್63
ಬ್ರಿಡ್ಜ್‌ ವರ್ಕ್‌ಶಾಪ್‌ ಗೋರಖ್‌ಪುರ್35
ಮೆಕ್ಯಾನಿಕಲ್ ವರ್ಕ್‌ಶಾಪ್‌ ಇಜ್ಜಾತ್‌ ನಗರ್151
ಡೀಸೆಲ್ ಶೇಡ್‌ ಇಜ್ಜಾತ್ ನಗರ್60
ಕ್ಯಾರಿಯೇಜ್ ಅಂಡ್ ವ್ಯಾಗನ್ ಇಜ್ಜಾತ್ ನಗರ್64
ಕ್ಯಾರಿಯೇಜ್ ಅಂಡ್ ವ್ಯಾಗನ್ ಲಕ್ನೋ ಜಂಕ್ಷನ್155
ಡೀಸೆಲ್‌ ಶೆಡ್ ಗೊಂಡ90
ಕ್ಯಾರಿಯೇಜ್ ಅಂಡ್ ವ್ಯಾಗನ್ ವಾರಣಾಸಿ75

ವಿದ್ಯಾರ್ಹತೆ ಮತ್ತು ವಯೋಮಿತಿ:

  • ಎಸ್‌ಎಸ್‌ಎಲ್‌ಸಿ ನಂತರ ಐಟಿಐ (ಎನ್‌ಸಿವಿಟಿ ಅಥವಾ ಎಸ್‌ಸಿವಿಟಿ) ಪಾಸಾಗಿರಬೇಕು.
  • ಐಟಿಐ ತೇರ್ಗಡೆ ಕನಿಷ್ಠ 50% ಅಂಕಗಳೊಂದಿಗೆ ಇರಬೇಕು.
  • ವಯಸ್ಸು: ಕನಿಷ್ಠ 15 ವರ್ಷ, ಗರಿಷ್ಠ 24 ವರ್ಷ.

ಇನ್ನು ಓದಿ: 3ಸಾವಿರ ಲೈನ್‌ಮೆನ್‌ ಹುದ್ದೆಗಳಿಗೆ ನೇಮಕಾತಿ.! ಪ್ರಕ್ರಿಯೆ ಏಪ್ರಿಲ್‌ನೊಳಗೆ ಪೂರ್ಣ.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಹತ್ತನೇ ತರಗತಿ ಹಾಗೂ ಐಟಿಐ ಅಂಕಗಳ ಆಧಾರದಲ್ಲಿ ಮೆರಿಟ್ ಲಿಸ್ಟ್‌ ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ. ಶಾರ್ಟ್‌ಲಿಸ್ಟ್‌ ಆದ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆ ಹಾಗೂ ಸಂದರ್ಶನ ಪ್ರಕ್ರಿಯೆಗೆ ಒಳಪಡಬೇಕಾಗಿದೆ.

ಅರ್ಜಿಯನ್ನು ಸಲ್ಲಿಸುವ ವಿಧಾನ:

  1. ಆರ್‌ಆರ್‌ಸಿ ಈಶಾನ್ಯ ರೈಲ್ವೆಯ ಅಧಿಕೃತ ವೆಬ್‌ಸೈಟ್‌ https://apprentice.rrcner.net/form.php ಗೆ ಭೇಟಿ ನೀಡಿ.
  2. ಹುದ್ದೆ ಬಯಸುವ ಘಟಕ ಮತ್ತು ಟ್ರೇಡ್‌ ಆಯ್ಕೆ ಮಾಡಿ.
  3. ಅಗತ್ಯ ವಿವರಗಳನ್ನು ಭರ್ತಿ ಮಾಡಿ, ಫೋಟೋ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  4. ಆನ್‌ಲೈನ್ ಮೂಲಕ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿ.

ಅಧಿಕೃತ ವೆಬ್‌ಸೈಟ್‌: ಈಶಾನ್ಯ ರೈಲ್ವೆ RRC

ಅರ್ಜಿಗೆ ಕೊನೆ ದಿನಾಂಕ: 23-02-2025.

ನೋಟ್: ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಪರಿಶೀಲಿಸಿ.

Sharath Kumar M

Spread the love

Leave a Reply

Your email address will not be published. Required fields are marked *