Reels: ತನ್ನ ನಾಗರಿಕರಲ್ಲಿ ಸೃಜನಶೀಲತೆ ಮತ್ತು ನಿಶ್ಚಿತಾರ್ಥವನ್ನು ಉತ್ತೇಜಿಸುವ ಪ್ರಯತ್ನದಲ್ಲಿ, ರಾಜ್ಯ ಸರ್ಕಾರವು 50 ಸಾವಿರ ರೂಪಾಯಿಗಳ ಆಕರ್ಷಕ ನಗದು ಬಹುಮಾನದೊಂದಿಗೆ ರೋಮಾಂಚನಕಾರಿ ರೀಲ್ಸ್ ಸ್ಪರ್ಧೆಯನ್ನು ಘೋಷಿಸಿದೆ. ಈ ವಿಶೇಷ ಉಪಕ್ರಮವು ಕಿರು-ರೂಪದ ವೀಡಿಯೊ ವಿಷಯದ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಟ್ಯಾಪ್ ಮಾಡಲು ಮತ್ತು ವ್ಯಕ್ತಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಸದ್ಯ ರಾಜ್ಯ ಸರ್ಕಾರ ವಿದ್ಯಾರ್ಥಿಗಳು ಹಾಗೂ ಯುವ ಜನತೆಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ವಿಶೇಷ ಯೋಜನೆಯನ್ನೇ ರೂಪಿಸಿದೆ. ಈಗಾಗಲೇ ಸಂವಿಧಾನದ ಮಹತ್ವ ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆಯ ಓದನ್ನು ಕಡ್ಡಾಯಗಳಿಸಿದೆ. ಇದೀಗ ಸರ್ಕಾರ ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ಸಂವಿಧಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹೊಸ ಪ್ರಯತನಕ್ಕೆ ಮುಂದಾಗಿದೆ.
ರೀಲ್ಸ್ ಮಾಡಿದವರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಬಹುಮಾನ
ಸದ್ಯ ರಾಜ್ಯ ಸರ್ಕಾರ ಸಂವಿಧಾನದ ಜಾಗೃತಿ ಜಾಥದ ಅಂಗವಾಗಿ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ ಎನ್ನುವ ಸುವರ್ಣಾವಕಾಶವನ್ನು ನೀಡಿದೆ. ಕೇವಲ ಪುಸ್ತಕ ಅಥವಾ ಶಾಲಾ ಕಾಲೇಜುಗಳಿಗೆ ಸೀಮಿತವಾಗಿರದೆ ಪ್ರತಿಯೊಬ್ಬರಿಗೂ ಇದು ತಲುಪಬೇಕು ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ಸಾಮಾಜಿಕ ಜಾಲತಾಣದ ಮೊರೆ ಹೋಗಿದೆ. ಡಿಜಿಟಲ್ ಯುಗಕ್ಕೆ ತಕ್ಕಂತೆ ರೀಲ್ಸ್ ಮೂಲಕ ಸಂವಿಧಾನದ ಜಾಗೃತಿ ಮೂಡಿಸಲು ವಿಶೇಷ ಆಫರ್ ಅನ್ನು ಸರ್ಕಾರ ಘೋಷಿಸಿದೆ.
ರೀಲ್ಸ್ ಮಾಡಿದರೆ ಸಿಗಲಿದೆ ಭರ್ಜರಿ 50 ಸಾವಿರ ನಗದು ಬಹುಮಾನ
ಹೌದು, ಸರ್ಕಾರ ಘೋಷಿಸಿರುವ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ ಯೋಜನೆಯಲ್ಲಿ ಬಾರಿ ಮೊತ್ತದ ನಗದು ಬಹುಮಾನವನ್ನು ಪಡೆಯಬಹುದು. ಕೇವಲ 30 ರಿಂದ 40 ಸೆಕೆಂಡ್ ಗಳ ವಿಡಿಯೋದಲ್ಲಿ ಸಂವಿಧಾನ ಜಾಗೃತಿ ಜಾಥಾದ ಬಗ್ಗೆ ಜಾಗೃತಿ ಮೂಡಿಸಬೇಕು. ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವಂತಹ ರೀಲ್ಸ್ ಮಾಡಿದರೆ ಪ್ರಥಮ ಬಹುಮಾನ 50000 , ದ್ವಿತೀಯ ಬಹುಮಾನ 25000 ಹಾಗೂ ತೃತೀಯ ಬಹುಮಾನ 15000 ನೀಡುವುದಾಗಿ ಸರ್ಕಾರ ಘೋಷಿಸಿದೆ.
ಇನ್ನು ಓದಿ: ರೈತನನ್ನು ಮದುವೆಯಾದ ಯುವತಿಗೆ ಸಿಗಲಿದೆ 5 ಲಕ್ಷ! ಯುವ ರೈತರಿಗೆ ಕನ್ಯಾ ಭಾಗ್ಯ.
ನೀವು ಮಾಡುವ ರೀಲ್ಸ್ ನಲ್ಲಿ ಇರಬೇಕಾದ ಅಂಶಗಳು
•ಮೂಲಭೂತ ಕರ್ತವ್ಯಗಳು
•ಮೂಲಭೂತ ಹಕ್ಕುಗಳು
•ಸಂವಿಧಾನದ ಮಹತ್ವ
•ಪೀಠಿಕೆಯ ವೈಶಿಷ್ಟ್ಯ
•ಸಂವಿಧಾನಕ್ಕೆ ಸಂಬಂಧಿಸಿದ ಯಾವುದೇ ಅಂಶ
ರೀಲ್ಸ್ ಮಾಡಲು ವಿಧಿಸಲಾದ ಷರತ್ತುಗಳೇನು..?
*ಆಯೋಜಕ ತಂಡದಿಂದ ಅನುಮೋದಿಸಲ್ಪಟ್ಟವರಿಗೆ ಮಾತ್ರ ಅನುಮತಿಸಲಾಗಿದೆ
*ರೀಲ್ಸ್ ಗಳು ನಿರ್ದಿಷ್ಟಪಡಿಸಿದ ವಿಷಯವನ್ನು ಹೊಂದಿರಬೇಕು
*ರೀಲ್ಸ್ URL ಅನ್ನು ಫೆಬ್ರವರಿ 20 ರೊಳಗೆ ಸಂಘಟಕರಿಗೆ ಕಳುಹಿಸಬೇಕು.
*ಆಯೋಜಕ ತಂಡದ ಪ್ರಕಾರ, 22 ಫೆಬ್ರವರಿ 5 ರವರೆಗೆ ಸಾಮಾಜಿಕ ಮಾಧ್ಯಮದಲ್ಲಿ ಬಂದ ಲೈಕ್ಸ್ ಗಳ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
Pingback: ಬಜೆಟ್‌ನಲ್ಲಿ ಬಂಪರ್ ಗುಡ್‌ನ್ಯೂಸ್! ರೈತರ ಅವಧಿ ಮೀರಿದ ಸಾಲದ ಮೇಲಿನ ಬಡ್ಡಿ ಮನ್ನಾ