ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ನಾವು ನಿಮಗೆ ಫ್ರೀ ಬಸ್ ಯೋಜನೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ ಏನೆಂದರೆ, ಫ್ರೀ ಬಸ್ ಪ್ರಯಾಣಿಕರಿಗೆ ಒಂದು ಮಹತ್ವದ ಮಾಹಿತಿಯನ್ನು ಸರ್ಕಾರ ಹೊರಹಾಕಿದೆ ಬನ್ನಿ ಇದರ ಬಗ್ಗೆ ನಾವು ಕಂಪ್ಲೀಟ್ ಡೀಟೇಲ್ಸ್ ಇಡಲಿದ್ದೇವೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೆ ಬಂದ ಮೊದಲ ಯೋಜನೆ ಶಕ್ತಿ ಯೋಜನೆ. ರಾಜ್ಯದ ಎಲ್ಲಾ ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುವ ಸೌಲಭ್ಯವನ್ನು ನೀಡಲಾಗಿದೆ. ಸುಮಾರು ಒಂದು ವರ್ಷಗಳಿಂದ ಮಹಿಳೆಯರು ಶಕ್ತಿ ಯೋಜನೆಯ ಮೂಲಕ ರಾಜ್ಯದ ಎಲ್ಲೆಡೆ ಉಚಿತವಾಗಿ ಪ್ರಯಾಣ ಬೆಳೆಸುತ್ತಿದ್ದಾರೆ. ಇದೀಗ ಶಕ್ತಿ ಯೋಜನೆಯ ಮೂಲಕ ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿರುವ ಎಲ್ಲಾ ಮಹಿಳೆಯರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿಗೆ ತರಲಾಗಿದೆ.
ಶಕ್ತಿ ಯೋಜನೆ:
ಶಕ್ತಿ ಯೋಜನೆ ಎಲ್ಲಾ ಮಹಿಳೆಯರಿಗೆ ಬಹಳ ಅನುಕೂಲ ನೀಡಿದೆ, ಹಾಗೆಯೇ ಎಲ್ಲರೂ ಸರ್ಕಾರಿ ಬಸ್ ಗಳಲ್ಲಿ ಓಡಾಡುವ ಹಾಗೆ ಮಾಡಿದೆ. ಆದರೆ ಇದರಿಂದ ಸರ್ಕಾರಕ್ಕೆ ಹೆಚ್ಚು ಹೊರೆ ಆಗಿದೆ ಎಂದು ಹೇಳಿದರೆ ಕೂಡ ತಪ್ಪಲ್ಲ.
ಮಹಿಳೆಯರು ಇಡೀ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣ ಮಾಡುತ್ತಾ ಓಡಾಡುತ್ತಿದ್ದಾರೆ. ಆದರೆ ಇವರಿಗೆ ಇದೀಗ ಸರ್ಕಾರವು ಕೆಲವು ಹೊಸ ರೂಲ್ಸ್ ಗಳನ್ನು ಜಾರಿಗೆ ತಂದಿದ್ದು, ಎಲ್ಲಾ ಮಹಿಳೆಯರು ಕೂಡ ಈ ರೂಲ್ಸ್ ಗಳನ್ನು ಪಾಲಿಸಲೇಬೇಕಾಗಿದೆ. ಹೌದು, ಹೊಸ ರೂಲ್ಸ್ ಗಳು ಬಂದಿರುವುದೇನೋ ನಿಜ.. ಅದರ ಜೊತೆಗೆ ನೀವು ಇನ್ನು ಕೆಲವು ವಿಚಾರಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಮಹಿಳೆಯರು ಪ್ರಯಾಣ ಮಾಡುವುದಕ್ಕೆ ಅವರಿಗೆ ಉಚಿತ ಟಿಕೆಟ್ ಸಿಗುತ್ತದೆ.
ಆದರೆ ಮಹಿಳೆಯರು ತರುವ ಲಗೇಜ್ ಬಗ್ಗೆ ಗಮನ ಇರಬೇಕು, ಇಂತಿಷ್ಟು ತೂಕದ ಲಗೇಜ್ ಅನ್ನು ತರಲು ಉಚಿತ ಆದರೆ ಹೆಚ್ಚಿನ ತೂಕದ ಲಗೇಜ್ ತಂದರೆ, ಆ ಲಗೇಜ್ ಗೆ ಹಣ ಪಾವತಿ ಮಾಡಬೇಕಾಗುತ್ತದೆ. ಈ ವಿಚಾರ ಎಲ್ಲಾ ಮಹಿಳೆಯರಿಗೆ ನೆನಪಿರಬೇಕು. ಹಾಗೆಯೇ ಇನ್ನು 6 ನಿಯಮಗಳನ್ನು ತಿಳಿದುಕೊಂಡಿರಬೇಕು.
ಶಕ್ತಿ ಯೋಜನೆಗೆ ಹೊಸದಾದ 6 ನಿಯಮಗಳು
ಇನ್ಮುಂದೆ ಎಲ್ಲಾ ಮಹಿಳೆಯರು ಕೂಡ ಶಕ್ತಿ ಯೋಜನೆಗೆ ಸಂಬಂಧಿಸಿದ ಹಾಗೆ ಪ್ರಯಾಣ ಮಾಡುವುದಕ್ಕಿಂತ ಮೊದಲು ಈ 6 ನಿಯಮಗಳನ್ನು ತಿಳಿದುಕೊಳ್ಳಬೇಕು..
- ಶಕ್ತಿ ಯೋಜನೆ ಆರಂಭದಲ್ಲಿ ಪುರುಷರಿಗೆ 50% ಸೀಟ್ ಬಿಟ್ಟುಕೊಡಬೇಕು ಎನ್ನುವ ಮಾತು ಕೇಳಿಬಂದಿತ್ತು, ಈಗ ನಿಯಮ ಬದಲಾಗಿದ್ದು ಮಹಿಳೆಯರು ಪುರುಷರ ಸೀಟ್ ನಲ್ಲಿ ಕೂರಬಹುದು.
- ಒಂದು ವೇಳೆ ಮಹಿಳೆಯರ ಸೀಟ್ ನಲ್ಲಿ ಪುರುಷರು ಕುಳಿತುಕೊಂಡರೆ 100 ರೂಪಾಯಿ ದಂಡ ವಿಧಿಸಲಾಗುತ್ತದೆ.
- ಆದರೆ ಮಹಿಳೆಯರು ಪುರುಷರ ಸೀಟ್ ನಲ್ಲಿ ಕುಳಿತರೆ ಅವರಿಗೆ ದಂಡ ಇರುವುದಿಲ್ಲ.
- ಪುರುಷರ ಸೀಟ್ ಗಳು ಭರ್ತಿ ಆಗಿಲ್ಲದೇ ಇರುವಾಗ ಮಾತ್ರ ಮಹಿಳೆಯರು ಈ ರೀತಿ ಕೂರಬಹುದು.
ಇದಿಷ್ಟು ಶಕ್ತಿ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಮಹಿಳೆಯರಿಗೆ ಸರ್ಕಾರ ಜಾರಿಗೆ ತಂದಿರುವ ಹೊಸ ರೂಲ್ಸ್ ಆಗಿದೆ. ಈ ಎಲ್ಲಾ ರೂಲ್ಸ್ ಗಳನ್ನು ಮಹಿಳೆಯರು ಫಾಲೋ ಮಾಡಬೇಕಾಗುತ್ತದೆ.