ಸ್ನೇಹಿತರೆ ಆಧಾರ್ ಕಾರ್ಡ್ ಎಂಬುದು ನಮ್ಮದು ನಮ್ಮ ಒಂದು ಗುರುತಾಗಿದೆ ಹೀಗಾಗಿ ನಿಮ್ಮ ಆಧಾರ್ ಕಾರ್ಡ್ ನಲ್ಲಿ ತುಂಬಾ ಹಳೆಯ ಫೋಟೋ ಇದಿಯಾ ಆ ಫೋಟೋವನ್ನು ಇವಾಗ ನಾವು ತುಂಬಾ ಸುಲಭವಾಗಿ ಚೇಂಜ್ ಮಾಡಬಹುದು ಬನ್ನಿ ಸ್ನೇಹಿತರೆ ಈ ಲೇಖನದಲ್ಲಿ ನಾವು ಆಧಾರ್ ಕಾರ್ಡ್ ನಲ್ಲಿರುವ ಫೋಟೋವನ್ನು ಹೇಗೆ ಚೇಂಜ್ ಮಾಡಬಹುದೆಂದು ನಾವು ನಿಮಗೆ ತಿಳಿಸಿಕೊಳ್ಳಲಿದ್ದೇವೆ.
ಆಧಾರ್ ಕಾರ್ಡ್” ಪ್ರಮುಖ ದಾಖಲೆಯಲ್ಲಿ ಒಂದಾಗಿದೆ. ಭಾರತದ ಸರ್ಕಾರದ ಕಡೆಯಿಂದ ಸಿಗುವ ಆಧಾರ್ ಕಾರ್ಡ್ ಗುರುತು & ವಿಳಾಸದ ಪುರಾವೆಯಾಗಿ ಕಾರ್ಯವನ್ನು ನಿರ್ವಹಿಸುತ್ತದೆ. ಆಧಾರ್ ಕಾರ್ಡ್ 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆ ಇರುತ್ತದೆ . ಅದು ಭಾವಚಿತ್ರದೊಂದಿಗೆ ಬಯೋಮೆಟ್ರಿಕ್ ಮಾಹಿತಿಯನ್ನು ಹೊಂದಿರಲಿದೆ.
ಮಗುವನ್ನು ಶಾಲೆಗೆ ಸೇರಿಸುವುದರಿಂದ ಹಿಡಿದು ಬ್ಯಾಂಕ್ ವ್ಯವಹಾರದವರೆಗೆ ಎಲ್ಲಾ ಕಡೆಗಳಲ್ಲಿ ಆಧಾರ್ ಕಾರ್ಡ್ ಬೇಕಾಗುತ್ತದೆ. ಆಧಾರ್ ಕಾರ್ಡ್ನಲ್ಲಿರುವ ನಿಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ & ಇತರ ಮಾಹಿತಿಯು ಸರಿಯಾಗಿರುವುದು ಬಹಳ ಮುಖ್ಯವಾಗಿರುತ್ತದೆ. UIDAI ಪ್ರಕಾರ, ಪ್ರತಿ 10 ವರ್ಷಕ್ಕೊಮ್ಮೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕು. ಆಗ ನಿಮ್ಮ ಹೆಸರು, ವಿಳಾಸ / ಇತರ ಮಾಹಿತಿಯನ್ನು ಬದಲಾಯಿಸಬಹುದು. ಇದಲ್ಲದೆ, ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋವನ್ನು ಕೂಡಾ ಚೇಂಜ್ ಮಾಡಬಹುದು.
ಆಧಾರ್ ಕಾರ್ಡ್ನಲ್ಲಿರುವ ಫೋಟೋ ನಿಮಗೆ ಇಷ್ಟವಾಗುತ್ತಿಲ್ಲವೆ, ಹಾಗಿದ್ದರೆ ಅದನ್ನು ಬದಲಾಯಿಸಬಹುದು. ಆಧಾರ್ ಕಾರ್ಡ್ ನಲ್ಲಿರುವ ಫೋಟೋವನ್ನು ಸುಲಭವಾಗಿ ಡಿಲೀಟ್ ಮಾಡಿ ಹೊಸ ಫೋಟೋವನ್ನು ಅಪ್ಲೋಡ್ ಮಾಡಬಹುದಾಗಿದೆ. ಆಧಾರ್ ಕಾರ್ಡ್ ನಲ್ಲಿರುವ ಫೋಟೋ ಬದಲಾಯಿಸುವ ಹಂತ ಹಂತದ ಪ್ರಕ್ರಿಯೆ ಇಲ್ಲಿ ತಿಳಿಯಿರಿ.
ಮನೆಯಲ್ಲಿಯೇ ಆಧಾರ್ ಕಾರ್ಡ್ ಫೋಟೋ ಬದಲಾಯಿಸಲು ಸಾಧ್ಯವಾಗುತ್ತದೆಯೇ? :
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಪ್ರಕಾರ, ಆಧಾರ್ ಕಾರ್ಡ್ನಿಂದ ಫೋಟೋವನ್ನು ಬದಲಾಯಿಸಿಕೊಳ್ಳಬಹುದು/ ಅಪ್ಡೇಟ್. ಆದರೆ ಈ ಪ್ರಕ್ರಿಯೆಯನ್ನು ಮನೆಯಿಂದಲೇ ಮಾಡಲಾಗುವುದಿಲ್ಲ. ಇದಕ್ಕಾಗಿ ನೀವು ಹತ್ತಿರದ ಆಧಾರ್ ಕೇಂದ್ರವನ್ನು ಭೇಟಿ ಮಾಡಬೇಕು. ಆದರೆ ಆಧಾರ್ನಿಂದ ಫೋಟೋ ಬದಲಾವಣೆಗೆ ಮಾಡಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ
ಆಧಾರ್ ಫೋಟೋ ಬದಲಾವಣೆ ಫಾರ್ಮ್ ಅನ್ನು ಡೌನ್ಲೋಡ್ ಮಾಡುವುದು ಹೇಗೆ?
- UIDAI uidai.gov.in ನ ಅಧಿಕೃತ ಸೈಟ್ಗೆ ಭೇಟಿ ನೀಡಿ.
- ನಿಮ್ಮ ಆಧಾರ್ ಲಿಂಕ್ ಮಾಡಲಾದ ಫೋನ್ ಸಂಖ್ಯೆ & ಆ ನಂಬರ್ ಗೆ ಬರುವ OTP ಅನ್ನು ನಮೂದಿಸಿ.
- ಲಾಗಿನ್ ಆದ ನಂತರ, ಆಧಾರ್ ನೋಂದಣಿ ಫಾರ್ಮ್ ಕಂಡುಬರುತ್ತದೆ.
- ಆಧಾರ್ ನೋಂದಣಿ ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
ಆಧಾರ್ ಕಾರ್ಡ್ನಿಂದ ಫೋಟೋ ಬದಲಾಯಿಸುವುದು ಹೇಗೆ?
ಆಧಾರ್ ನೋಂದಣಿ ಫಾರ್ಮ್ ಭರ್ತಿ ಮಾಡಿದ ಬಳಿಕ, ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ. ಫಾರ್ಮ್ ಅನ್ನು ಇಲ್ಲಿ ಸಲ್ಲಿಸಿದ ನಂತರ, ನಿಮ್ಮ ಬಯೋಮೆಟ್ರಿಕ್ ವಿವರಗಳನ್ನು ಚೆಕ್ ಮಾಡಿ. ಬಳಿಕ 100 ರೂ. ಶುಲ್ಕ ಪಾವತಿಸಿ ಆಧಾರ್ ಕಾರ್ಡ್ನಲ್ಲಿ ಹೊಸ ಫೋಟೋವನ್ನು ಅಪ್ಡೇಟ್ ಮಾಡಬಹುದು. ಆನ್ಲೈನ್ ಕಾರ್ಯವಿಧಾನವನ್ನು ಅನುಸರಿಸುವ ಮೂಲಕ ಫೋಟೋ ಅಪ್ಡೇಟ್ ಮಾಡಿದ ಆಧಾರ್ ಅನ್ನು ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.