rtgh

ಪಹಣಿ ಪತ್ರಕ್ಕೆ ಆಧಾರ್ ಲಿಂಕ್ ಕಡ್ಡಾಯ! ಸರ್ಕಾರದಿಂದ ಹೊಸ ಆದೇಶ! ಲಿಂಕ್ ಮಾಡಲು ಹೀಗೆ ಮಾಡಿ.


ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ನಾವು ನಿಮಗೆ ಪಹಣಿಗೆ ಆಧಾರ್ ಲಿಂಕ್ ಅನ್ನು ಹೇಗೆ ಮಾಡಬಹುದು ಎಂದು ನಾವು ನಿಮಗೆ ತಿಳಿಸಿಕೊಳ್ಳುತ್ತೇವೆ ಆದ್ದರಿಂದ ಈ ಲೇಖನವನ್ನು ನೀವು ಗಮನವಿಟ್ಟು ಓದಿ ಈಗ ಸರ್ಕಾರವು ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಅನ್ನು ಕಡ್ಡಾಯ ಮಾಡಿದೆ ಇದರಿಂದ ನೀವು ಈ ಕೆಲಸವನ್ನು ಕೂಡಲೇ ಮಾಡಿ.

Aadhaar link is mandatory for Pahani letter
Aadhaar link is mandatory for Pahani letter

ರೈತರು ತಮ್ಮ ಜಮೀನಿನ ಪಹಣಿಪತ್ರ (ಆರ್‌ಟಿಸಿ)ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಶೀಘ್ರದಲ್ಲೇ ಕಡ್ಡಾಯವಾಗಲಿದೆ. ಸರ್ಕಾರದ ಯಾವುದೇ ಸವಲತ್ತು ಪಡೆಯಬೇಕಾದರೆ ರೈತರು ತಮ್ಮ ಆರ್‌ಟಿಸಿಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಜೋಡಿಸಬೇಕು. ಇದಕ್ಕಾಗಿ ಸರ್ಕಾರ ಹೊಸ ತಂತ್ರಾಂಶವನ್ನು ಸಿದ್ಧಪಡಿಸಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ..

ಇದನ್ನು ರೈತರು ತಮ್ಮ ಮೊಬೈಲ್‌ನಿಂದ ಮನೆಯಲ್ಲೇ ಕುಳಿತುಕೊಂಡು ಮಾಡಬಹುದು. ಅಥವಾ ತಮ್ಮ ಗ್ರಾಮ ಲೆಕ್ಕಿಗರ ಕಚೇರಿಗೆ ಭೇಟಿ ನೀಡಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಆರ್‌ಟಿಸಿಗೆ ಆಧಾರ್‌ ಕಾರ್ಡ್‌ ಲಿಂಕ್ ಮಾಡಲು ನಿರ್ಲಕ್ಷ್ಯ ತೋರಿದರೆ ಅಥವಾ ಉದಾಸೀನ ಮಾಡಿದರೆ ಮುಂದಿನ ದಿನಗಳಲ್ಲಿ ಅಂತಹ ರೈತರಿಗೆ ಸರ್ಕಾರ ಯಾವುದೇ ಸೌಲಭ್ಯಗಳು ದೊರಕಲು ಸಮಸ್ಯೆ ಉಂಟಾಗಲಿದೆ.

ಸರ್ಕಾರ ನೀಡಿರುವ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ ಆಧಾರ್ ಕಾರ್ಡ್‌ಗೆ ಜೋಡಣೆಯಾಗಿರುವ ಮೊಬೈಲ್ ನಂಬರ್ ಹಾಕಬೇಕು. ಆಗ ಬರುವ OTP ಯನ್ನು ಬಳಸಿ ಮುಂದಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಮೊಬೈಲ್‌ಗೆ ಸಂದೇಶಗಳು ಬರುತ್ತವೆ. ಆರ್‌ಟಿಸಿಯನ್ನು ಆಧಾರ್‌ ಕಾರ್ಡ್‌ಗೆ ಲಿಂಕ್ ಮಾಡುವುದರಿಂದ ಜಮೀನಿನ ದಾಖಲೆಗಳು ಸುರಕ್ಷಿತವಾಗಲಿದ್ದು, ಭೂ ದಾಖಲೆಗಳನ್ನು ಪಡೆಯುವುದು ಸುಲಭ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಸರಳವಾಗಲಿದ್ದು, ಖಾತೆಗಳ ವಿವಾದವನ್ನು ತಪ್ಪಿಸಲು ಇದು ಅನುಕೂಲವಾಗಲಿದೆ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪ್ರಕ್ರಿಯೆಯೂ ಸುಲಭವಾಗಲಿದೆ.

ಜಮೀನ ಮಾರಾಟದ ಸಮಯದಲ್ಲಿ ಪಾರದರ್ಶಕತೆ ಉಂಟಾಗಲಿದೆ. ಅಂಡ್ರಾಯ್ಡ್ ಮೊಬೈಲ್ ಇಲ್ಲದವರು ಹಾಗೂ ಲಿಂಕ್ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದವರು ತಮ್ಮ ಊರಿನ ಗ್ರಾಮ ಲೆಕ್ಕಾಧಿಕಾರಿ ಕಚೇರಿಯಲ್ಲಿ ಅಗತ್ಯ ವಿವರವನ್ನು ಪಡೆಯಬಹುದು.

ಹೊಲದ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಏಕೆ ಮಾಡಿಸಬೇಕು?

ಸರ್ಕಾರದ ಯೋಜನೆಗಳನ್ನು ಸುಲಭವಾಗಿ ಪಡೆಯಬಹುದು : ಹೊಲದ ಪಹಣಿ ಮತ್ತು ಆಧಾರ್ ಕಾರ್ಡ್ ಲಿಂಕ್ (rtc aadhar link)ಮಾಡಿಸುವುದರಿಂದ ಆಧಾರ್ ಆಧಾರಿತ ಸರ್ಕಾರದ ಯಾವುದೇ ಯೋಜನೆಗಳನ್ನು ರೈತರು ಸುಲಭವಾಗಿ ಹಾಗೂ ನೇರವಾಗಿ ಪಡೆಯಬಹುದು. ಬೆಳೆ ಪರಿಹಾರ,ಪಿಎಂ ಕಿಸಾನ್ ಯೋಜನೆ ಇನ್ನಿತರ ಹಣವನ್ನು ಸುಲಭವಾಗಿ ಪಡೆಯಬಹುದು.

ಭೂ ದಾಖಲೆಗಳನ್ನು ಡಿಜಿಟಲ್ ಮಾಡಲು : ಈ ಹೊಲದ ಪಹಣಿ ಮತ್ತು ಆಧಾರ್ ಲಿಂಕ್ ಮಾಡುವುದರಿಂದ ಭೂಮಿಯ ಎಲ್ಲ ದಾಖಲೆಗಳನ್ನು ಡಿಜಿಟಲ್ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.

ಭೂ ದಾಖಲೆಗಳ ವಂಚನೆ ತಡೆಯಲು : ಈ ಲಿಂಕ್ ಕಡ್ಡಾಯ ಕ್ರಮದಿಂದ ಭೂಮಿಯ ದಾಖಲೆಗಳ ಅಕ್ರಮ ಮಾಹಿತಿ ಗುರುತಿಸಲು ಮತ್ತು ಮುಂದೆ ಅಕ್ರಮ ಆಗದ ರೀತಿ ತಡೆಯಲು ಸಹಕಾರಿಯಾಗಿದೆ.ಇದಲ್ಲದೆ ಒಬ್ಬ ವ್ಯಕ್ತಿಯ ಒಟ್ಟು ಜಮೀನಿನ ನಿಖರವಾದ ಮಾಹಿತಿಯನ್ನು ಸುಲಭವಾಗಿ ತಿಳಿಯಬಹುದು.

ಪಹಣಿ ಮತ್ತು ಆಧಾರ್ ಕಾರ್ಡ್ ಲಿಂಕ್ (rtc aadhar link) ಮಾಡಿಸುವುದರಿಂದ ಲಾಭಗಳು :

1. ನಿಮ್ಮ ಭೂಮಿಯ ದಾಖಲೆಗಳನ್ನು (ಊದಾ:ಪಹಣಿ, ಆಕರ ಬಂದ,ಪೋಡಿ,ಹಿಡುವಳಿ..) ಸುಲಭವಾಗಿ ಪಡೆಯಬಹುದು.

2. ಪಹಣಿ ಮತ್ತು ಆಧಾರ್ ಲಿಂಕ್ ಮಾಡಿಸುವುದರಿಂದ ಸರ್ಕಾರದ ಯೋಜನೆಗೆ ರೈತರು ಸುಲಭವಾಗಿ ಅರ್ಜಿ ಹಾಕಬಹುದು.

3. ಹೀಗೆ ಲಿಂಕ್ ಮಾಡುವುದರಿಂದ ರೈತರ ಭೂಮಿಯಲ್ಲಿ ಯಾವುದೇ ವಿವಾದಗಳು ಬರುವುದಿಲ್ಲ.

4. ರೈತರು ತಮ್ಮ ಹೊಲದ ಮೇಲೆ ಸುಲಭವಾಗಿ ಯಾವುದೇ ಲೋನ್ ಮತ್ತು ಸಾಲವನ್ನು ಪಡೆಯಬಹುದು.

5. ರೈತರು ಭೂಮಿ ಮರುವಾಗ ಮತ್ತು ಕೊಳ್ಳುವಾಗ ಪಾರದರ್ಶಕತೆ ಹೆಚ್ಚುತ್ತದೆ.

6. ಒಬ್ಬ ವ್ಯಕ್ತಿಯ ಎಲ್ಲಾ ಜಮೀನಿನ ವಿವರ ಸುಲಭವಾಗಿ ತಿಳಿಯಬಹುದು.

ಪಹಣಿಗೆ ಆಧಾರ್ ಲಿಂಕ್ ಮಾಡಲು ಯಾವ ಡಾಕ್ಯುಮೆಂಟ್ ಬೇಕು ?

1.ನಿಮ್ಮ ಜಮೀನಿನ ಪಹಣಿ

2.ನಿಮ್ಮ ಆಧಾರ್

3.ನಿಮ್ಮ ಫೋನ್ ನಂಬರ್

4.ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ

ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಹೇಗೆ ?

ರೈತರು ತಮ್ಮ ಹೊಲದ ಪಹಣಿಗೆ ಆಧಾರ್ ಲಿಂಕ್ ಮಾಡಿಸಲು ಯಾವುದೇ ರೀತಿ ಪರಡಬೇಕಿಲ್ಲ.ಸರ್ಕಾರವು ರೈತರಿಗೆ ಸರಳ ವಿಧಾನವನ್ನು ಅನುಸರಿಸಲು ಸುಚಿಸಿದೆ. ಆಧಾರ್ ಕಾರ್ಡ್ ಲಿಂಕ್ ಮಾಡಲು ಈ ಕೆಳಗಿನ ಹಂತಗಳನ್ನು ಪಾಲಿಸಿ.

•ಆಫ್ಲೈನ್ ವಿಧಾನ :ನಿಮ್ಮ ಜಮೀನು ಅಥವಾ ಹೊಲದ ಪಹಣಿ ಮತ್ತು ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಗಳ ಭೇಟಿ ನೀಡಿ ಲಿಂಕ್ ಮಾಡಲು ಹೇಳಿ.

•ಆನ್ಲೈನ್ ವಿಧಾನ : ನಿಮ್ಮ ಹತ್ತಿರದ ಗ್ರಾಮ ಒನ್ ಸೆಂಟರ್ ಗಳಿಗೆ ಭೇಟಿ ನೀಡಿ ಪಹಣಿ ಮತ್ತು ಆಧಾರ್ ಕಾರ್ಡ್ ನೀಡಿ ಲಿಂಕ್ ಮಾಡಲು ಅರ್ಜಿ ಸಲ್ಲಿಸಿ.

https://landrecords.karnataka.gov.in/service4/

ಮೊಬೈಲ್ ಅಲ್ಲಿ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ ?

ನಿಮ್ಮ ಮೊಬೈಲ್ ಅಲ್ಲಿಯೇ ನೀವು ನಿಮ್ಮ ಹೊಲದ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು .ಲಿಂಕ್ ಮಾಡಲು ಅಧಿಕೃತ ಲಿಂಕ್ ಮೇಲೆ ನೀಡಲಾಗಿದೆ.

•ಮೇಲೆ ನೀಡಿದ ಭೂಮಿ ಇಲಾಖೆಯ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ.

•ನಂತರ ಅಲ್ಲಿ ನಿಮ್ಮ ಹೆಸರ ಫೋನ್ ನಂಬರ್ ಹಾಕಿ ರೆಜಿಸ್ಟರ್ ಮಾಡಿಕೊಂಡು ಲಾಗಿನ್ ಆಗಿ.

•ನಿಮ್ಮ ಆಧಾರ್ ಕಾರ್ಡ್ ಮತ್ತು ಪಹಣಿಯ ಮಾಹಿತಿಯನ್ನು ಭರ್ತಿ ಮಾಡಿ.

•ಪಹಣಿ ಲಿಂಕ್ ಅಂತ ಕ್ಲಿಕ್ ಮಾಡಿ. ವೇರಿಫೈ ಮಾಡಿ.

•ನಿಮ್ಮ ಆಧಾರ್ ಕಾರ್ಡ್ ಮತ್ತು ಪಹಣಿಯ ಫೋಟೋ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.

•ನಂತರ ಇನ್ನೊಮ್ಮೆ ನಿಮ್ಮ ಆಧಾರ್ ಮತ್ತು ಪಹಣಿ ಸಂಖ್ಯೇ ಖಚಿತ ಪಡಿಸಿಕೊಂಡು ಅರ್ಜಿಯನ್ನು ಸಲ್ಲಿಸಿ.


Leave a Reply

Your email address will not be published. Required fields are marked *