rtgh

Breaking News! ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ.! ಈ ದಾಖಲೆಗಳು ಬೇಕೇ ಬೇಕು.


ನಮಸ್ಕಾರ ಸ್ನೇಹಿತರೇ ರಾಜ್ಯ ಸರ್ಕಾರವು ರೈತರಿಗೆ ಸಂತಸದ ಸುದ್ದಿಯನ್ನು ಹೊರ ಹಾಕಿದ್ದು ಅದೇನೆಂದರೆ ಹೊಸ ರೇಷನ್ ಕಾರ್ಡ್ ಗಳಿಗೆ ಈಗ ಮತ್ತೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಲೇಖನದಲ್ಲಿ ನಾವು ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಹಂತಗಳನ್ನು ನೀಡಿದ್ದೇವೆ.

Again opportunity to apply for new ration card
Again opportunity to apply for new ration card

ರೇಷನ್ ಕಾರ್ಡ್ ಅಡಿಯಲ್ಲಿ ಅನೇಕ ಜನರಿಗೆ ಸೌಲಭ್ಯಗಳು ಒದಗುತ್ತಿದ್ದು ರಾಜ್ಯದಲ್ಲಿ ತುಂಬಾ ಜನರಲ್ಲಿ ರೇಷನ್ ಕಾರ್ಡ್ಗಳ ಅಭಾವ ಇದೆ ಹೀಗಾಗಿ ಸರ್ಕಾರವು ಜನರಿಗೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಈಗ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನು ಕೋರಿದೆ.

ಯಾವಾಗಿನಿಂದ ಫಲಾನುಭವಿಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು?

ಏಪ್ರಿಲ್ & ಮೇ ತಿಂಗಳು ಎಲೆಕ್ಷನ್ ನಡೆಯುತ್ತಿದ್ದು ಎಲೆಕ್ಷನ್ ಫಲಿತಾಂಶ ಬಿಡುಗಡೆಯ ನಂತರ ಜೂನ್ ಮೊದಲನೇ / 2ನೇ ವಾರದಲ್ಲಿ ಅರ್ಜಿ ಸಲ್ಲಿಸಲು ಲಿಂಕ್ ಓಪನ್ ಮಾಡಲಾಗುವುದು ಎಂದು ಇಲಾಖೆ ತಿಳಿಸಿದೆ.

ಯಾವ ಯಾವ ದಾಖಲೆಗಳನ್ನು ನೀಡಬೇಕು?

ನೀವು ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವಾಗ ನೀವು ನಿಮ್ಮ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ನೀಡಬೇಕು. ನಿಮ್ಮ ಕುಟುಂಬ ಸದಸ್ಯರ ಫೋಟೋ ನೀಡಬೇಕು. ನಿಮ್ಮ ಕುಟುಂಬ ಸದಸ್ಯರ ವಯಸ್ಸಿನ ಪೂರಾವೆ. ನಿಮ್ಮ ಕುಟುಂಬ BPL ಕಾರ್ಡ್ ಪಡೆಯುವ ಅರ್ಹತೆ ಹೊಂದಿದ್ದರೆ ನೀವು ನಿಮ್ಮ ಕುಟುಂಬದ ಆದಾಯ ಪ್ರಮಾಣ ಪತ್ರವನ್ನು ಮತ್ತು ಕುಟುಂಬ ಸದಸ್ಯರ ಫೋನ್ ನಂಬರ್ ನೀಡಬೇಕು.

ಅರ್ಜಿ ಸಲ್ಲಿಸುವುದು ಹೇಗೆ?: 

ನೀವು ನಿಮ್ಮ ಅರ್ಜಿಯನ್ನು ನಿಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರ / ನಿಮ್ಮ ಪಡಿತರ ಕೇಂದ್ರಕ್ಕೆ ಹೋಗಿ ಸಲ್ಲಿಸಬಹುದು ಇಲ್ಲವೇ ನೀವು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in ಗೆ ತೆರಳಿ ಮುಖಪುಟದಲ್ಲಿ ಕಾಣುವ ಇ-ಸೇವೆಗಳು ವಿಭಾಗದಲ್ಲಿ ಹೊಸ ರೇಷನ್ ಕಾರ್ಡ್‌ಗಾಗಿ ಅರ್ಜಿ ಎಂಬ ಆಯ್ಕೆ ಕ್ಲಿಕ್ ಮಾಡಿ. ಪೂರ್ಣ ವಿಳಾಸವನ್ನು ಆಯ್ಕೆ ಮಾಡಬೇಕು. ಕುಟುಂಬ ಸದಸ್ಯರ ಸಂಖ್ಯೆ ಮತ್ತು ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಸಂಖ್ಯೆ ಮತ್ತು ವಯಸ್ಸಿನ ವಿವರಗಳನ್ನು ನೀಡಬೇಕಾಗುತ್ತದೆ. ನಂತರ ಅಗತ್ಯವಿರುವ ಎಲ್ಲಾ ದಾಖಲೆಗಳ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ. ನಂತರ ನಿಮ್ಮ ಕುಟುಂಬದ ಸದಸ್ಯರ ಫೋಟೋ ದಾಖಲಾತಿ ನೀಡಿ ನಂತರ ಶುಲ್ಕ ಪಾವತಿ ಮಾಡಿ ಅರ್ಜಿ ಸಲ್ಲಿಸಬೇಕು.

ಒಂದು ವರೆ ವರ್ಷದಿಂದ ರೇಷನ್ ಕಾರ್ಡ್ ವಿತರಣೆ & ಹೊಸ ಅರ್ಜಿ ಸಲ್ಲಿಸುವುದನ್ನು ಸ್ಥಗಿತ ಗೊಳಿಸಲಾಗಿತ್ತು:- 2023 ಎಲ್ಲಿ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಇತ್ತು. ಆಗ ಚುನಾವಣೆಯ ಕಾರಣದಿಂದ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ಆದರೆ ನಂತರ ಬಂದ ಕಾಂಗ್ರೆಸ್ ಸರ್ಕಾರ ಹೊಸದಾಗಿ ರೇಷನ್ ಕಾರ್ಡ್ಗೆ ಅಪ್ಲೇ ಮಾಡಬಹುದು. ಮತ್ತೆ ಲಿಂಕ್ ಓಪನ್ ಮಾಡಿರಲಿಲ್ಲ. ತಾಂತ್ರಿಕ ದೋಷ ಈ ಹಿಂದೆ ಅರ್ಜಿ ಸಲ್ಲಿಸಿದವರಿಗೆ ರೇಷನ್ ಕಾರ್ಡ್ ವಿತರಣೆ ಆಗಬೇಕು ಎಂಬ ನೆಪ ಹೇಳುತ್ತಾ ಮತ್ತೆ ಮರು ನೋಂದಣಿಗೆ ಅವಕಾಶ ನೀಡಿರಲಿಲ್ಲಾ. ಈಗ ಬರುವ ಜೂನ್ ತಿಂಗಳಿಂದ ಮತ್ತೆ ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದು ಎಂದು ಆಹಾರ ಇಲಾಖೆ ತಿಳಿಸಿದೆ.

ಏನೇ ಇರಲಿ ಸ್ನೇಹಿತರೆ ಅರ್ಜಿ ಸಲ್ಲಿಸುವಾಗ ನೀವು ನಿಖರವಾದ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿ ಇಲ್ಲವಾದಲ್ಲಿ ರೇಷನ್ ಕಾರ್ಡ್ ಗಳು ರದ್ದಾಗುವ ಸಾಧ್ಯತೆಗಳು ಹೆಚ್ಚಿದ್ದು ಆಚರಿಸುವಾಗ ಗಮನವಿಟ್ಟು ಅರ್ಜಿ ಸಲ್ಲಿಸಿ. ಈಗಾಗಲೇ ಅನೇಕ ಜನರ ರೇಷನ್ ಕಾರ್ಡ್ ಗಳು ರದ್ದಾಗಿದ್ದು ರದ್ದಾಗ ರದ್ದಾಗಲಿಕ್ಕೆ ಕಾರಣವಿನೆಂದರೆ ಕೊಟ್ಟಿರುವಂತಹ ದಾಖಲೆಗಳು ಹಾಗೂ ಇನ್ನಿತರ ಕಾರಣಗಳಿಂದ ರೇಷನ್ ಕಾರ್ಡ್ ಗಳು ರದ್ದಾಗಿವೆ.


1 thoughts on “Breaking News! ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ.! ಈ ದಾಖಲೆಗಳು ಬೇಕೇ ಬೇಕು.

  1. tvbrackets says:

    I am not sure where youre getting your info but good topic I needs to spend some time learning much more or understanding more Thanks for magnificent info I was looking for this information for my mission

Leave a Reply

Your email address will not be published. Required fields are marked *