ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಸಾಮಾನ್ಯವಾಗಿ, ಚುನಾವಣೆಯು ಮುಗಿದ ನಂತರ ಪ್ರಣಾಳಿಕೆಯಲ್ಲಿ ಘೋಷಣೆಯನ್ನು ಮಾಡಿದ ವಿಚಾರಗಳನ್ನು ಜಾರಿಗೆ ತರುವುದು ಕಡಿಮೆ. ಆದರೆ ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಮಹತ್ವದ ಒಂದು ಹೆಜ್ಜೆ ಇಟ್ಟಿದೆ.

ಪ್ರಣಾಳಿಕೆಯಲ್ಲಿ ಘೋಷಣೆಯನ್ನು ಮಾಡಿದ ಎಲ್ಲಾ 5 ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದೆ. ಅನ್ನಭಾಗ್ಯ ಯೋಜನೆಯಲ್ಲಿ ಮಾತ್ರ ಅಕ್ಕಿಯನ್ನು ಒದಗಿಸಲು ಇದುವರೆಗೂ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ.
ಹೌದು, ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರವು ನೀಡುತ್ತಿರುವ 5 ಕೆಜಿ ಉಚಿತ ಅಕ್ಕಿಯ ಜೊತೆಗೆ 5 ಕೆಜಿ ಹೆಚ್ಚುರಿ ನೀಡುವುದಾಗಿ ಹೇಳಿತ್ತು. ಆದರೆ ಅಕ್ಕಿಯ ದಾಸ್ತಾನು ಸಮಸ್ಯೆ ರಾಜ್ಯ ಸರ್ಕಾರಕ್ಕೆ ಇದುವರೆಗೆ ಪರಿಹರಿಸಲು ಸಾಧ್ಯವಾಗಿಲ್ಲ.
ಹಾಗಾಗಿ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ ಪ್ರತಿಯೊಬ್ಬ ಸದಸ್ಯರು 5 ಕೆಜಿಗೆ 170ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ.
ಇಂಥವರಿಗೆ ಹಣ ಬರುವುದಿಲ್ಲ!
ಹೇಗೆ ಗೃಹಲಕ್ಷ್ಮಿ ಯೋಜನೆಯ ಹಣವು ಸಾಕಷ್ಟು ಫಲಾನುಭವಿ ಮಹಿಳೆಯರ ಖಾತೆಗೆ ತಲುಪಿಲ್ಲವೂ, ಅದೇ ರೀತಿ ಅನ್ನಭಾಗ್ಯ ಯೋಜನೆಯ ಹಣವು ಹಲವು ಫಲಾನುಭವಿಗಳ ಖಾತೆಗೆ ತಲುಪಿಲ್ಲ. ಇದಕ್ಕೆ ಕೆಲವು ಹೋಲಿಕೆಯಾಗುವ ಕಾರಣಗಳಿವೆ. ಯಾಕೆಂದರೆ ರೇಷನ್ ಕಾರ್ಡ್ ಅನ್ನು ಮನೆಯ ಯಜಮಾನಿಯ ಹೆಸರಿಗೆ ಪರಿವರ್ತನೆಯನ್ನು ಮಾಡಿಕೊಳ್ಳಲಾಗಿದೆ.
ಇದನ್ನೂ ಸಹ ಓದಿ: PM ಜನ್ ಧನ್ ಖಾತೆದಾರರಿಗೆ ಗುಡ್ ನ್ಯೂಸ್! ಈ ದಿನದಂದು ಖಾತೆಗೆ ಜಮಾ ಆಗಲಿದೆ ₹10,000
ಇಂತಹ ಸಂದರ್ಭದಲ್ಲಿ ಬ್ಯಾಂಕ್ ಖಾತೆಯು ಪತಿಯ ಹೆಸರಿನಲ್ಲಿ ಇದ್ದು, ರೇಷನ್ ಕಾರ್ಡ್ ಮಾತ್ರವೇ ಪತ್ನಿ ಹೆಸರಿನಲ್ಲಿ ಇದ್ದಾರೆ ಒಂದಕ್ಕೊಂದು ಮ್ಯಾಚ್ ಆಗದೆ ಇರುವ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವಾಗಲಿ ಅಥವಾ ಅನ್ನಭಾಗ್ಯ ಯೋಜನೆಯ ಹಣವಾಗಲಿ ಖಾತೆಗೆ ಜಮಾ ಆಗುವುದಿಲ್ಲ.
ಇದಿಷ್ಟೆ ಅಲ್ಲದೆ ಇದರ ಜೊತೆಗೆ ಕೆಲವು ತಾಂತ್ರಿಕ ದೋಷಗಳು ಕೂಡ ಡಿಬಿಟಿ ಹಣ ಫಲಾನುಭವಿಗಳ ಖಾತೆಗೆ ಬಾರದೆ ಇರಲು ಕಾರಣವಾಗಿದೆ. ಆದರೆ ಖಾತೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಇರುವವರು ಪ್ರತಿ ತಿಂಗಳು ಅನ್ನ ಭಾಗ್ಯ ಯೋಜನೆಯ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ.
ನಿಮ್ಮ ಖಾತೆಯನ್ನು ಚೆಕ್ ಮಾಡಿ! (Check your DBT status)
ಅನ್ನಭಾಗ್ಯ ಯೋಜನೆಯ ಹಣವು ನಿಮ್ಮ ಖಾತೆಗೆ ಬಂದಿದೆಯೋ ಅಥವಾ ಇಲ್ಲವೋ ಎನ್ನುವುದನ್ನು ನೀವು DBT status ಅನ್ನು ಸುಲಭವಾಗಿ ಚೆಕ್ ಮಾಡಬಹುದು.
ಇದನ್ನು ಚೆಕ್ ಮಾಡುವುದಕ್ಕಾಗಿ ಆಹಾರ ಇಲಾಖೆಯು ಅಧಿಕೃತ ವೆಬ್ಸೈಟ್ ಲಿಂಕ್ ಅನ್ನು ಕೊಡಲಾಗಿದೆ
- ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. (https://ahara.kar.nic.in/).
- ಅಲ್ಲಿ ಈ ಸ್ಥಿತಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಬಳಿಕ ನಿಮ್ಮ ಜಿಲ್ಲೆ ಯಾವುದು ಎನ್ನುವುದನ್ನು ನೋಡಿ ಅದರ ಮೇಲ್ಭಾಗದಲ್ಲಿ ಕಾಣಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ DBT ಸ್ಟೇಟಸ್ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
- ಬಳಿಕ ತಿಂಗಳು ವರ್ಷ ಆಯ್ದುಕೊಂಡು, ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿದರೆ ನೀವು ಯಾವ ತಿಂಗಳನ್ನು ಆಯ್ಕೆ ಮಾಡಿದ್ದೀರೋ ಆ ತಿಂಗಳಿನಲ್ಲಿ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿದ್ಯೋ ಇಲ್ಲವೋ ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಇತರೆ ವಿಷಯಗಳು
ನಿಮ್ಮ ಮೊಬೈಲ್‌ನಲ್ಲಿ ಈ ಆ್ಯಪ್ ಇದ್ರೆ ತಕ್ಷಣ ಡಿಲೀಟ್ ಮಾಡಿ! ಗೂಗಲ್‌ನಿಂದ ಖಡಕ್ ಎಚ್ಚರಿಕೆ
60% ಕನ್ನಡ ನಾಮಫಲಕಗಳನ್ನು ಅಳವಡಿಸಲು ಗಡುವು ವಿಸ್ತರಣೆ!
- Scholarship Application – TVS ಪೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್! ಈಗಲೇ ಅರ್ಜಿ ಸಲ್ಲಿಸಿ! - August 29, 2025
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಆನ್ಲೈನ್ನಲ್ಲಿ ಸುಲಭವಾಗಿ ಅರ್ಜಿ ಹಾಕಿ – ಮನೆಯಿಂದಲೇ ಪಡೆಯಿರಿ. - August 29, 2025
- ಉಚಿತ ಡ್ರೋನ್ ಪೈಲೆಟ್ ತರಬೇತಿಗೆ ಅರ್ಜಿ ಆಹ್ವಾನ!ಅಭ್ಯರ್ಥಿಗಳಿಗೆ 15 ದಿನಗಳ ವಸತಿ ಸಹಿತ ಉಚಿತ ತರಬೇತಿ. - August 29, 2025