ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಮೇಲಿನ ಸಬ್ಸಿಡಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಘೋಷಣೆ ಮಾಡಿದೆ. ಈ ಕ್ರಮವು ದೇಶಾದ್ಯಂತ ಮನೆಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ ಮತ್ತು ಶುದ್ಧ ಅಡುಗೆ ಇಂಧನದ ಪ್ರಯೋಜನಗಳು ಪ್ರತಿಯೊಂದು ಮೂಲೆಯನ್ನು ತಲುಪುವುದನ್ನು ಖಚಿತಪಡಿಸುತ್ತದೆ. ನಾವು ಪ್ರಕಟಣೆಯ ವಿವರಗಳು, ಮನೆಗಳ ಮೇಲೆ ಅದರ ಸಂಭಾವ್ಯ ಪ್ರಭಾವ ಮತ್ತು ಭಾರತದ ಶಕ್ತಿಯ ಭೂದೃಶ್ಯದ ವ್ಯಾಪಕ ಪರಿಣಾಮಗಳನ್ನು ಪರಿಶೀಲಿಸುತ್ತೇವೆ.
ಸದ್ಯ ದೇಶದಲ್ಲಿ November ನಲ್ಲಿ ತೈಲ ಕಂಪನಿಗಳು ಗ್ಯಾಸ್ ಬೆಲೆಯನ್ನು ಪರಿಷ್ಕರಿಸಿದ್ದು, LPG Gas Cylinder ಗಳಲ್ಲಿ 103 ರೂ. ಏರಿಕೆ ಮಾಡಿದೆ. ಈ ಮೂಲಕ ಗ್ಯಾಸ್ ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಬೇಸರ ನೀಡಿದೆ.
ಸ್ ಬೆಲೆಯ ಏರಿಕೆಯ ಬೇಸರದಲ್ಲಿದ್ದ ಜನತೆಗೆ ಕೇಂದ್ರ ಸರ್ಕಾರ ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ನೀಡುತ್ತಿದೆ. ಇದರಿಂದಾಗಿ ಜನರಿಗೆ ಆರ್ಥಿಕ ಹೊರೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಆಗಿದೆ ಎನ್ನಬಹದು. ಸದ್ಯ ಈ ತಿಂಗಳ ಗ್ಯಾಸ್ ಬೆಳೆಯ ಏರಿಕೆಯ ಬೇಸರದಲ್ಲಿ ದೇಶದ ಜನತೆಗೆ ಕೇಂದ್ರ ಗುಡ್ ನ್ಯೂಸ್ ನೀಡಿದೆ. ಕೇಂದ್ರ ಸರ್ಕಾರ ಗ್ಯಾಸ್ ಬೆಲೆಯ ಬಗ್ಗೆ ಮಹತ್ವದ ಘೋಷಣೆ ಹೊರಡಿಸಿದೆ.
ಗ್ಯಾಸ್ ಸಬ್ಸಿಡಿ ಹೆಚ್ಚಿಸಲು ಮುಂದಾದ ಕೇಂದ್ರ
ಈಗಾಗಲೇ ಕೇಂದ್ರದ ಮೋದಿ ಸರಕಾರ Pradhan Mantri Ujjwala ಯೋಜನೆಯನ್ನು ಪರಿಚಯಿಸಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಈ ಯೋಜನೆಯಡಿ ದೇಶದ ಬಡ ಜನತೆ ಸಬ್ಸಿಡಿ ದರದಲ್ಲಿ Gas Cylinder ಅನ್ನು ಪಡೆಯುತ್ತಿದೆ. ಈವರೆಗೆ ಕೇಂದ್ರ ಸರ್ಕಾರ Pradhan Mantri Ujjwala ಯೋಜನೆಯಡಿ ಅರ್ಹರು 200 ರೂ. ಸಬ್ಸಿಡಿಯನ್ನು ಪಡೆಯುತ್ತಿದ್ದರು. ಈ 200 ರೂ. ಸಬ್ಸಿಡಿ ಮೂಲಕ ಜನರು ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ಅನ್ನು ಖರೀದಿಸಬಹುದಾಗಿತ್ತು. ಸದ್ಯ ಕೇಂದ್ರ ಸರ್ಕಾರ ಈ ಯೋಜನೆಯಡಿ ಸಬ್ಸಿಡಿಯನ್ನು ಹೆಚ್ಚಿಸಲು ನಿರ್ಧರಿಸಿದೆ.
ಕೇವಲ 603 ರೂ. ಗಳಲ್ಲಿ ಸಿಗಲಿದೆ ಗ್ಯಾಸ್ ಸಿಲಿಂಡರ್
ಸರ್ಕಾರವು ಪ್ರತಿ ಸಿಲಿಂಡರ್ ಗೆ ರೂ. 200 ರಿಂದ 300 ರವರೆಗೆ ಸಬ್ಸಿಡಿಯನ್ನು ಹೆಚ್ಚಿಸಲು ನಿರ್ಧರಿಸಿದೆ. ಪ್ರಸ್ತುತ ಗ್ಯಾಸ್ ಸಿಲಿಂಡರ್ ಬೆಲೆ 903 ರೂ. ಆಗಿದ್ದು, ಇನ್ನುಮುಂದೆ Pradhan Mantri Ujjwala ಯೋಜನೆಯಡಿ ಫಲಾನುಭವಿಗಳು 300 ರೂ. ಸಬ್ಸಿಡಿಯ ಮೂಲಕ ಕೇವಲ 603 ರೂ. ಗಳಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಪಡೆಯಬಹುದಾಗಿದೆ.
ಆರ್ಥಿಕವಾಗಿ ಹಿಂದುಳಿದ ಸುಮಾರು 9 .6 ಕೋಟಿ ಜನರಿಗೆ ಗ್ಯಾಸ್ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಮುಂಬರುವ ಲೋಕಸಭಾ ಚುನಾವಣೆಯ ಕಾರಣ ಸರ್ಕಾರ LPG ಸಿಲಿಂಡರ್ ಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಪರಿಹಾರ ನೀಡುವ ಸಾಧ್ಯತೆ ಇದೆ. ಶೀಘ್ರದಲ್ಲೇ Pradhan Mantri Ujjwala ಯೋಜನೆಯ ಫಲಾನುಭವಿಗಳಿಗೆ ಸಬ್ಸಿಡಿಯಲ್ಲಿ ಹೆಚ್ಚಳವನ್ನು ಸರ್ಕಾರ ಘೋಷಿಸಲಿದೆ. ದೇಶದಲ್ಲಿನ ಹಣದುಬ್ಬರದ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಕ್ರಮ ಕೈಗೊಂಡಿದೆ.