ರಾಜ್ಯ ಸರ್ಕಾರವು ಇತ್ತೀಚೆಗೆ ಒಂದು ಅದ್ಭುತ ಉಪಕ್ರಮವನ್ನು ಘೋಷಿಸಿದೆ: ಮೂರು ವರ್ಷಗಳ ಅವಧಿಗೆ ರಾಜ್ಯದಾದ್ಯಂತ ಮಹಿಳೆಯರಿಗೆ ಉಚಿತ ಇಂಟರ್ನೆಟ್ ಪ್ರವೇಶವನ್ನು ನೀಡುತ್ತದೆ. ಈ ದಿಟ್ಟ ಮತ್ತು ಮುಂದಾಲೋಚನೆಯ ನೀತಿಯು ಡಿಜಿಟಲ್ ಲಿಂಗ ಅಂತರವನ್ನು ಕಡಿಮೆ ಮಾಡಲು, ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಹೆಚ್ಚುತ್ತಿರುವ ಸಂಪರ್ಕಿತ ಜಗತ್ತಿನಲ್ಲಿ ಅವರಿಗೆ ಅವಕಾಶಗಳ ಜಗತ್ತನ್ನು ಅನ್ಲಾಕ್ ಮಾಡುವ ಗುರಿಯನ್ನು ಹೊಂದಿದೆ.
ಇನ್ನು ರಾಜ್ಯ ಸರ್ಕಾರ ದೇಶದ ಮಹಿಳೆಯರಿಗೆ ಹೊಸ ಹೊಸ ಯೋಜನೆಗಳನ್ನು ಹಾಗೂ ಸೌಲಭ್ಯಗಳನ್ನು ನೀಡುತ್ತಲೇ ಇದೆ. ಮಹಿಳೆಯರಿಗೆ ಆರ್ಥಿಕ ನೆರವು ನೀಡಬೇಕೆನ್ನುವುದು ಸರ್ಕಾರದ ಉದ್ದೇಶವಾಗಿದೆ.
ಮಹಿಳೆಯರು ಸ್ವಾವಲಂಭಿಯಾಗಿ ಜೀವನ ನಡೆಸಲು ಸರ್ಕಾರದ ಅದೆಷ್ಟೋ ಯೋಜನೆಗಳು ಸಹಾಯವಾಗಲಿದೆ. ಹೀಗಾಗಿ ಸದ್ಯ ಚುನಾವಣಾ ಪ್ರಚಾರದ ವೇಳೆ ಇದೀಗ ಮಹಿಳೆಯರಿಗೆ ಉಚಿತ ಯೋಜನೆಯನ್ನು ಸರ್ಕಾರ ಘೋಷಿಸಿದೆ.
ರಾಜಸ್ಥಾನ ಸರ್ಕಾರದಿಂದ (Rajasthan Government) ಮಹಿಳೆಯರಿಗೆ ಗುಡ್ ನ್ಯೂಸ್
ಈಗಾಗಲೇ ರಾಜಸ್ಥಾನ ಸರ್ಕಾರ ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಲಾಟ್ ಟಾಪ್, ಸರ್ಕಾರೀ ನೌಕರರಿಗೆ ಹಳೆಯ ಪಿಂಚಣಿ (OPS ) ಜಾರಿ, 15 ಲಕ್ಷ ವಿಮ ರಕ್ಷಣೆ, ವಿದ್ಯಾರ್ಥಿಗೆ ಇಂಗ್ಲಿಷ್ ಮಾಧ್ಯಮ ಶಿಕ್ಷಣ, 1.05 ಕೋಟಿ ಕುಟುಂಬಗಳಿಗೆ 500 ರೂ. ಗೆ ಗ್ಯಾಸ್ ಸಿಲಿಂಡರ್, ಅರ್ಹ ಮಹಿಳೆಯರಿಗೆ ವಾರ್ಷಿಕ 10 ಸಾವಿರ ಗೌರವ ಧನ, ರೈತರ ಸಾಲ ಮನ್ನಾ ಮಾಡುವುದಾಗಿ ಸರ್ಕಾರ ಘೋಷಣೆ ಹೊರಡಿಸಿದೆ. ಇವೆಲ್ಲದರ ಜೊತೆ ಸರ್ಕಾರ ಮಹಿಳೆಯರಿಗೆ ವಿಶೇಷ ಸೌಲಭ್ಯ ನೀಡಲು ಮುಂದಾಗಿದೆ.
ರಾಜ್ಯದ ಮಹಿಳೆಯರಿಗೆ ಸಿಗಲಿದೆ ಮೂರು ವರ್ಷ ಉಚಿತ ಇಂಟರ್ನೆಟ್
ರಾಜಸ್ಥಾನದ ಮಹಿಳೆಯರಿಗೆ ಮುಖ್ಯಮಂತ್ರಿ ಅಶೋಕ್ ಅವರು ಸಿಹಿಸುದ್ದಿ ನೀಡಿದ್ದಾರೆ. ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಮೂರು ವರ್ಷಗಳ ಇಂಟರ್ನೆಟ್ ಪ್ಯಾಕ್ ನೊಂದಿಗೆ ಉಚಿತ ಸ್ಮಾರ್ಟ್ ಫೋನ್ ಗಳನ್ನೂ ನೀಡುವುದಾಗಿ ಘೋಷಿಸಿದ್ದಾರೆ. ಮಹಿಳೆಯರಿಗೆ ಸ್ಮಾರ್ಟ್ ಫೋನ್ ವಿತರಣೆ ಸರ್ಕಾರ ನಿಯಮದಡಿ ನಡೆಯಲಿದೆ. ಈ ಯೋಜನೆಗಾಗಿ ರಾಜ್ಯ ಸರ್ಕಾರ ಹೆಚ್ಚಿನ ಕ್ರಮ ಕೈಗೊಳ್ಳುತ್ತಿದೆ.
ಇನ್ನು 1.35 ಕೋಟಿ ಮಹಿಳೆಯರಿಗೆ ಮೂರು ವರ್ಷಗಳ ಇಂಟರ್ನೆಟ್ ಪ್ಯಾಕ್ ನೊಂದಿಗೆ ಉಚಿತ ಸ್ಮಾರ್ಟ್ ಫೋನ್ ಗಳನ್ನೂ ನೀಡಲಾಗುತ್ತದೆ. ರಾಜಸ್ತಾನದ ಮುಖ್ಯ ಮಂತ್ರಿ ಈ ಹಿಂದೆಯೇ ಈ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಘೋಷಿಸಿದ್ದರು. ಆದರೆ ಕಾರಣಾಂತರಗಳಿಂದ ಯೋಜನೆ ವಿಳಂಭವಾಗಿದ್ದು, ಸದ್ಯ ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೆ ಖಂಡಿತ ಈ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ಸರ್ಕಾರ ಜನರಿಗೆ ಭರವಸೆ ನೀಡಿದೆ.