ಹಲೋ ಸ್ನೇಹಿತರೆ ಇತ್ತೀಚಿನ ಡಿಜಿಟಲ್ ಯುಗದಲ್ಲಿ ನಾವು ಒಂದು ಮೊಬೈಲ್ ಮುಖಾಂತರ ಇಡೀ ನಮ್ಮ ಕೆಲಸವನ್ನು ಸುಲಭ ಮಾಡಿಕೊಂಡಿದ್ದೇವೆ ಏಕೆಂದರೆ ಆನ್ಲೈನ್ ಮುಖಾಂತರ ನಾವು ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆಯುತ್ತಿದ್ದೇವೆ ಹಾಗೆ ಈ ರೀತಿ ಸರ್ಕಾರವು ಕೂಡ ಈಗಿನ ಡಿಜಿಟಲ್ ಸೌಲಭ್ಯವನ್ನು ಉಪಯೋಗಿಸಿಕೊಂಡು ಕೆಲವು ಮಹತ್ವದ ಕೆಲಸಗಳನ್ನು ಹೊರಡೆ ಹಾಕಿದೆ ಈ ಲೇಖನದಲ್ಲಿ ನಾವು ಮೊಬೈಲ್ ಉಪಯೋಗಿಸಿಕೊಂಡು ನಾವು ಹೇಗೆ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದೆಂದು ತಿಳಿಸಿಕೊಳ್ಳುತ್ತೇವೆ.
ರೇಷನ್ ಕಾರ್ಡ್ ಎಂಬುದು ಎಲ್ಲಾ ಜನರಿಗೂ ಅತ್ಯಮೂಲ್ಯವಾಗಿದೆ ಹಾಗೂ ಈ ಕಾಡುಗಳಲ್ಲಿ ಏಪ್ರಿಲ್ ಮತ್ತು ಬಿಪಿಎಲ್ ನಂತಹ ಎರಡು ಕಾಡುಗಳು ಇವೆ ಬಡತನದಲ್ಲಿರುವ ಅಂತಹ ಜನರಿಗೆ ಬಿಪಿಎಲ್ ಕಾರ್ಡನ್ನು ಸರ್ಕಾರವು ನೀಡುತ್ತಿದೆ ಹಾಗೂ ಬಡ ರೇಖೆಗಿಂತ ಸ್ವಲ್ಪ ಉತ್ತಮ ಇರುವ ಜನರಿಗೆ ಎಪಿಎಲ್ ಕಾರ್ಡನ್ನು ನೀಡುತ್ತಿದೆ.ಈ ಬಿಪಿಎಲ್ ಕಾರ್ಡ್ ಇಂದ ತುಂಬಾ ಜನರು ಉತ್ತಮ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ ಹಾಗೆಯೇ ಸರ್ಕಾರದಿಂದ ಬರುವಂತಹ ಕೆಲವು ಸೌಲಭ್ಯಗಳಿಗೆ ಈ ಕಾರ್ಡ್ಗಳು ತುಂಬಾ ಅತ್ಯಮೂಲ್ಯವಾಗಿದೆ.
ಇತ್ತೀಚಿನ ದಿನಗಳಲ್ಲಿ ಪಡಿತರ ಚೀಟಿಗೆ ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಯಾರಿಗೆ ಪಡಿತರ ಚೀಟಿ ಅಗತ್ಯವಿದೆಯೋ ಅವರಿಗೆ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಈಗಾಗಲೇ ತಿಳಿಸಿರುವಂತೆ ಸರ್ಕಾರಕ್ಕೆ ಸಲ್ಲಿಕೆ ಆಗಿರುವ ಎರಡು ಲಕ್ಷಕ್ಕೂ ಅಧಿಕ ಪಡಿತರ ಚೀಟಿ ವಿಲೇವಾರಿ ಕೆಲಸ ಆರಂಭವಾಗಿದೆ. ಇದರ ಜೊತೆಗೆ ಮೆಡಿಕಲ್ ಎಮರ್ಜೆನ್ಸಿ ಇರುವವರು ಪಡಿತರ ಚೀಟಿ ಪಡೆದುಕೊಳ್ಳಲು ಬಯಸಿದರೆ ತಕ್ಷಣ ಅರ್ಜಿ ಸಲ್ಲಿಸಿ ಹೊಸ ಪಡಿತರ ಚೀಟಿ ಪಡೆದುಕೊಳ್ಳಬಹುದು.
ಹೊಸ ರೇಷನ್ ಕಾರ್ಡ್ ಗೆ ಅಪ್ಲೈ ಮಾಡಲು ಬೇಕಾಗಿರುವ ಅರ್ಹತೆಗಳು:
- ರಾಜ್ಯದ ನಾಗರಿಕರಾಗಿರಬೇಕು 18 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದು.
- ಕುಟುಂಬದಲ್ಲಿ ಯಾರಾದರೂ ಸರ್ಕಾರಿ ನೌಕರಿಯಲ್ಲಿ ಇದ್ರೆ ಅಂಥವರಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ
- ಹತ್ತರಿಂದ ಇಪ್ಪತ್ತು ಸಾವಿರದ ಒಳಗಿನ ವಾರ್ಷಿಕ ಆದಾಯ ಹೊಂದಿರುವವರು ಅರ್ಜಿ ಸಲ್ಲಿಸಬಹುದು
- ನಾಲ್ಕು ಚಕ್ರದ ವಾಹನ ಇರುವವರು ಹಾಗೂ ಉತ್ತಮ ಆದಾಯ ಹೊಂದಿರುವವರು ಅರ್ಜಿ ಸಲ್ಲಿಸುವಂತಿಲ್ಲ.
- ಈಗಾಗಲೇ ಪಡಿತರ ಚೀಟಿ ಹೊಂದಿದ್ರೆ ಆ ಕುಟುಂಬದವರು ಮತ್ತೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
- ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿರುವಂತಿಲ್ಲ.
- 5 ಅಥವಾ ಅದಕ್ಕಿಂತ ಹೆಚ್ಚು ಎಕರೆ ಜಮೀನು ಹೊಂದಿರುವವರಿಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ.
ಆನ್ಲೈನ್ ಮೂಲಕ ಬಿಪಿಎಲ್ ಕಾರ್ಡ್ ಪಡೆದುಕೊಳ್ಳುವುದು ಹೇಗೆ?
- ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ಗೆ ಹೋಗಬೇಕು.
- ಅಲ್ಲಿ ನಿಮಗೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.
- ಈಗ ನೀವು ನಿಮ್ಮ ಶಾಶ್ವತ ವಿಳಾಸವನ್ನು ನಮೂದಿಸಬೇಕು.
- ಬಳಿಕ ಬಿಪಿಎಲ್ ಅಥವಾ ಎಪಿಎಲ್ ಅಥವಾ ಅಂತ್ಯೋದಯ ಈ ಮೂರು ಕಾರ್ಡನಲ್ಲಿ ಯಾವುದಕ್ಕೆ ಅಪ್ಲೈ ಮಾಡುತ್ತೀರಿ ಎನ್ನುವುದನ್ನು ಆಯ್ಕೆ ಮಾಡಬೇಕು.
- ಬಳಿಕ ಅದಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಭರ್ತಿ ಮಾಡಬೇಕು.
- ಮುಂದೆ ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
- ನಂತರ ನಿಮಗೆ ಎಕ್ನೋಲೆಜ್ಮೆಂಟ್ ಸಂಖ್ಯೆಯನ್ನು ಕೊಡಲಾಗುತ್ತದೆ. ಇದು ಪಡಿತರ ಚೀಟಿ ಸ್ಥಿತಿ ಚೆಕ್ ಮಾಡಲು ಸಹಾಯ ಮಾಡುತ್ತದೆ.
- ನಿಮ್ಮ ಅರ್ಜಿ ಸ್ವೀಕಾರವಾದ ನಂತರ ಫಲಾನುಭವಿಗಳಾಗಿದ್ದರೆ 15 ರಿಂದ ಒಂದು ತಿಂಗಳ ಒಳಗಾಗಿ ಹೊಸ ಪಡಿತರ ಚೀಟಿ ನಿಮ್ಮ ಕೈ ಸೇರುತ್ತದೆ.
ಇನ್ನು ಹತ್ತಿರದ ಸೇವಾ ಕೇಂದ್ರಕ್ಕೆ ಹೋಗಿ ನೀವು ಅರ್ಜಿ ಸಲ್ಲಿಸಬಹುದು.
ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು:
- ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ವೋಟರ್ ಐಡಿ
- ಡ್ರೈವಿಂಗ್ ಲೈಸನ್ಸ್
- ಕುಟುಂಬದ ಎಲ್ಲಾ ಸದಸ್ಯರ ವಿವರ ಮತ್ತು ಆಧಾರ್ ಕಾರ್ಡ್
- ವಿದ್ಯುತ್ ಬಿಲ್
- ನೊಂದಾಯಿತ ಮೊಬೈಲ್ ಸಂಖ್ಯೆ
- ಎಲ್ಲಾ ಸದಸ್ಯರ ಫೋಟೋ
ಏನೇ ಇರಲಿ ಸ್ನೇಹಿತರೆ ಈ ಒಂದು ಕೆಲಸದಿಂದ ತುಂಬಾ ಜನರಿಗೆ ಅನುಕೂಲಕರವಾಗಿದೆ ಹೇಗದ್ದರೆ ತುಂಬಾ ಜನರು ನಾನಾ ಕೆಲಸಕ್ಕೆ ತಮ್ಮ ಸಮಯವನ್ನು ನಿಗದಿ ನಿಗದಿಪಡಿಸಿ ಕೊಂಡಿರುತ್ತಾರೆ ಹೀಗಾಗಿ ಕಚೇರಿಗೆ ಅಲೆದಾಡಲು ಸಮಯವಿರುವುದಿಲ್ಲ ಈ ಒಂದು ಯೋಜನೆಯಿಂದ ಜನರಿಗೆ ಕಚೇರಿಗೆ ಅಲೆದಾಡುವ ಸಮಸ್ಯೆ ತಪ್ಪುತ್ತದೆ ಹೀಗಾಗಿ ಇಂತಹ ಅನೇಕ ಯೋಜನೆಗಳು ನಮ್ಮ ದೇಶಗಳಲ್ಲಿ ಹೊರಗೆ ಬರಬೇಕೆಂದು ನಾವು ಕೇಳಿಕೊಳ್ಳುತ್ತೇವೆ.