rtgh

ಪೋಷಕರೆ ಮಹತ್ವದ ಮಾಹಿತಿ: ಮೊರಾರ್ಜಿ ದೇಸಾಯಿ, ಅಬ್ದುಲ್ ಕಲಾಂ, ಇತರೆ ವಸತಿ ಕಾಲೇಜುಗಳಲ್ಲಿ ಉಚಿತ ಪ್ರವೇಶ: ಅರ್ಜಿ ಆಹ್ವಾನ.


ನಮಸ್ಕಾರ ಸ್ನೇಹಿತರೆ ಪೋಷಕರೇ ಮತ್ತು ಮಕ್ಕಳೇ ಇಲ್ಲಿ ಗಮನವಿಟ್ಟು ಕೇಳಿ ಎಸ್ ಎಸ್ ಎಲ್ ಸಿ ಪಾಸಾದ ವಿದ್ಯಾರ್ಥಿಗಳಿಗೆ ಇದೀಗ ಕಾಲೇಜ್ ಸೇರುವ ಮುನ್ನ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಏಕೆಂದರೆ ಸಂಪೂರ್ಣವಾಗಿ ಉಚಿತ ವಸತಿ ಶಾಲೆ ನಿಮಗೆ ದೊರೆಯಲಿದೆ.

Application Invitation for Free Admission in Morarji Desai, Abdul Kalam, Other Residential Colleges
Application Invitation for Free Admission in Morarji Desai, Abdul Kalam, Other Residential Colleges

ಎಸ್‌ಎಸ್‌ಎಲ್‌ಸಿ ಪಾಸಾಗಿ ಪ್ರಥಮ ಪಿಯುಸಿ ಪ್ರವೇಶಕ್ಕಾಗಿ ಮುನ್ನೋಡುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಗುಡ್‌ ನ್ಯೂಸ್. ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಡಿಯಲ್ಲಿನ ವಸತಿ ಕಾಲೇಜುಗಳಲ್ಲಿ ಉಚಿತ ಪ್ರಥಮ ಪಿಯುಸಿ ಅಡ್ಮಿಷನ್‌ಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ನೀವು ಎಸ್‌ಎಸ್‌ಎಲ್‌ಸಿ / 10ನೇ ತರಗತಿ ಅನ್ನು ಯಾವುದೇ ಬೋರ್ಡ್‌ನಿಂದ ಪಾಸ್ ಮಾಡಿದ್ದು, ಈಗ ಪ್ರಥಮ ಪಿಯುಸಿ’ಗೆ ಪ್ರವೇಶ ಪಡೆಯಲು ಆಸಕ್ತರಾಗಿದ್ದರೆ., ಇಲ್ಲಿದೆ ಗುಡ್‌ ನ್ಯೂಸ್‌. ನಿಮ್ಮ ಗ್ರಾಮದಲ್ಲಿ ಅಥವಾ ಸುತ್ತಮುತ್ತಲ ಗ್ರಾಮಗಳಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ ಪಡೆಯಲು ಸರ್ಕಾರಿ ಕಾಲೇಜುಗಳು ಇಲ್ಲದಿದ್ದಲ್ಲಿ, ಅಥವಾ ನೀವು ವಸತಿ ಕಾಲೇಜುಗಳಿಗೆ ಸೇರಬೇಕು, ಉಚಿತ ಪ್ರವೇಶ ಬೇಕು ಎಂದು ಬಯಸಿದ್ದಲ್ಲಿ ಇದು ಸದಾವಕಾಶ.

ಕರ್ನಾಟಕ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಪದವಿ ಪೂರ್ವ ಕಾಲೇಜುಗಳು / ಡಾ// ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಕಾಲೇಜುಗಳು / ಶಾಲೆಗಳು ಮತ್ತು ಮೊರಾರ್ಜಿ ದೇಸಾಯಿ ವಸತಿ ಮತ್ತು ಸರ್ಕಾರಿ ಮುಸ್ಲಿಂ ವಸತಿ ಶಾಲೆಗಳಲ್ಲಿ (ಇಂಟಿಗ್ರೇಟೆಡ್ ಶಾಲೆಗಳಲ್ಲಿ) 2024-25ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ತರಗತಿಗೆ ಉಚಿತ ಪ್ರವೇಶಾತಿಗಾಗಿ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಹತೆ, ಅರ್ಜಿಗೆ ಪ್ರಮುಖ ದಿನಾಂಕಗಳು, ಇತರೆ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.


ಅರ್ಜಿ ಪ್ರಕ್ರಿಯೆಯ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 15-05-2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 27-05-2024 ರ ಸಂಜೆ 05-30 ಗಂಟೆವರೆಗೆ.

ಅರ್ಜಿ ಸಲ್ಲಿಸುವ ವಿಧಾನ
ಆಸಕ್ತ ಅಲ್ಪಸಂಖ್ಯಾತರ ಪೋಷಕರು / ವಿದ್ಯಾರ್ಥಿಗಳು ಎಲ್ಲಾ ದಾಖಲೆಗಳ ಸಹಿತ ತಮಗೆ ಹತ್ತಿರವಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ, ಡಾ ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಕಾಲೇಜುಗಳು / ಶಾಲೆಗಳು, ಮೊರಾರ್ಜಿ ದೇಸಾಯಿ ವಸತಿ ಮತ್ತು ಸರ್ಕಾರಿ ಮುಸ್ಲಿಂ ವಸತಿ (ಉನ್ನತೀಕರಣಗೊಂಡ) ಕಾಲೇಜುಗಳು / ಶಾಲೆಗಳಲ್ಲಿ ಮತ್ತು ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಲ್ಲಿ ಉಚಿತವಾಗಿ ಸಲ್ಲಿಸಬಹುದಾಗಿದೆ.

ವಸತಿ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ಪ್ರವೇಶಕ್ಕೆ ಅರ್ಜಿ ಹಾಕಲು ಅರ್ಹತೆಗಳು

ವಿದ್ಯಾರ್ಥಿಗಳು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿರಬೇಕು ಅಂದರೆ, ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಪಾರ್ಸಿ ಮತ್ತು ಸಿಖ್ ಸಮುದಾಯದವರಿಗೆ ಶೇಕಡ.75 ರಷ್ಟು ಪ್ರವೇಶ ಮೀಸಲಿರಿಸಿದೆ.
ಅಲ್ಪಸಂಖ್ಯಾತರ ಯಾವುದೇ ವಸತಿ ಶಾಲೆ / ಸರ್ಕಾರಿ / ಸರ್ಕಾರದಿಂದ ಅನುಮೋದಿಸಲ್ಪಟ್ಟ ಶಾಲೆಗಳಲ್ಲಿ 10ನೇ ತರಗತಿಯಲ್ಲಿ ಅಧ್ಯಯನ ಮಾಡಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು.
ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು.
ಕುಟುಂಬದ ವಾರ್ಷಿಕ ಆದಾಯವು ರೂ.2.50 ಲಕ್ಷಗಳನ್ನು ಮೀರಿರಬಾರದು.
ವಿಕಲಚೇತನರಿಗೆ ಶೇ.3 ರಷ್ಟು ಪ್ರವೇಶ ಮೀಸಲಿರಿಸಿದೆ.
ಶೇಕಡ.25 ರಷ್ಟು ಸ್ಥಾನಗಳನ್ನು ಹಿಂದುಳಿದ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಪ್ರವೇಶಕ್ಕೆ ಮೀಸಲಿರಿಸಿದೆ.

ವಸತಿ ಕಾಲೇಜುಗಳಲ್ಲಿ ಒದಗಿಸಲಾಗುವ ಸೌಲಭ್ಯಗಳು

ಉಚಿತ ಶಿಕ್ಷಣ, ಪಠ್ಯಪುಸ್ತಕ, ಆಹಾರ, ಸಮವಸ್ತ್ರ, ಶುಚಿ ಸಂಭ್ರಮ ಕಿಟ್, ಲೇಖನ ಸಾಮಗ್ರಿ, ಸೇರಿದಂತೆ ಇತರೆ ಎಲ್ಲ ಉಚಿತ ಸೌಲಭ್ಯಗಳು.
ತಾಂತ್ರಿಕ ಮತ್ತು ವೈದ್ಯಕೀಯ ಮತ್ತು ಇತ್ಯಾದಿ ವೃತ್ತಿಪರ ಶಿಕ್ಷಣಕ್ಕೆ ಅನುಕೂಲವಾಗಲು ವಿಜ್ಞಾನ ವಿಷಯಗಳಿಗೆ ಪಿಸಿಎಂಬಿ / ಪಿಸಿಎಂಸಿ ಹಾಗೂ ವಾಣಿಜ್ಯ ವಿಷಯಗಳ HEBA ಸಂಯೋಜನೆಗಳ ತರಗತಿಗಳನ್ನು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುವುದು.


Leave a Reply

Your email address will not be published. Required fields are marked *