ನಮಸ್ಕಾರ ಸ್ನೇಹಿತರೆ ಪಿಯುಸಿ ಮತ್ತು ಪದವಿ ಮುಗಿಸಿರುವ ಅಭ್ಯರ್ಥಿಗಳಿಗೆ ಒಂದು ಮಹತ್ವದ ಸುದ್ದಿ ಹೊರ ಬಿದ್ದಿದೆ ಏನೆಂದರೆ 400 ಪಶು ವೈದ್ಯಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಆಸಕ್ತಿಯುಳ್ಳ ಅಭ್ಯರ್ಥಿಗಳು ಆದಷ್ಟು ಕೂಡಲೇ ಅರ್ಜಿಯನ್ನು ಸಲ್ಲಿಸಬೇಕಾಗಿದೆ.
ಹೌದು ಸ್ನೇಹಿತರೆ, ಕರ್ನಾಟಕದಲ್ಲಿ 4 ಹೆಚ್ಚು ಪಶು ವೈದ್ಯಾಧಿಕಾರಿಗಳಿಗೆ ಅರ್ಜಿಯನ್ನು ಆವನಿಸಿದ್ದು ಆಸಕ್ತಿಯುಳ್ಳ ಅಭ್ಯರ್ಥಿಗಳು ಆದಷ್ಟು ಬೇಗನೆ ಅರ್ಜಿ ಸಲ್ಲಿಸಬಹುದಾಗಿದೆ ಈ ಒಂದು ಹುದ್ದೆಗೆ ಬೇಕಾಗುವಂತಹ ದಾಖಲೆಗಳು ವಿದ್ಯಾರ್ಥಿ ಮತ್ತು ಪ್ರಮುಖ ದಿನಾಂಕಗಳನ್ನು ನಾವು ಈ ಕೆಳಗೆ ನೀಡಿದ್ದೇವೆ
ಕರ್ನಾಟಕ ಪಶುಪಾಲನೆ & ಪಶುವೈದ್ಯ ಇಲಾಖೆಯಲ್ಲಿ ಬರೋಬ್ಬರಿ 400 ವೆಟರಿನರಿ ಆಫೀಸರ್ ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿದವರು ಅರ್ಜಿ ಸಲ್ಲಿಸಿ. ಪ್ರತಿ ತಿಂಗಳ ವೇತನ ರೂ.52,640 ನೀಡಲಾಗುತ್ತದೆ. ಇದರ ಬಗ್ಗೆ ಸಂಪೂರ್ಣ ವಿವರ ಈ ಲೇಖನದಲ್ಲಿ ತಿಳಿಯಿರಿ..
ಪಶುಪಾಲನೆ & ಪಶುವೈದ್ಯ ಸೇವಾ ಇಲಾಖೆಯಡಿ ಖಾಲಿ ಇರುವ 400 ಪಶುವೈದ್ಯಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕಟಣೆಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಈ ಸದರಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ KPSC ಅಂಗಳಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಆದರೆ ಇದರ ನಡುವೆಯೇ ಇಲಾಖೆಯು ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲು ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ.
ಪಶುವೈದ್ಯಾಧಿಕಾರಿ ಹುದ್ದೆಯ ವೇತನ ಶ್ರೇಣಿ ಕನಿಷ್ಠ ಹಂತದ ಮೊತ್ತ ರೂ.52,640 ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು.
ಹುದ್ದೆಗೆ ಅರ್ಹತೆಗಳು
- ಅಭ್ಯರ್ಥಿಗಳ ಆಯ್ಕೆಯನ್ನು ಬಿ.ವಿಎಸ್ಸಿ / ಬಿ.ವಿ.ಎಸ್ಸಿ ಅಂಡ್ ಎ.ಹೆಚ್ ಪದವಿಯಲ್ಲಿ ಎಲ್ಲಾ ವರ್ಷಗಳಲ್ಲಿ ಗಳಿಸಿದ ಒಟ್ಟು ಶೇಕಡಾವಾರು ಅಂಕಗಳ ಅರ್ಹತೆ ಆಧಾರದ ಮೇಲೆ ಮತ್ತು ಸರ್ಕಾರದ ಮೀಸಲಾತಿಗನುಗುಣವಾಗಿ ನಡೆಸಲಾಗುತ್ತದೆ.
- ದಿನಾಂಕ 24-06-2024 ರ ಒಳಗಾಗಿ ಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನ ಕಾಯ್ದೆ 1984ರ ಅಡಿಯಲ್ಲಿ ಕೆ.ವಿ.ಸಿ ನೊಂದಣಿಯಾಗಿರಬೇಕು.
ವಯಸ್ಸಿನ ಅರ್ಹತೆಗಳು
ಕನಿಷ್ಠ ವಯೋಮಿತಿ 18 ವರ್ಷ ಪೂರ್ಣಗೊಂಡಿರಬೇಕು ಹಾಗೂ ನಿಗದಿತ ವರ್ಗವಾರು ಗರಿಷ್ಠ ವಯಸ್ಸಿನ ಮಿತಿಯನ್ನು ಕೆಳಗಿನಂತೆ ಮೀರಿಬಾರದು.
ಸಾಮಾನ್ಯ ವರ್ಗ – 35 ವರ್ಷ.
ಪ್ರವರ್ಗ IIA, IIB, IIIA, IIIB – 38 ವರ್ಷ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಾಗಿದ್ದಲ್ಲಿ 40 ವರ್ಷ ಮೀರಿರಬಾರದು.
ಅರ್ಜಿ ಸಲ್ಲಿಸುವ ವಿಧಾನ | ಆನ್‌ಲೈನ್ ಮೂಲಕ. |
ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ಸೈಟ್ ವಿಳಾಸ | https://ahvs.karnataka.gov.in |
ಪ್ರಮುಖ ದಿನಾಂಕಗಳು
ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ: 14-06-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24-06-2024
ಷರತ್ತುಗಳು
- ಗುತ್ತಿಗೆ ಆಧಾರದ ನೇಮಕಾತಿಯು ಸಂಪೂರ್ಣವಾಗಿ ತಾತ್ಕಾಲಿಕವಾಗಿದೆ, ಯಾವುದೇ ಸಂದರ್ಭದಲ್ಲಿ ಖಾಯಂಗೊಳಿಸಲು ಅವಕಾಶ ಇರೋದಿಲ್ಲ.
- ಗುತ್ತಿಗೆ ಆಧಾರದ ಮೇಲೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕದಲ್ಲಿ ವಾಸಿಸುತ್ತಿರಬೇಕು.
- ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಪಶುವೈದ್ಯಾಧಿಕಾರಿಗಳಿಗೆ ನಿಗದಿಪಡಿಸಿರುವ ಮಾಸಿಕ ಸಂಬಳದ ಹೊರತುಪಡಿಸಿ ಇತರೆ ಯಾವುದೇ ಭತ್ಯೆಗಳನ್ನು ನೀಡುವುದಿಲ್ಲ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ
1ನೇ ಹಂತ : ಅಪ್ಲಿಕೇಶನ್ ಸಬ್‌ಮಿಷನ್
2ನೇ ಹಂತ : ಶುಲ್ಕ ಪಾವತಿ ಮಾಡುವುದು.
3ನೇ ಹಂತ : ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳುವುದು.
ಸಂಭಾವ್ಯ ಅರ್ಜಿ ಶುಲ್ಕ
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ ರೂ.750.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.750.
SC / ST / ಪ್ರವರ್ಗ-1 / ವಿಶೇಷ ಚೇತನ ಅಭ್ಯರ್ಥಿಗಳಿಗೆ ರೂ.500.
ವೇತನ ವಿವರ
INR 52640 /Month