ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಐಟಿ, ಸಿಎಸ್, ಇಸಿಇ, ಇಲೆಕ್ಟ್ರಾನಿಕ್ಸ್, ಇ ಅಂಡ್ ಟಿಸಿ, ಮೆಕ್ಯಾನಿಕಲ್ ಮತ್ತು ಇಇಇ ಬ್ರಾಂಚ್‌ಗಳಲ್ಲಿ ಇಂಜಿನಿಯರಿಂಗ್ ಪದವಿ (ಬಿಇ, ಬಿ.ಟೆಕ್) ಹೊಂದಿದ ಅಭ್ಯರ್ಥಿಗಳನ್ನು ನೇಮಕ ಮಾಡಲು 78 ಹುದ್ದೆಗಳ ಪೂರೈಸಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ನವೆಂಬರ್ 24, 2024 ಕೊನೆಯ ದಿನಾಂಕವಾಗಿದೆ.
ನೇಮಕಾತಿಯ ಪ್ರಮುಖ ಅಂಶಗಳು:
- ಒಟ್ಟು ಹುದ್ದೆಗಳು: 78
- ಹುದ್ದೆಗಳ ಹೆಸರು: ಸೀನಿಯರ್ ಫೀಲ್ಡ್ ಆಪರೇಷನ್ ಇಂಜಿನಿಯರ್, ಫೀಲ್ಡ್ ಅಪರೇಷನ್ ಇಂಜಿನಿಯರ್, ಪ್ರಾಜೆಕ್ಟ್ ಇಂಜಿನಿಯರ್-1, ಟ್ರೈನಿ ಇಂಜಿನಿಯರ್-1
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ನವೆಂಬರ್ 24, 2024
- ಅಧಿಕೃತ ವೆಬ್‌ಸೈಟ್: BEL Careers
ಹುದ್ದೆಗಳ ವಿವರ
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ | ವಿದ್ಯಾರ್ಹತೆ | ಗರಿಷ್ಠ ವಯೋಮಿತಿ |
---|---|---|---|
ಸೀನಿಯರ್ ಫೀಲ್ಡ್ ಆಪರೇಷನ್ ಇಂಜಿನಿಯರ್ | 06 | ಸಂಬಂಧಿತ ವಿಷಯದಲ್ಲಿ ಪದವಿ, ಪಿಜಿ | 45 ವರ್ಷ |
ಫೀಲ್ಡ್ ಅಪರೇಷನ್ ಇಂಜಿನಿಯರ್ | 41 | ಬಿಎಸ್ಸಿ / ಬಿಇ / ಬಿ.ಟೆಕ್ / ಎಂಸಿಎ | 40 ವರ್ಷ |
ಪ್ರಾಜೆಕ್ಟ್ ಇಂಜಿನಿಯರ್-1 | 13 | ಬಿಎಸ್ಸಿ / ಬಿಇ / ಬಿ.ಟೆಕ್ | 32 ವರ್ಷ |
ಟ್ರೈನಿ ಇಂಜಿನಿಯರ್-1 | 18 | ಬಿಎಸ್ಸಿ / ಬಿಇ / ಬಿ.ಟೆಕ್ / ಎಂಸಿಎ / ಎಂಎಸ್ಸಿ | 28 ವರ್ಷ |
ವಿದ್ಯಾರ್ಹತೆಗಳು
ಅಭ್ಯರ್ಥಿಗಳು ಇಸಿಇ, ಇಲೆಕ್ಟ್ರಾನಿಕ್ಸ್, ಐಟಿ, ಸಿಎಸ್, ಇ ಅಂಡ್ ಟಿಸಿ, ಮೆಕ್ಯಾನಿಕಲ್ ಮತ್ತು ಇಇಇ ವಿಷಯಗಳಲ್ಲಿ ಬಿಇ, ಬಿ.ಟೆಕ್, ಬಿಸಿಎ, ಎಂಸಿಎ ಅಥವಾ ಎಂಎಸ್ಸಿ ಪದವಿ ಪೂರೈಸಿರಬೇಕು.
ಅರ್ಜಿ ಶುಲ್ಕ ವಿವರಗಳು
ಹುದ್ದೆಯ ಹೆಸರು | ಅರ್ಜಿ ಶುಲ್ಕ |
---|---|
ಸೀನಿಯರ್ ಫೀಲ್ಡ್ ಆಪರೇಷನ್ ಇಂಜಿನಿಯರ್ | ರೂ. 450 |
ಪ್ರಾಜೆಕ್ಟ್ ಇಂಜಿನಿಯರ್-1 | ರೂ. 400 |
ಟ್ರೈನಿ ಇಂಜಿನಿಯರ್-1 | ರೂ. 150 |
ಅರ್ಜಿ ಸಲ್ಲಿಸಲು ಪ್ರಕ್ರಿಯೆ
- ಅಧಿಕೃತ BEL Careers ವೆಬ್‌ಸೈಟ್ ಗೆ ಭೇಟಿ ನೀಡಿ.
- ನಿಮ್ಮ ಆಸಕ್ತ ಹುದ್ದೆಯ ಮೇಲೆ ‘Click Here to Apply’ ಕ್ಲಿಕ್ ಮಾಡಿ.
- ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಶುಲ್ಕ ಪಾವತಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ.
ಅರ್ಜಿಗೆ ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ವಿದ್ಯಾರ್ಹತೆ ಪ್ರಮಾಣ ಪತ್ರಗಳು, ಇಮೇಲ್ ವಿಳಾಸ, ಮತ್ತು ಮೊಬೈಲ್ ನಂಬರ್.
ಈ ಅರ್ಜಿಯಲ್ಲಿ ಭಾಗವಹಿಸಲು ಸರ್ವರಿಗೂ ಶುಭಾಶಯಗಳು!