ಸ್ನೇಹಿತರೆ ಇವತ್ತಿನ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ನಾವು ನಿಮಗೆ ಹೊಸ ಬಿಪಿಎಲ್ ಕಾರ್ಡಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು, ಎಲ್ಲಿ ಅರ್ಜಿ ಸಲ್ಲಿಸಬೇಕು,
ಕರ್ನಾಟಕದಲ್ಲಿ ವಿವಿಧ ಮೂಲಗಳಿಂದ ಗುರುತಿಸಲ್ಪಟ್ಟ ದುರ್ಬಲ ವರ್ಗದವರಿಗೆ ಪಡಿತರ ವಿತರಿಸಿ ಅವರಿಗೆ ಆಹಾರ ಭದ್ರತೆ ಒದಗಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಇಲ್ಲಿ, ಕರ್ನಾಟಕ ಸರ್ಕಾರವು ನೀಡುವ ಪಡಿತರ ಚೀಟಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಅಗತ್ಯ ಮಾಹಿತಿಯನ್ನು ನಾವು ಒದಗಿಸುತ್ತೇವೆ.
ಯಾವಾಗ ಅರ್ಜಿ ಸಲ್ಲಿಸಬಹುದು, ಯಾವೆಲ್ಲ ದಾಖಲಾತಿಗಳು ಬೇಕು, ಹೀಗೆ ಪ್ರತಿ ವಿಧಾನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ದಯವಿಟ್ಟು ಕೊನೆತನಕ ಓದಿ.
ಹೌದು ಸ್ನೇಹಿತರೆ ಕಳೆದ ಒಂದು ವಾರದಿಂದ BPL Ration Card ಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಏಕೆಂದರೆ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಮೇಲೆ ಪ್ರಣಾಳಿಕೆಯಲ್ಲಿ ಹೇಳಿದ ಐದು ಗ್ಯಾರಂಟಿ ಯೋಜನೆಗಳನ್ನು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ.
ಈ ಐದು ಗ್ಯಾರಂಟಿ ಯೋಜನೆಗಳಿಗೆ ಮುಖ್ಯವಾಗಿ ಬಿಪಿಎಲ್ ಕಾರ್ಡುದಾರರು ಅರ್ಹರಾಗಿರುತ್ತಾರೆ. ಅದರಲ್ಲಿ ಅನ್ನ ಭಾಗ್ಯ ಯೋಜನೆ ಕೂಡ ಒಂದಾಗಿದೆ. ಈ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಹತ್ತು ಕೆಜಿ ಅಕ್ಕಿ ಬಿಪಿಎಲ್ ಕಾರ್ಡ್ದಾರರಿಗೆ ಸಿಗಲಿದೆ. ಈ ಕಾರಣದಿಂದಾಗಿ ಇದೀಗ BPL Ration Card ಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ಲಕ್ಷಕ್ಕೂ ಅಧಿಕವಾಗಿದೆ.
ಈ ಕಾರ್ಡ್ ನಿಂದಾಗಿ ಆಹಾರ ಇಲಾಖೆ ಒಮ್ಮೆಲೇ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ಇದರಿಂದ ಜನರಿಗೆ ನಿರಾಶೆಯಾಗಿದ್ದು ಆದರೆ ಇದೀಗ ರಾಜ್ಯ ಸರ್ಕಾರ ಆಹಾರ ಇಲಾಖೆ ಮತ್ತೆ ಸಿಹಿ ಸುದ್ದಿಯನ್ನು ನೀಡಿದೆ.
ಅದೇನೆಂದರೆ ಈಗ ನೀವು ಮತ್ತೆ BPL Ration Card ಗೆ ಅರ್ಜಿಯನ್ನು ಸಲ್ಲಿಸಬಹುದು (BPL Ration Card Online Application). ಜೂನ್ 5 ರಿಂದ ನೀವು ರೇಷನ್ ಕಾರ್ಡ್ ಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.
ಪ್ರಮುಖ ಲಿಂಕ್‌ಗಳು:
ಇತ್ತೀಚಿನ ಸುದ್ದಿ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳು | APPLY HERE ಕ್ಲಿಕ್ |
Documents for BPL Card Apply ಅರ್ಜಿ ಸಲ್ಲಿಸಲು ಬೇಕಾದ ಮುಖ್ಯ ದಾಖಲಾತಿಗಳು
- ಆಧಾರ್ ಕಾರ್ಡ್
- ಜನನ ಪ್ರಮಾಣ ಪತ್ರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮತ್ತು
- ಮುಖ್ಯವಾಗಿ ರೇಷನ್ ಕಾರ್ಡ್ ನ ಸಂಖ್ಯೆ ಬೇಕಾಗುತ್ತದೆ.
ರೇಷನ್ ಕಾರ್ಡ್ ಗೆ Apply Online Here
BPL Ration Card Online Application Procedure ರೇಷನ್ ಕಾರ್ಡ್ ಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ
- ಮೊಟ್ಟ ಮೊದಲು ನೀವು ಈ ahara.kar.nic.in ವೆಬ್ ಸೈಟಿಗೆ ಭೇಟಿ ನೀಡಬೇಕು.
- ನಂತರ ಇಲ್ಲಿ ಕಾಣಿಸುವ ಇ ಸೇವೆಗಳು (E Service) ಮೇಲೆ ಕ್ಲಿಕ್ ಮಾಡಬೇಕು.
- ನಂತರ ನೀವು New Ration Card ಹೊಸ ಪಡಿತರ ಚೀಟಿ ಆಯ್ಕೆ ಮಾಡಿಕೊಳ್ಳಬೇಕು.
- ಇಲ್ಲಿ ಹೊಸ ಪಡಿತರ ಚೀಟಿ ವಿನಂತಿ ಆಯ್ಕೆ ಮಾಡಿಕೊಳ್ಳಿ.
- ನಂತರ ಹೊಸ ಪಡಿತರ ಚೀಟಿ ವಿನಂತಿ (Request New Ration card) ಮೇಲೆ ಕ್ಲಿಕ್ ಮಾಡಿ.
- ನಂತರ ಬಿಪಿಎಲ್ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು, (PHH) ಆದ್ಯತಾ ಹೌಸ್ ಹೋಲ್ಡ್ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ಇದಾದ ನಂತರ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಇಲ್ಲಿ ಟೈಪ್ ಮಾಡಿ ನಂತರ ಹೋಗಿ (Go) ಬಟನ್ ಮೇಲೆ ಕ್ಲಿಕ್ ಮಾಡಿ.
- ನಂತರ ಓಟಿಪಿ ಪರಿಶೀಲನೆ ಬಳಸಿಕೊಂಡು ರಿಜಿಸ್ಟ್ರೇಷನ್ ಮಾಡಬೇಕು. ನಿಮ್ಮ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಕಳಿಸಲಾಗುತ್ತದೆ. ಇಲ್ಲಿ ಓಟಿಪಿನ ನಮೂದಿಸಿ ಗೋ ಮೇಲೆ ಕ್ಲಿಕ್ ಮಾಡಬೇಕು.
- ನಂತರ ನಿಮ್ಮ ಆಧಾರ್ ಮಾಹಿತಿಯನ್ನು ತೋರಿಸುತ್ತದೆ. ನಂತರ ಸೇರಿಸು (Add) ಬಟನ್ ಕ್ಲಿಕ್ ಮಾಡಿ. ಈಗ ನಿಮ್ಮ ಅಪ್ಲಿಕೇಶನ್ ಕ್ರಿಯೇಟ್ ಆಗುತ್ತದೆ. ನಂತರ ಕೇಳಿರುವ ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ ಸಬ್ಮಿಟ್ ಮಾಡಬೇಕಾಗುತ್ತದೆ
ಪ್ರಮುಖ ಲಿಂಕ್‌ಗಳು:
SSLC ವಿದ್ಯಾರ್ಥಿಗಳಿಗೆ ಉದ್ಯೋಗಗಳು | APPLY HERE ಕ್ಲಿಕ್ |
PUC ವಿದ್ಯಾರ್ಥಿಗಳಿಗೆ ಉದ್ಯೋಗಗಳು | APPLY HERE ಕ್ಲಿಕ್ |
ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗಗಳು | APPLY HERE ಕ್ಲಿಕ್ |
ಇಲ್ಲಿ ಆನ್ಲೈನಲ್ಲಿ ನೀವು ಅರ್ಜಿ ಸಲ್ಲಿಸಲು ಬಯೋಮೆಟ್ರಿಕ್ ನ ಅವಶ್ಯಕತೆ ಇರುತ್ತದೆ ಹೀಗಾಗಿ ನೀವು ನಿಮ್ಮ ಹತ್ತಿರದ ಯಾವುದೇ ಸಿಎಸ್‌ಸಿ ಸೆಂಟರ್ ಅಥವಾ ಸೈಬರ್ ಸೆಂಟರ್ ಹೋಗಿ ಅರ್ಜಿಯನ್ನು ಸಲ್ಲಿಸಬಹುದು.
ಆನ್‌ಲೈನ್‌ನಲ್ಲಿ ಪಡಿತರ ಚೀಟಿ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ
ನೀವು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ ನಂತರ, ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ಹಾಗೆ ಮಾಡಲು, ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಿ:
- ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ (ahara.kar.nic.in)
- ಇ-ಸೇವೆಗಳ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
- ‘ಇ-ಸ್ಥಿತಿ’ಗೆ ಸ್ಕ್ರಾಲ್ ಮಾಡಿ
- ‘ಹೊಸ/ಡಿಫೆಂಡಿಂಗ್ ಪಡಿತರ ಚೀಟಿಯ ಸ್ಥಿತಿ’ ಆಯ್ಕೆಮಾಡಿ
- ಮುಂದೆ, ಸೂಕ್ತವಾದ ವಿಭಾಗದ ಮೇಲೆ ಕ್ಲಿಕ್ ಮಾಡಿ
- ‘ಪಡಿತರ ಚೀಟಿಯ ಸ್ಥಿತಿ’ ಆಯ್ಕೆಮಾಡಿ
- ‘ಪರಿಶೀಲನೆ ಪ್ರಕಾರ’ ಆಯ್ಕೆಮಾಡಿ
- ಆರ್‌ಸಿ ಸಂಖ್ಯೆಯನ್ನು ನಮೂದಿಸಿ ಮತ್ತು ‘ಹೋಗಿ’ ಕ್ಲಿಕ್ ಮಾಡಿ
- ಹಾಗೆ ಮಾಡಿದಾಗ, ಸ್ಥಿತಿಯನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ