ನಮಸ್ಕಾರ ಸ್ನೇಹಿತರೇ, ಕೆನರಾ ಬ್ಯಾಂಕ್ ದೇಶವ್ಯಾಪಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಎಲ್ಲಾ ಮುಖ್ಯ ಬ್ರಾಂಚ್‌ಗಳಲ್ಲಿ ಹುದ್ದೆಗಳ ಭರ್ತಿ ಮಾಡಲಾಗುತ್ತಿದೆ. ಬೆಂಗಳೂರು ಅರ್ಬನ್‌ನಲ್ಲಿ 92 ಹುದ್ದೆಗಳು ಖಾಲಿ ಇವೆ, ಮತ್ತು ಕರ್ನಾಟಕದ ಇತರ ಜಿಲ್ಲೆಗಳಲ್ಲಿಯೂ ಉದ್ಯೋಗಾವಕಾಶಗಳಿವೆ.
ಹುದ್ದೆಯ ವಿವರಗಳು:
- ಹುದ್ದೆಯ ಹೆಸರು: ಅಪ್ರೆಂಟಿಸ್
- ಒಟ್ಟು ಹುದ್ದೆಗಳು: 3,000
- ಕರ್ನಾಟಕದಲ್ಲಿ ಹುದ್ದೆಗಳು: 600
- ಬೆಂಗಳೂರು ಅರ್ಬನ್‌ನಲ್ಲಿ ಹುದ್ದೆಗಳು: 92
ವಯೋಮಿತಿ:
- ಅರ್ಜಿಗೆ ಅರ್ಹರು 20 ರಿಂದ 28 ವರ್ಷದೊಳಗಿನವರು.
- ಸಡಿಲಿಕೆ:
- ಎಸ್ಸಿ/ಎಸ್ಟಿಗೆ 5 ವರ್ಷಗಳ ಸಡಿಲಿಕೆ
- ಒಬಿಸಿಗೆ 3 ವರ್ಷಗಳ ಸಡಿಲಿಕೆ
- ವಿಶೇಷ ಚೇತನರಿಗೆ 10 ವರ್ಷಗಳ ಸಡಿಲಿಕೆ
ವಿದ್ಯಾರ್ಹತೆ:
ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು.
ಆಯ್ಕೆ ಪ್ರಕ್ರಿಯೆ:
- ದ್ವಿತೀಯ ಪಿಯುಸಿ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಲಾಗುತ್ತದೆ.
- ನಂತರ ಟೆಸ್ಟ್ ಮತ್ತು ದಾಖಲಾತಿ ಪರಿಶೀಲನೆ ನಡೆಸಲಾಗುತ್ತದೆ.
- ಆಯ್ಕೆಯಾದ ಅಭ್ಯರ್ಥಿಗಳನ್ನು 1 ವರ್ಷ ಅವಧಿಗೆ ಕಳಿಸಲಾಗುತ್ತದೆ.
ಅರ್ಜಿಯ ಶುಲ್ಕ:
- ಎಸ್ಸಿ/ಎಸ್ಟಿ ಮತ್ತು ವಿಶೇಷ ಚೇತನರಿಗೆ ಅರ್ಜಿ ಶುಲ್ಕವಿಲ್ಲ.
- ಜನರಲ್ ಮತ್ತು ಒಬಿಸಿಗೆ ₹500/- ಶುಲ್ಕ.
ಮಹತ್ವದ ದಿನಾಂಕಗಳು:
- ಅರ್ಜಿಯ ಪ್ರಾರಂಭ: 21 ಸೆಪ್ಟೆಂಬರ್ 2024
- ಅರ್ಜಿಯ ಕೊನೆಯ ದಿನಾಂಕ: 04 ಅಕ್ಟೋಬರ್ 2024
ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಸಲು ಕೆನರಾ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಅನ್ನು ಭೇಟಿ ಮಾಡಿ.
www.canarabank.com ಗೆ ಭೇಟಿ ನೀಡಿ.
‘Carees >> Recruitment >> Engagement of Graduate Apprentice in Canara Bank Under Apprentices Act, 1961 for FY 2024-25’ ಎಂದಿರುವ ಲಿಂಕ್ ಕ್ಲಿಕ್ ಮಾಡಿ.
ಕೆನರಾ ಬ್ಯಾಂಕ್ ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ವಿಧಾನ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಎರಡು ಹಂತದ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಹಾಗೂ ಸ್ಥಳೀಯ ಭಾಷಾ ಪರೀಕ್ಷೆಯನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ.
ಹುದ್ದೆಗಳ ಅವಧಿ ಒಂದು ವರ್ಷ ಮಾತ್ರವಾಗಿದ್ದು, ನಂತರ ಹುದ್ದೆಯ ಮೇಲೆ ಯಾವುದೇ ಹಕ್ಕು ಚಲಾಯಿಸುವಂತಿಲ್ಲ. ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಪದವಿ ಅಂಕಪಟ್ಟಿ, ಜನ್ಮ ದಿನಾಂಕ ದಾಖಲೆ, ಇತರೆ ವಿವರಗಳು ಬೇಕಾಗುತ್ತವೆ.