rtgh

‘ಕಾಟನ್ ಕ್ಯಾಂಡಿ’ ಬ್ಯಾನ್!! ರಾಜ್ಯ ಸರ್ಕಾರ ಆದೇಶ


ಬೆಂಗಳೂರು : ಕರ್ನಾಟಕದಲ್ಲಿ ಕಾಟನ್ ಕ್ಯಾಂಡಿಯನ್ನು ಬ್ಯಾನ್ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾಹಿತಿಯನು ನೀಡಿದ್ದಾರೆ. ಆರೋಗ್ಯ ದೃಷ್ಟಿಯಿಂದ ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕವಾದ ಅಂಶಗಳು ಪತ್ತೆಯಾದ ಹಿನ್ನೆಲೆ ಬ್ಯಾನ್ ಮಾಡಲಾಗಿದೆ ಎಂದಿದ್ದಾರೆ. ಆಹಾರ ಸುರಕ್ಷತೆಯಡಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

Cotton Candy Ban

ಕಾಟನ್ ಕ್ಯಾಂಡಿಯಲ್ಲಿ ಕೃತಕವಾದ ಬಣ್ಣ, ರಾಸಾಯನಿಕ ಮಿಶ್ರಣವನ್ನು ಮಾಡುವ ಹಿನ್ನೆಲೆಯಲ್ಲಿ ಈ ಹಿಂದೆ ವಿವಿಧ ಸ್ಯಾಂಪಲ್ಗಳನ್ನು ಪರೀಕ್ಷೆಗೆ ನೀಡಲಾಗಿತ್ತು. ಹತ್ತಾರು ಮಾದರಿಯಲ್ಲಿ ಕಾಟನ್ ಕ್ಯಾಂಡಿಯು ಅಸುರಕ್ಷಿತ ಎನ್ನುವುದು ಸಾಬೀತಾಗಿದೆ. ಆಹಾರ ಸುರಕ್ಷತೆಯ ಕಾಯ್ದೆಯಡಿ ಆರೋಗ್ಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕವಾದ ರೋಡಮೈನ್ ಹಾಗೂ ರಾಸಾಯನಿಕವಾದ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ನಿಷೇಧಿಸಲು ಆರೋಗ್ಯ ಇಲಾಖೆಯು ಕ್ರಮ ಕೈಗೊಂಡಿದೆ.

ಇದನ್ನೂ ಸಹ ಓದಿ: ಸಿಲಿಂಡರ್‌ ಖರೀದಿಗೆ ಸಿಗಲಿದೆ ಮುಕ್ತಿ! ಸರ್ಕಾರದಿಂದ ಪ್ರತಿ ಮನೆಗೂ ಸೌರ ಅಡುಗೆ ಒಲೆ ವಿತರಣೆ

ಬಾಂಬೆ ಮಿಠಾಯಿಯು ಮಕ್ಕಳ ಅಚ್ಚುಮೆಚ್ಚಿನ ತಿನಿಸಾಗಿದ್ದು, ಜಾತ್ರೆ ಸೇರಿದಂತೆ ಹಲವು ಕಡೆಗಳಲ್ಲಿ ಇದನ್ನು ಮಾರಾಟ ಮಾಡಲಾಗುತ್ತದೆ. ಬೀದಿ ಬೀದಿಗಳಲ್ಲಿ ಉದ್ದನೆಯ ಒಂದು ಕೋಲಿಗೆ ಬಾಂಬೆ ಮಿಠಾಯಿಯನ್ನು ಸೆಕ್ಕಿಸಿಕೊಂಡು ಅದನ್ನು ಮಾರಾಟ ಮಾಡುವುದನ್ನು ನಾವು ನೋಡುತ್ತಿರುತ್ತೇವೆ. ಬಾಂಬೆ ಮಿಠಾಯಿಯಲ್ಲಿ ಹಾನಿಕಾರಕವಾದ ಅಂಶ ಇರೋದ್ರಿಂದ ಕಾಟನ್ ಕ್ಯಾಂಡಿಯ ಮಾರಾಟ ಹಾಗೂ ತಯಾರಿಕೆ ನಿಷೇಧಗೊಳಿಸಲು ಆದೇಶವನ್ನು ಹೊರಡಿಸಲಾಗಿದೆ.

ನಿಮ್ಮ ಮೊಬೈಲ್‌ನಲ್ಲಿ ಈ ಆ್ಯಪ್ ಇದ್ರೆ ತಕ್ಷಣ ಡಿಲೀಟ್‌ ಮಾಡಿ! ಗೂಗಲ್‌ನಿಂದ ಖಡಕ್‌ ಎಚ್ಚರಿಕೆ

UIDAI ನಲ್ಲಿ ಉದ್ಯೋಗ ಪಡೆಯಲು ಸುವರ್ಣಾವಕಾಶ! ಪದವಿಯನ್ನು ಹೊಂದಿದ್ದರೆ ನಿಮಗೆ ನೇರ ಉದ್ಯೋಗ


Leave a Reply

Your email address will not be published. Required fields are marked *