ರಾಜ್ಯ ಸರ್ಕಾರದ ನೇರ ನಗದು ವರ್ಗಾವಣೆ (Direct Benefit Transfer – DBT) ಯೋಜನೆಗಳ ಫಲಾನುಭವಿಗಳಿಗೆ ಇನ್ನಷ್ಟು ಸುಲಭತೆಯನ್ನು ಒದಗಿಸಲು DBT Karnataka ಎಂಬ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಅಪ್ಲಿಕೇಶನ್ ಮೂಲಕ ಸಂಧ್ಯಾ ಸುರಕ್ಷಾ, ಗೃಹಲಕ್ಷ್ಮಿ, ಮತ್ತು ಇತರ DBT ಯೋಜನೆಗಳ ಪಾವತಿ ವಿವರಗಳನ್ನು ತಕ್ಷಣದಲ್ಲೇ ಪರಿಶೀಲಿಸಲು ಅವಕಾಶ ಸಿಗುತ್ತದೆ.
ಈ ಅಪ್ಲಿಕೇಶನ್‌ನ ಪ್ರಮುಖ ವೈಶಿಷ್ಟ್ಯಗಳು:
- ಸಂಧ್ಯಾ ಸುರಕ್ಷಾ, ಗೃಹಲಕ್ಷ್ಮಿ, ಮತ್ತು ಇತರ DBT ಯೋಜನೆಗಳಡಿ ಬ್ಯಾಂಕ್ ಖಾತೆಗೆ ಜಮಾ ಆಗಿರುವ ಹಣದ ವಿವರವನ್ನು ಪರಿಶೀಲಿಸಲು.
- ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ಲಿಂಕ್ ಸ್ಥಿತಿಯನ್ನು ನೋಡಲು.
- ಫಲಾನುಭವಿಗಳು ಯಾವುದೇ ಸರ್ಕಾರಿ ಕಚೇರಿ ಅಥವಾ ಬ್ಯಾಂಕ್ ಶಾಖೆಗೆ ಹೋಗದೆ ತಮ್ಮ ಮೊಬೈಲ್‌ನಲ್ಲೇ ಹಣದ ಮಾಹಿತಿಯನ್ನು ಪಡೆದುಕೊಳ್ಳಬಹುದು.
DBT Karnataka ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವ ವಿಧಾನ:
- Google Play Store-ಗೆ ಭೇಟಿ ನೀಡಿ DBT Karnataka ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ.
- ಅಪ್ಲಿಕೇಶನ್ ಅನ್ನು ಸ್ಥಾಪಿಸಿ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ.
- OTP ಪಡೆಯಿರಿ ಮತ್ತು ಪಾಸ್ವರ್ಡ್ ರಚಿಸಿ ಲಾಗಿನ್ ಮಾಡಿ.
DBT ಪಾವತಿ ಸ್ಥಿತಿಯನ್ನು ಚೆಕ್ ಮಾಡುವ ಹಂತಗಳು:
- ಅಪ್ಲಿಕೇಶನ್ ಲಾಗಿನ್ ಮಾಡಿ “ಪಾವತಿ ಸ್ಥಿತಿ” (Payment Status) ಆಯ್ಕೆಯನ್ನು ಕ್ಲಿಕ್ ಮಾಡಿ.
- ಆಯಾ ಯೋಜನೆಯ ಹೆಸರನ್ನು ಆಯ್ಕೆ ಮಾಡಿ.
- ನಿಗದಿತ ಯೋಜನೆಯಡಿ ಯಾವ ದಿನಾಂಕಕ್ಕೆ ಹಣ ಜಮಾ ಆಗಿದೆ ಎಂಬ ವಿವರ ಮತ್ತು ಬ್ಯಾಂಕ್ ಮಾಹಿತಿ ಸಹ ಪೂರಕವಾಗಿ ದೊರೆಯುತ್ತದೆ.
ಆಧಾರ್ ಲಿಂಕ್ ಸ್ಥಿತಿಯನ್ನು ಪರಿಶೀಲನೆ:
- “Seeding Status of Aadhar in Bank Account” ಬಟನ್ ಆಯ್ಕೆ ಮಾಡಿ, ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ “Active”, ಲಿಂಕ್ ಆಗಿರದಿದ್ದರೆ “Inactive” ಎಂದು ತೋರಿಸುತ್ತದೆ.
- ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ವಿವರವನ್ನು ಸಹ ನೋಡಬಹುದಾಗಿದೆ.
ಅಪ್ಲಿಕೇಶನ್‌ನ ಉಪಯೋಗ:
DBT Karnataka ಅಪ್ಲಿಕೇಶನ್ ಪರಿಚಯವು ಫಲಾನುಭವಿಗಳಿಗೆ ಹತ್ತಿರದ ಸೌಲಭ್ಯವನ್ನು ಒದಗಿಸುತ್ತದೆ. ಈ ಅಪ್ಲಿಕೇಶನ್ ಬಳಸುವ ಮೂಲಕ ವಿವಿಧ ಯೋಜನೆಗಳ ಹಣದ ಬಗ್ಗೆ ಸ್ಪಷ್ಟತೆ ಮತ್ತು ಅನುಕೂಲತೆ ದೊರೆಯುತ್ತದೆ.
Download Link: DBT Karnataka App