Scholarship
Scholarship: ವರ್ಷವು ಹತ್ತಿರವಾಗುತ್ತಿದ್ದಂತೆ, ಹೆಚ್ಚು ಬೇಡಿಕೆಯಿರುವ SSP (ವಿದ್ಯಾರ್ಥಿ ಸ್ಕಾಲರ್ ಪ್ರೋಗ್ರಾಂ) ವಿದ್ಯಾರ್ಥಿವೇತನಕ್ಕಾಗಿ ಮುಂಬರುವ ಗಡುವನ್ನು ಪೋಷಕರು ಮತ್ತು ಪೋಷಕರಿಗೆ ನೆನಪಿಸಲಾಗುತ್ತದೆ. 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾದ ಈ ವಿದ್ಯಾರ್ಥಿವೇತನವು ಹಣಕಾಸಿನ ಹೊರೆಗಳನ್ನು ನಿವಾರಿಸಲು ಮತ್ತು ಅರ್ಹ ಕಲಿಯುವವರಿಗೆ ವರ್ಧಿತ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
ರಾಜ್ಯದ 1 ನೇ ತರಗತಿಯಿಂದ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯದ ಅರ್ಹ ವಿದ್ಯಾರ್ಥಿಗಳಿಂದ 2023-24 ನೇ ಸಾಲಿಗೆ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ (ಎಸ್‌ಎಸ್ಪಿ) ದಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಡಿ.31 ಕೊನೆಯ ದಿನಾಂಕವಾಗಿದೆ.
ಎನ್‌ಎಸ್ಪಿ ಯಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆಯಲು ಎಸ್‌ಎಸ್ಪಿ ಪೋರ್ಟಲ್ https://ssp.prematric.karnataka.gov.in ಅಡಿಯಲ್ಲಿ ಅರ್ಜಿ ಸಲ್ಲಿಸುವುದು(ಪ್ರೆಶ್) ನಲ್ಲಿ ಕಡ್ಡಾಯವಾಗಿದ್ದು, ಅರ್ಜಿ ಸಲ್ಲಿಸಲು ಡಿಸೆಂಬರ್, 31 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗೆ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ (ಎಸ್‌ಎಸ್ಪಿ) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವೆಬ್ಸೈಟ್ https://dom.karnataka.gov.in/kodagu/public ಅಥವಾ ಸಹಾಯವಾಣಿ ಸಂಖ್ಯೆ 8277799990 ಗೆ ಅಥವಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಮೌಲಾನಾ ಆಜಾದ್ ಭವನ, ಎಫ್‌ಎಂಸಿ ಕಾಲೇಜು ಹತ್ತಿರ, ಮಡಿಕೇರಿ ಇವರನ್ನು ಹಾಗೂ ಕಚೇರಿ ದೂ.ಸಂ.08272-225528, ಮಾಹಿತಿ ಕೇಂದ್ರ, ಮಡಿಕೇರಿ 08272-220214, ಮಾಹಿತಿ ಕೇಂದ್ರ, ಸೋಮವಾರಪೇಟೆ 8548068519, ಮಾಹಿತಿ ಕೇಂದ್ರ, ಪೊನ್ನಂಪೇಟೆ 9900731037 ನ್ನು ಸಂಪರ್ಕಿಸಬಹುದು.