ಚಂದ್ರಯಾನ-3 ಬಗ್ಗೆ ಪ್ರಬಂಧ :
ಚಂದ್ರಯಾನ 2 ಯೋಜನೆಯ ವಿಫಲವಾದ 4 ವರ್ಷಗಳ ಬಳಿಕ ಚಂದ್ರಯಾನ 3 ಯೋಜನೆ ಯಶಸ್ವಿಯಾಗಿದೆ. ಭೂಮಿಯಿಂದ ಆಂತರಿಕ್ಷಕ್ಕೆ ನೆಗೆದ ಫ್ಯಾಟ್ ಬಾಯ್ ರಾಕೆಟ್, ಗಗನ ನೌಕೆಯನ್ನು ಹೊತ್ತು ಸಾಗಿತ್ತು. 40 ದಿನಗಳ ಬಳಿಕ ಚಂದ್ರನ ಅಂಗಳಕ್ಕೆ ಇಳಿದ ಲ್ಯಾಂಡರ್, ತನ್ನ ಒಡಲಿನಿಂದ ರೋವರ್ ಕೆಳಗಿಳಿಸಿದ್ದು, ಇದರ ಕಾರ್ಯಾಚರಣೆ ಆರಂಭ ಆಗಿದೆ. ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಇದು. ಈ ಯೋಜನೆ ಯಶಸ್ವಿಯಾಗುವ ಮೂಲಕ ಭಾರತ ಆಂತರಿಕ್ಷ ರಂಗದಲ್ಲಿ ಮಹತ್ವದ ಮೈಲುಗಲ್ಲು ಸ್ಥಾಪಿಸಿದೆ.
chandrayaan-3 information in kannada
ಚಂದ್ರಯಾನ 3ನೇ ಭಾಗ ಭರ್ಜರಿ ಯಶಸ್ಸು ಕಂಡಿದೆ. ಗಗನ ನೌಕೆಯನ್ನು ಹೊತ್ತ ಭಾರೀ ಗಾತ್ರದ ಫ್ಯಾಟ್ ಬಾಯ್ ರಾಕೆಟ್ ಚಂದ್ರನತ್ತ ಹೊರಟ 40 ದಿನಗಳ ಬಳಿಕ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿದಿದೆ. ರಾಕೆಟ್‌ನ ಒಳಗೆ ಇದ್ದ ಗಗನ ನೌಕೆಯಲ್ಲಿ ವಿಕ್ರಂ ಹೆಸರಿನ ಲ್ಯಾಂಡರ್ ಹಾಗೂ ಪ್ರಗ್ಯಾನ್ ಎಂಬ ರೋವರ್ ಇತ್ತು. ಚಂದಿರನ ನೆಲದ ಮೇಲೆ ಈ ಲ್ಯಾಂಡರ್ ಇಳಿಯಿತು. ನಂತರ ಅದರೊಳಗೆ ಇದ್ದ ರೋವರ್, ಚಂದ್ರನ ನೆಲದ ಮೇಲೆ ಓಡಾಡುತ್ತಿದೆ. ಹಾಗೆ ನೋಡಿದ್ರೆ 4 ವರ್ಷಗಳ ಹಿಂದೆಯೇ ಈ ಲ್ಯಾಂಡರ್ ಹಾಗೂ ರೋವರ್ ಚಂದ್ರನ ನೆಲದ ಮೇಲೆ ಇಳಿಯಬೇಕಿತ್ತು. ಆದರೆ ಚಂದ್ರಯಾನ 2 ಯೋಜನೆ ವಿಫಲವಾಗಿತ್ತು. ಹೀಗಾಗಿ ಇಸ್ರೋ ಸಂಸ್ಥೆ ಮರಳಿ ಯತ್ನವ ಮಾಡಿತು. ಇದೀಗ ಯಶ ಕಂಡಿರುವ ಚಂದ್ರಯಾನ 3 ಯೋಜನೆಯ ಉದ್ದೇಶ ಏನು? ಇದರಿಂದ ದೇಶಕ್ಕೆ ಏನು ಲಾಭ? ಈ ಕುರಿತ ಸಮಗ್ರ ಮಾಹಿತಿ ಇಲ್ಲಿದೆ..
Table of Contents
ಚಂದ್ರನ ಊರಿಗೆ ಬರೋಬ್ಬರಿ 40 ದಿನಗಳ ಪ್ರಯಾಣ..!
ಜುಲೈ 14 ರಂದು ಮಧ್ಯಾಹ್ನ 2.35ಕ್ಕೆ ಗಗನಕ್ಕೆ ಚಿಮ್ಮಿರುವ ರಾಕೆಟ್, ಚಂದ್ರನ ಅಂಗಳ ತಲುಪೋದಕ್ಕೆ ಬರೋಬ್ಬರಿ 40 ದಿನ ಬೇಕು. ಆಗಸ್ಟ್ 23 ಅಥವಾ 24 ರಂದು ಚಂದ್ರನ ಮೇಲೆ ನೌಕೆ ಲ್ಯಾಂಡ್ ಆಗಲಿದೆ. ಶ್ರೀಹರಿಕೋಟಾದಿಂದ ಹೊರಟ ರಾಕೆಟ್, ಮೊದಲಿಗೆ ಭೂಮಿಯ ಕಕ್ಷೆಗೆ ಗಗನ ನೌಕೆಯನ್ನು ತಲುಪಿಸಲಿದೆ. ಆ ನಂತರ ಈ ನೌಕೆ ಭೂಮಿಯ ಸುತ್ತಲೂ ತಿರುಗುತ್ತಾ ಹೋಗುತ್ತದೆ. ಪ್ರತಿ ಬಾರಿ ಭೂಮಿಯನ್ನು ಸುತ್ತು ಹಾಕುವಾಗಲೂ ಭೂಮಿಯಿಂದ ತನ್ನ ದೂರ ಹೆಚ್ಚಿಸಿಕೊಳ್ಳುತ್ತೆ. ನಂತರ ಚಂದ್ರನ ಗುರುತ್ವಾಕರ್ಷಣೆಗೆ ಒಳಪಟ್ಟು ಚಂದ್ರನ ಕಕ್ಷೆ ಸೇರುವ ನೌಕೆ, ಅಲ್ಲಿಯೂ ಕೂಡಾ ಚಂದ್ರನನ್ನು ಸುತ್ತು ಹಾಕಲಿದೆ. ಪ್ರತಿ ಬಾರಿ ಸುತ್ತು ಹಾಕುವಾಗಲೂ ಚಂದ್ರನಿಗೆ ಸಮೀಪವಾಗಲಿದೆ. ಅಂತಿಮವಾಗಿ ಚಂದ್ರನಿಂದ 100 ಕಿ. ಮೀ. ದೂರ ಇರುವಾಗ ಗಗನ ನೌಕೆಯಿಂದ ಲ್ಯಾಂಡರ್ ಬೇರ್ಪಡಲಿದೆ. ಈ ಲ್ಯಾಂಡರ್‌ನಲ್ಲಿ ಇಂಧನ ಹಾಗೂ ಎಂಜಿನ್ ಇರುತ್ತದೆ. ಇದರ ಸಹಾಯದಿಂದ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿಯಲಿದೆ. ಲ್ಯಾಂಡರ್ ಸುರಕ್ಷಿತವಾಗಿ ಲ್ಯಾಂಡ್ ಆದ ಬಳಿಕ ಇಳಿಜಾರಿನ ರೀತಿಯ ರ‍್ಯಾಂಪ್ ತೆರೆದುಕೊಳ್ಳಲಿದೆ. ಬಳಿಕ ಲ್ಯಾಂಡರ್ ಒಳಗಿದ್ದ ರೋವರ್ ನಿಧಾನವಾಗಿ ಚಂದ್ರನ ಅಂಗಳಕ್ಕೆ ಎಂಟ್ರಿ ಕೊಡಲಿದೆ.
ಚಂದ್ರನ ದಕ್ಷಿಣ ಧ್ರುವದ ಮೇಲೆ ಕಣ್ಣೇಕೆ?
2019ರಲ್ಲಿ ಚಂದ್ರಯಾನ 2 ಯೋಜನೆ ಸಂದರ್ಭದಲ್ಲೂ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲೇ ಇಳಿಸಲು ತೀರ್ಮಾನಿಸಲಾಗಿತ್ತು. ಇದೀಗ ಚಂದ್ರಯಾನ 3 ಯೋಜನೆಯಲ್ಲೂ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲೇ ಇಳಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಚಂದ್ರನ ಮೇಲೆ ವಿಶಾಲವಾದ ಸ್ಥಳವನ್ನೂ ಗುರ್ತಿಸಲಾಗಿದೆ. ಚಂದ್ರನ ದಕ್ಷಿಣ ಧ್ರುವ ವಿಜ್ಞಾನಿಗಳಿಗೆ ಬಹಳ ಸಮಯದಿಂದ ಕುತೂಹಲ ಕೆರಳಿಸಿದೆ. ಯಾಕಂದ್ರೆ, ಈ ಭಾಗದಲ್ಲಿ ಉಷ್ಣಾಂಶ ಮೈನಸ್ 230 ಡಿಗ್ರಿಗಿಂತಲೂ ಕಡಿಮೆ ಇದೆ. ಬೆಳಕನ್ನೇ ಕಾಣದ ಎಷ್ಟೊಂದು ಪ್ರದೇಶಗಳು ಇಲ್ಲಿವೆ. ಈ ಭಾಗದಲ್ಲಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪಳೆಯುಳಿಕೆ ಇರಬಹುದು ಎಂಬ ಅಂದಾಜಿದೆ. ಹಾಗೆ ನೋಡಿದ್ರೆ ಚಂದ್ರಯಾನ 1 ಯೋಜನೆಯು ಚಂದ್ರನ ಮೇಲೆ ನೀರಿದೆ ಎಂದು ಮೊದಲ ಬಾರಿಗೆ ಕಂಡು ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲೇ ಮತ್ತೆ ಅಧ್ಯಯನ ನಡೆಸೋದಕ್ಕೆ ಇಸ್ರೋ ಮುಂದಾಗಿದೆ.
ವಿಕ್ರಂ ಲ್ಯಾಂಡರ್‌ನ ಕೆಲಸ ಏನು?
ಚಂದ್ರನ ಮೇಲೆ ಗಗನ ನೌಕೆ ಸುರಕ್ಷಿತವಾಗಿ ಇಳಿಯೋದೇ ದೊಡ್ಡ ಸಾಹಸ. ಅದರಲ್ಲೂ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸೋದು ಸವಾಲು. ಚಂದ್ರನ ಮೇಲೆ ಇಳಿಯುವ ಲ್ಯಾಂಡರ್‌ನ ಹೆಸರು ವಿಕ್ರಂ. ಈತನ ಒಡಲಲ್ಲಿ ಪ್ರಗ್ಯಾನ್ ಎಂಬ ರೋವರ್ ಕೂಡಾ ಇರುತ್ತೆ. ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಸುರಕ್ಷಿತವಾಗಿ ಲ್ಯಾಂಡ್ ಆಗಬೇಕು. ಕಳೆದ ಬಾರಿ ಸರಿಯಾಗಿ ಲ್ಯಾಂಡ್ ಆಗದ ಪರಿಣಾಮ, ಇಡೀ ಯೋಜನೆಯೇ ವಿಫಲವಾಗಿತ್ತು. ಈ ಬಾರಿ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸುರಕ್ಷಿತವಾಗಿ ಲ್ಯಾಂಡ್ ಆದ ಬಳಿಕ ಆತನ ಒಳಗಿರುವ ಪ್ರಗ್ಯಾನ್ ರೋವರ್ ಹೊರಗೆ ಬರಲಿದೆ. ಬಳಿಕ ವಿಕ್ರಂ ಲ್ಯಾಂಡರ್ ತನ್ನ ಇನ್ನಿತರ ಕೆಲಸ ಕಾರ್ಯಗಳನ್ನ ಆರಂಭ ಮಾಡಲಿದೆ. ವಿಕ್ರಂ ಲ್ಯಾಂಡರ್ ಒಳಗೆ ಚಂದ್ರನ ಮೇಲೆ ಇರುವ ಉಷ್ಣಾಂಶವನ್ನು ಅಳೆಯುವ ಮಾಪನ ಯಂತ್ರ ಇರುತ್ತದೆ. ಜೊತೆಯಲ್ಲೇ ಚಂದ್ರನ ನೆಲದ ಮೇಲೆ ಭೂಕಂಪವಾದರೆ ಅದನ್ನು ಕಂಡು ಹಿಡಿಯುವ ಯಂತ್ರ ಇರುತ್ತದೆ. ಚಂದ್ರನ ಮೇಲಿರುವ ಪ್ಲಾಸ್ಮಾ ಪ್ರಮಾಣವನ್ನು ಅಳತೆ ಮಾಡಲಿದೆ. ಬಳಿಕ ಈ ಎಲ್ಲಾ ಮಾಹಿತಿಗಳನ್ನೂ ಭೂಮಿಗೆ ರವಾನೆ ಮಾಡಲಿದೆ.
ಪ್ರಗ್ಯಾನ್ ರೋವರ್‌ನ ಕೆಲಸ ಏನು?
ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಇಳಿದ ಮೇಲೆ ಪ್ರಗ್ಯಾನ್ ರೋವರ್ ಹೊರಗೆ ಬರಲಿದೆ. ಇದರ ಜೀವಿತಾವಧಿ 14 ದಿನ ಮಾತ್ರ. ಈ ರೋವರ್ ಒಳಗೆ ಲೇಸರ್ ಸ್ಪೆಕ್ಟ್ರೋ ಮೀಟರ್ ಇರುತ್ತೆ. ಈ ಉಪಕರಣವು ಚಂದ್ರನ ಮೇಲೆ ಇರುವ ಖನಿಜಗಳು ಮತ್ತು ರಾಸಾಯನಿಕ ವಸ್ತುಗಳ ಸಂಯೋಜನೆಗಳನ್ನು ಅಧ್ಯಯನ ಮಾಡಲಿದೆ. ಈ ಮೂಲಕ ಚಂದ್ರನ ಮೇಲ್ಮೈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅನುಕೂಲ ಆಗಲಿದೆ. ಇನ್ನು ಈ ರೋವರ್‌ನಲ್ಲಿ ಎಕ್ಸ್ ರೇ ಸ್ಪೆಕ್ಟ್ರೋ ಮೀಟರ್ ಕೂಡಾ ಇದೆ. ಈ ಉಪಕರಣವು ಚಂದ್ರನಲ್ಲಿ ಇರುವ ಕಲ್ಲು ಮತ್ತು ಮಣ್ಣಿನಲ್ಲಿ ಇರುವ ಮೆಗ್ನೀಶಿಯಂ, ಅಲ್ಯುಮಿನಿಯಂ, ಸಿಲಿಕಾನ್, ಕಬ್ಭಿಣ ಸೇರಿದಂತೆ ಹಲವು ಖನಿಜಗಳ ಕುರಿತಾಗಿ, ಲೋಹಗಳ ಕುರಿತಾಗಿ ಮಾಹಿತಿ ಸಂಗ್ರಹ ಮಾಡಲಿದೆ.
ಚಂದ್ರಯಾನ ಯೋಜನೆಯಿಂದ ದೇಶಕ್ಕೇನು ಲಾಭ?
ಬಾಲಿವುಡ್‌ನ ಹಲವು ಬಿಗ್ ಬಜೆಟ್ ಸಿನೆಮಾಗಳಿಗಿಂತಾ ಚಂದ್ರಯಾನ 3 ಯೋಜನೆಯ ವೆಚ್ಚ ಕಡಿಮೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಇದು ನಿಜ ಕೂಡಾ. 630 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಸಿದ್ದವಾಗಿದೆ. ಚಂದ್ರಯಾನ 3 ಯೋಜನೆ ಯಶಸ್ವಿಯಾದರೆ ಚಂದ್ರನ ಮೇಲೆ ನೌಕೆ ಇಳಿಸಿದ 4ನೇ ದೇಶ ಅನ್ನೋ ಹೆಗ್ಗಳಿಕೆ ಭಾರತಕ್ಕೆ ಸಿಗಲಿದೆ. ಇವರೆಗೆ ಅಮೆರಿಕ, ರಷ್ಯಾ ಹಾಗೂ ಚೀನಾ ದೇಶಗಳು ಮಾತ್ರ ಚಂದ್ರನ ಮೇಲೆ ನೌಕೆ ಇಳಿಸಿವೆ. ಇನ್ನು ಈ ಯೋಜನೆ ಯಶಸ್ವಿಯಾದರೆ, ಭಾರತದ ಆಂತರಿಕ್ಷ ವಿಜ್ಞಾನ ವಲಯಕ್ಕೆ ಬೂಸ್ಟ್ ಸಿಗುತ್ತದೆ. ಉಪಗ್ರಹ ಉಡಾವಣೆ ಸೇರಿದಂತೆ ಹಲವು ವಿಚಾರಗಳಿಗೆ ವಿಶ್ವದ ಹಲವು ರಾಷ್ಟ್ರಗಳು ಭಾರತವನ್ನೇ ಅವಲಂಬಿಸಲಿವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಹೂಡಿಕೆ ಇನ್ನಷ್ಟು ಹೆಚ್ಚಾಗಲಿದೆ. ಎಲ್ಲಕ್ಕಿಂತಾ ಮುಖ್ಯವಾಗಿ ಇಸ್ರೋ ಮೇಲಿನ ನಂಬಿಕೆ ಇನ್ನಷ್ಟು ಹೆಚ್ಚಾಗಲಿದೆ.
4 ವರ್ಷಗಳ ಹಿಂದೆಯೂ ಇದೇ ಸಂಭ್ರಮವಿತ್ತು!
4 ವರ್ಷಗಳ ಹಿಂದೆ 2019ರಲ್ಲಿ ಚಂದ್ರಯಾನ 2 ಯೋಜನೆ ಆರಂಭವಾದಾಗ ಕೂಡಾ ಇದೇ ಸಂಭ್ರಮ ಮನೆ ಮಾಡಿತ್ತು. ರಾಕೆಟ್ ಯಶಸ್ವಿಯಾಗಿ ಹಾರಿತ್ತು. ಆದ್ರೆ, ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಇಳಿಯುವಾಗ ಮಾತ್ರ ಎಡವಟ್ಟಾಗಿತ್ತು. ಈ ಬಾರಿ ಆ ರೀತಿಯ ತಪ್ಪುಗಳು ಮರುಕಳಿಸದಂತೆ ಇಸ್ರೋ ವಿಜ್ಞಾನಿಗಳು ವಿನ್ಯಾಸ ಮಾಡಿದ್ದಾರೆ. ಹಳೆಯ ತಪ್ಪುಗಳಿಂದ ಪಾಠ ಕಲಿತಿದ್ದಾರೆ.
ಚಂದ್ರಯಾನ-3: ಭಾರತದ ಇತ್ತೀಚಿನ ಚಂದ್ರಯಾನ
100 ಪದಗಳಲ್ಲಿ ಇಂಗ್ಲಿಷ್‌ನಲ್ಲಿ ಚಂದ್ರಯಾನ 3 ಪ್ರಬಂಧ |
ಚಂದ್ರಯಾನ-3 ಭಾರತದ ಚಂದ್ರನ ಕಾರ್ಯಾಚರಣೆಯಾಗಿದ್ದು, ಇದು ಆಗಸ್ಟ್ 23, 2023 ರಂದು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿಯಿತು. ಚಂದ್ರಯಾನ 3 ರ ಯಶಸ್ವಿ ಲ್ಯಾಂಡಿಂಗ್ ಅನ್ನು ಗುರುತಿಸಲು, ಪ್ರತಿ ವರ್ಷ ಆಗಸ್ಟ್ 23 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲಾಗುತ್ತದೆ. ಚಂದ್ರಯಾನ-1 ಮತ್ತು ಚಂದ್ರಯಾನ-2ರ ನಂತರ, ಚಂದ್ರಯಾನ 3 ಭಾರತದ ತಾಂತ್ರಿಕ ಸಾಮರ್ಥ್ಯವನ್ನು ಮುಂಚಿತವಾಗಿ ಚಂದ್ರನ ಅನ್ವೇಷಣೆಯಲ್ಲಿ ಪ್ರದರ್ಶಿಸಲು ಪ್ರಯತ್ನಿಸುತ್ತದೆ. ಸುಧಾರಿತ ಉಪಕರಣಗಳೊಂದಿಗೆ ಸಜ್ಜುಗೊಂಡ ಪ್ರಜ್ಞಾನ್ ರೋವರ್ ವೈಜ್ಞಾನಿಕ ಅಧ್ಯಯನಗಳನ್ನು ನಡೆಸಿತು, ಚಂದ್ರನ ಮಣ್ಣನ್ನು ವಿಶ್ಲೇಷಿಸಿತು ಮತ್ತು ಸಂಶೋಧನೆಗಾಗಿ ನಿರ್ಣಾಯಕ ಡೇಟಾವನ್ನು ಸಂಗ್ರಹಿಸಿತು. ರೋವರ್ ಅನ್ನು ಸೆಪ್ಟೆಂಬರ್ 2, 2023 ರಂದು ಸ್ಲೀಪ್ ಮೋಡ್‌ನಲ್ಲಿ ಇರಿಸಲಾಯಿತು. ಚಂದ್ರಯಾನ-3 ಬಾಹ್ಯಾಕಾಶ ಪರಿಶೋಧನೆಗೆ ಭಾರತದ ಬದ್ಧತೆಗೆ ಮತ್ತು ಚಂದ್ರನ ರಹಸ್ಯಗಳ ಬಗ್ಗೆ ಹೆಚ್ಚಿನ ತಿಳುವಳಿಕೆಗೆ ಸಾಕ್ಷಿಯಾಗಿದೆ. |
250 ಪದಗಳಲ್ಲಿ ಚಂದ್ರಯಾನ 3 ರ ಪ್ರಬಂಧ |
ಚಂದ್ರಯಾನ-3 ಭಾರತದ ಮಹತ್ವಾಕಾಂಕ್ಷೆಯ ಮತ್ತು ಯಶಸ್ವಿ ಚಂದ್ರಯಾನವಾಗಿದೆ. ಅದರ ಹಿಂದಿನ, ಚಂದ್ರಯಾನ-1 ಮತ್ತು ಚಂದ್ರಯಾನ-2ರ ಹೆಜ್ಜೆಗಳನ್ನು ಅನುಸರಿಸುತ್ತಿದೆ. ಚಂದ್ರಯಾನ-3 ದಕ್ಷಿಣ ಧ್ರುವ ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಇಳಿಯುವಿಕೆಯನ್ನು ಸಾಧಿಸುವ ಭಾರತದ ಯಶಸ್ವಿ ಪ್ರಯತ್ನವಾಗಿದೆ. ಇಲ್ಲಿಯವರೆಗೆ ಚಂದ್ರನ ಈ ಭಾಗವನ್ನು ತಲುಪಿದ ಏಕೈಕ ದೇಶ ಭಾರತ. ಈ ಮಹಾನ್ ತಾಂತ್ರಿಕ ಯಶಸ್ಸನ್ನು ಗುರುತಿಸಲು, ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಪ್ರತಿ ವರ್ಷ ಆಗಸ್ಟ್ 23 ರಂದು ಆಚರಿಸಲಾಗುತ್ತದೆ. ಚಂದ್ರಯಾನ 3 ಬಗ್ಗೆ ಚಂದ್ರಯಾನ 3 ಅನ್ನು ಭಾರತದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 14, 2023 ರಂದು ಮಧ್ಯಾಹ್ನ 2.35 ಕ್ಕೆ ಉಡಾವಣೆ ಮಾಡಲಾಯಿತು. ವಿಕ್ರಮ್ ರೋವರ್ ಆಗಸ್ಟ್ 24, 2023 ರಂದು ಸಂಜೆ 6.30 ಕ್ಕೆ ಚಂದ್ರನ ಮೇಲೆ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಮಾಡಿತು. ವಿವಿಧ ಸ್ಥಳದ ಪ್ರಯೋಗಗಳನ್ನು ಮಾಡಿದ ನಂತರ, ರೋವರ್ ಅನ್ನು ಸೆಪ್ಟೆಂಬರ್ 2, 2023 ರಂದು ನಿದ್ರಿಸಲಾಯಿತು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ವಿಕ್ರಮ್ ಲ್ಯಾಂಡರ್‌ನೊಂದಿಗೆ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿ ಲ್ಯಾಂಡಿಂಗ್ ಸಾಧಿಸಲು ಈ ಯೋಜನೆಯನ್ನು ಪ್ರಾರಂಭಿಸಿತು, ಇದು ಪ್ರಯೋಗಗಳನ್ನು ನಡೆಸಲು ಮತ್ತು ಅಮೂಲ್ಯವಾದ ಡೇಟಾವನ್ನು ಸಂಗ್ರಹಿಸಲು ಪ್ರಗ್ಯಾನ್ ರೋವರ್ ಅನ್ನು ನಿಯೋಜಿಸಿತು. ಚಂದ್ರನ ಭೂವಿಜ್ಞಾನ, ಖನಿಜಶಾಸ್ತ್ರ ಮತ್ತು ಎಕ್ಸೋಸ್ಪಿಯರ್ ಅನ್ನು ಅಧ್ಯಯನ ಮಾಡುವುದರ ಮೇಲೆ ಮಿಷನ್ ಕೇಂದ್ರೀಕೃತವಾಗಿದೆ, ಇದು ಚಂದ್ರನ ಮೂಲ ಮತ್ತು ವಿಕಾಸದ ಬಗ್ಗೆ ನಮ್ಮ ತಿಳುವಳಿಕೆಗೆ ಕೊಡುಗೆ ನೀಡುತ್ತದೆ. ಚಂದ್ರಯಾನ-3 ರ ಮಿಷನ್ ಉದ್ದೇಶಗಳು ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್ ಅನ್ನು ಪ್ರದರ್ಶಿಸುವುದು, ಚಂದ್ರನ ಮೇಲೆ ರೋವರ್ ರೋವಿಂಗ್ ಅನ್ನು ಪ್ರದರ್ಶಿಸುವುದು ಮತ್ತು ಸ್ಥಳದಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು. ಮಿಷನ್ ಉದ್ದೇಶಗಳನ್ನು ಸಾಧಿಸಲು, ಲ್ಯಾಂಡರ್‌ನಲ್ಲಿ ಲೇಸರ್ ಮತ್ತು RF-ಆಧಾರಿತ ಆಲ್ಟಿಮೀಟರ್‌ಗಳು, ವೆಲೋಸಿಮೀಟರ್‌ಗಳು, ಪ್ರೊಪಲ್ಷನ್ ಸಿಸ್ಟಮ್, ಇತ್ಯಾದಿಗಳಂತಹ ಹಲವಾರು ಸುಧಾರಿತ ತಂತ್ರಜ್ಞಾನಗಳಿವೆ. ಅಂತಹ ಸುಧಾರಿತ ತಂತ್ರಜ್ಞಾನಗಳನ್ನು ಭೂಮಿಯ ಪರಿಸ್ಥಿತಿಗಳಲ್ಲಿ ಯಶಸ್ವಿಯಾಗಿ ಪ್ರದರ್ಶಿಸಲು, ಇಂಟಿಗ್ರೇಟೆಡ್ ಕೋಲ್ಡ್ ಟೆಸ್ಟ್, ಇಂಟಿಗ್ರೇಟೆಡ್ ನಂತಹ ಹಲವಾರು ಲ್ಯಾಂಡರ್ ವಿಶೇಷ ಪರೀಕ್ಷೆಗಳು ಹಾಟ್ ಟೆಸ್ಟ್ ಮತ್ತು ಲ್ಯಾಂಡರ್ ಲೆಗ್ ಯಾಂತ್ರಿಕ ಕಾರ್ಯಕ್ಷಮತೆ ಪರೀಕ್ಷೆಯನ್ನು ಯೋಜಿಸಲಾಗಿದೆ ಮತ್ತು ಯಶಸ್ವಿಯಾಗಿ ನಡೆಸಲಾಗಿದೆ. ಚಂದ್ರಯಾನದ ಮಹತ್ವ 3ಚಂದ್ರಯಾನ-3 ಮೂಲಕ, ಭಾರತವು ತನ್ನ ತಾಂತ್ರಿಕ ಸಾಮರ್ಥ್ಯ, ವೈಜ್ಞಾನಿಕ ಸಾಮರ್ಥ್ಯಗಳು ಮತ್ತು ಬಾಹ್ಯಾಕಾಶ ಪರಿಶೋಧನೆಗೆ ತನ್ನ ಬದ್ಧತೆಯನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ. ಚಂದ್ರಯಾನ-3 ಯಶಸ್ವಿಯಾದರೆ, ಜಾಗತಿಕ ಬಾಹ್ಯಾಕಾಶ ಸಮುದಾಯದಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಮಿಷನ್ ಯುವ ಪೀಳಿಗೆಗೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಪ್ರೇರೇಪಿಸುತ್ತದೆ. |