Farmers: ರೈತರೊಂದಿಗೆ ವಿವಾಹವಾದ ಯುವತಿಯರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ‘ಕನ್ಯಾ ಭಾಗ್ಯ’ ಉಪಕ್ರಮವನ್ನು ಪ್ರಾರಂಭಿಸಿದೆ. ಈ ಅದ್ಭುತ ಕಾರ್ಯಕ್ರಮವು ರಾಜ್ಯದಾದ್ಯಂತ ಕೃಷಿ ಕುಟುಂಬಗಳಿಗೆ ಅವರ ಅಮೂಲ್ಯ ಕೊಡುಗೆಗಳನ್ನು ಗುರುತಿಸಿ, ರೈತರ ಸಂಗಾತಿಗಳಿಗೆ ಆರ್ಥಿಕ ನೆರವು ಮತ್ತು ಬೆಂಬಲವನ್ನು ನೀಡಲು ಪ್ರಯತ್ನಿಸುತ್ತದೆ.
‘ಕನ್ಯಾ ಭಾಗ್ಯ’ ಉಪಕ್ರಮದ ಅಡಿಯಲ್ಲಿ, ರೈತರೊಂದಿಗೆ ವಿವಾಹವಾದ ಅರ್ಹ ಯುವತಿಯರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಪ್ರಯತ್ನಗಳನ್ನು ಬೆಂಬಲಿಸಲು ಗಣನೀಯ ಆರ್ಥಿಕ ಸಹಾಯವನ್ನು ಪಡೆಯುತ್ತಾರೆ. ಈ ಉಪಕ್ರಮವು ಅನೇಕ ಗ್ರಾಮೀಣ ಕುಟುಂಬಗಳಿಗೆ ಭರವಸೆಯ ದಾರಿದೀಪವಾಗಿದೆ, ಆರ್ಥಿಕ ಹೊರೆಗಳನ್ನು ನಿವಾರಿಸಲು ಮತ್ತು ಕೃಷಿ ಸಮುದಾಯಗಳಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸಲು ಒಂದು ಮಾರ್ಗವನ್ನು ನೀಡುತ್ತದೆ.
ಸಾಮನ್ಯವಾಗಿ ರೈತರಿಗೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇರುತ್ತದೆ. ರೈತರು ಹೆಚ್ಚಾಗಿ ಕೃಷಿ ಮಾಡುವಲ್ಲಿ ಹೆಚ್ಚಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆದರೆ ಇದೀಗ ರೈತರಿಗೆ ಕೃಷಿಯಲ್ಲಿನ ಸಮಸ್ಯೆಯ ಜೊತೆಗೆ ಹೊಸ ರೀತಿಯ ಸಮಸ್ಯೆ ಹುಟ್ಟಿಕೊಂಡಿದೆ.
ಅದೇನೆಂದರೆ ರೈತರ ಮದುವೆಯ ವಿಚಾರವಾಗಿದೆ. ಹೌದು, ರೈತ ಯುವಕರ ಹೆಣ್ಣು ಹುಡುಕುವುದು ತುಂಬಾ ಕಷ್ಟವಾಗುತ್ತಿದೆ ಎಂದು ಸಾಕಷ್ಟು ರೈತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಕುರಿತು ಸರ್ಕಾರಕ್ಕೆ ವಿಶೇಷ ಮನವಿ ಸಲ್ಲಿಸಿದ್ದಾರೆ.
ರೈತ ಯುವಕರನ್ನು ಮದುವೆಯಾದ ಯುವತಿಗೆ ಸಿಗಲಿದೆ 5 ಲಕ್ಷ
ಸಾಮಾನ್ಯವಾಗಿ ಮದುವೆ ಎನ್ನುವುದು ದೊಡ್ಡ ಜವಾಬ್ದಾರಿಯಾಗಿರುತ್ತದೆ. ಎಲ್ಲರು ಕೂಡ ಮದುವೆಯಾಗಲೇ ಬೇಕಾಗುತ್ತದೆ. ಒಂಟಿ ಜೀವನದಿಂದ ಜಂಟಿಯಾಗಲು ಸಂಗಾತಿಯ ಅವಶ್ಯಕತೆ ಇರುತ್ತದೆ. ಸದ್ಯ ಮದುವೆಗೆ ವಧು ಹುಡುಕುವುದೇ ದೊಡ್ಡ ಸಮಸ್ಯೆಯಾಗಿದೆ. ಅದರಲ್ಲೂ ರೈತರಿಗೆ ಮದುವೆ ಮಾಡುವುದು ಕಷ್ಟವಾಗುತ್ತಿದೆ. ಯಾವುದೇ ಹುಡುಗಿಯು ರೈತರು ಮದುವೆಯಾಗಲು ಮುಂದೆ ಬರುತ್ತಿಲ್ಲ.
ಹೀಗಾಗಿ ರೈತರು ಈ ಸಮಸ್ಯೆಗೆ ಪರಿಹಾರ ನೀಡಲು ಸರ್ಕಾರದ ಮೊರೆ ಹೋಗಿದ್ದಾರೆ. ರೈತನನ್ನು ಮದುವೆಯಾಗುವ ಯುವತಿಗೆ ಸರ್ಕಾರದಿಂದ 5 ಲಕ್ಷ ರೂ. ಪ್ರೋತ್ಸಾಹಧನ ನೀಡುವಂತೆ ರೈತ ಸಂಘಟನೆಗಳ ಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ರೈತರ ಮನವಿಗೆ ಸರ್ಕಾರದ ನಿರ್ಧಾರವೇನು…?
ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ. 45 ವರ್ಷವಾದರೂ ರೈತರ ಮಕ್ಕಳಿಗೆ ಮದುವೆ ಆಗುತ್ತಿಲ್ಲ. ಕೃಷಿಗೆ ಆದ್ಯತೆ ಇಲ್ಲದಂತಾಗಿದೆ. ರೈತನನ್ನು ಮದುವೆಯಾಗುವ ಹುಡುಗಿಗೆ 5 ಲಕ್ಷ ರೂ. ಪ್ರೋತ್ಸಾಹಧನ ನೀಡಬೇಕು ಎಂದು ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 200ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ ರೈತ ಸಂಘಟನೆಗಳ ಮುಖಂಡರೊಂದಿಗೆ ಬಜೆಟ್ ಸಿದ್ಧತೆ ಕುರಿತು ಸಭೆ ನಡೆಸಿದ್ದಾರೆ. ಈ ವೇಳೆ ಈ ವಿಷಯದ ಬಗ್ಗೆ ಚರ್ಚೆ ನಡೆಸಿದ್ದಾರೆ. ಇನ್ನು ರಾಜ್ಯ ಸರ್ಕಾರ ರೈತರ ಈ ಮನವಿಗೆ ಅಷ್ಟು ಅನುತ್ತ ಎನ್ನುವುದನ್ನು ಕಾದು ನೋಡಬೇಕಿದೆ.
Sir bad time namige hudgine sigutilla raitaragi huttidde tappagide nam jeevana
Hi