rtgh

ಪ್ರಾಣಕ್ಕೆ ಕುತ್ತು ತರುತ್ತದೆ ಈ ಫ್ಯಾಟಿ ಲಿವರ್ ಡಿಸಾರ್ಡರ್, ಪಾರಾಗುವ ದಾರಿ ಇಲ್ಲಿದೆ! best food suggestions for fatty liver disease


ಸಾಕಷ್ಟು ಓಡಾಟದಿಂದ ಕೂಡಿದ ಇಂದಿನ ಜೀವನ ಶೈಲಿಯಲ್ಲಿ ಜನರ ಆಹಾರ ಮತ್ತು ಲೈಫ್ ಸ್ಟೈಲ್ ನಲ್ಲಿ ಸಾಕಷ್ಟು ಬದಲಾವಣೆ ಬಂದಿದೆ. ಸಮಯದ ಅಭಾವದ ಕಾರಣ ಬಹುತೇಕ ಜನರು ಆರೋಗ್ಯಕ್ಕೆ ಹಾನಿಕಾರಕವಾದ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದಾರೆ ಮತ್ತು ಅದು ಅವರ ಆರೋಗ್ಯಕ್ಕೆ ಹಾನಿಯನ್ನೂ ಕೂಡ ತಲುಪಿಸುತ್ತಿದೆ.

ಇದರಿಂದ ನಾನ್ ಅಲ್ಕೋಹಾಲಿಕ್ ಫ್ಯಾಟಿ ಲೀವರ್ ಡಿಸೀಜ್ ಕೂಡ ಶಾಮೀಲಾಗಿದೆ. ಹೀಗಿರುವಾಗ ಫ್ಯಾಟಿ ಲೀವರ್ ಸಮಸ್ಯೆ ಇರುವ ಜನರು ಯಾವ ರೀತಿ ತಮ್ಮ ಕಾಳಜಿಯನ್ನು ವಹಿಸಬೇಕು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.

fatty liver disorder and how to control information in kannada
fatty liver disorder and how to control information in kannada

ನಾನ್ ಅಲ್ಕೋಹಾಲಿಕ್ ಫ್ಯಾಟಿ ಲೀವರ್ ಎಂದರೇನು?
ಮದ್ಯಪಾನ ಮಾಡದೆ ಇರುವ ಜನರಲ್ಲಿ ಕಾಣಿಸಿಕೊಳ್ಳುವ ಫ್ಯಾಟಿ ಲೀವರ್ ಅನ್ನು ಫ್ಯಾಟಿ ಲೀವರ್ ಡಿಸೀಜ್ ಎಂದು ಕರೆಯಲಾಗುತ್ತದೆ. ಈ ಕಾಯಿಲೆಯಲ್ಲಿ ವ್ಯಕ್ತಿಗಳ ಆಹಾರದ ಕಾರಣ ಲೀವರ್ ನಲ್ಲಿ ಹೆಚ್ಚುವರಿ ಬೊಚ್ಚು ಅಥವಾ ಫ್ಯಾಟ್ ಸಂಗ್ರಹವಾಗುತ್ತದೆ. ಈ ಕಾರಣದಿಂದ ಲೀವರ್ ಹಾಳಾಗುತ್ತದೆ.

ನಾನ್ ಅಲ್ಕೊಹಾಲಿಕ್ ಫ್ಯಾಟಿ ಲೀವರ್ ಡಿಸೀಜ್ ಲಕ್ಷಣಗಳು
ಹೊಟ್ಟೆಯಲ್ಲಿ ಬಾವು ಕಾಣಿಸಿಕೊಳ್ಳುವುದು, ಎನ್ಲಾರ್ಜ್ ಸ್ಪೀನಲ್, ಅಂಗೈ ಕೆಂಪಾಗುವಿಕೆ, ಕಣ್ಣುಗಳು ಸೇರಿದಂತೆ ಚರ್ಮ ಹಳದಿಯಾಗುವಿಕೆ, ಇವೆಲ್ಲವೂ ಕೂಡ ನಾನ್ ಅಲ್ಕೊಹಾಲಿಕ್ ಸ್ಟಿಟೋಪಟೈಟಸ್ ನ ಲಕ್ಷಣಗಳಾಗಿವೆ.

ಕೊಲಾಯಿನ್ ಹಾಗೂ ಲೀವರ್ ಸಂಬಂಧ
ಶರೀರದಲ್ಲಿ ಕೊಲಾಯಿನ್ ತುಂಬಾ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಇದು ಲೀವರ್ ನಲ್ಲಿರುವ ಫ್ಯಾಟ್ ಅನ್ನು ಜೀರ್ಣಿಸುವ ಕೆಲಸ ಮಾಡುತ್ತದೆ. ಜೊತೆಗೆ ಇದು ಫ್ಯಾಟಿ ಲೀವರ್ ಸಮಸ್ಯೆಯನ್ನು ಸಾಕಷ್ಟು ಪ್ರಮಾಣದಲ್ಲಿ ಸಹಾಯ ಕೂಡ ಮಾಡುತ್ತದೆ. ಹೀಗಾಗಿ ಫ್ಯಾಟಿ ಲೀವರ್ ಸಮಸ್ಯೆಯಿಂದ ಪಾರಾಗಲು ನಿಮ್ಮ ದಿನನಿತ್ಯದ ಆಹಾರದಲ್ಲಿ ಕೊಲಾಯಿನ್ ನಿಂದ ಕೂಡಿದ ಆಹಾರ ಪದಾರ್ಥಗಳನ್ನು ಸೇರಿಸಿದರೆ ಉತ್ತಮ.

best food suggestions for fatty liver disease

ಈ ಆಹಾರಗಳಲ್ಲಿ ಕೊಲಾಯಿನ್ ಕಂಡು ಬರುತ್ತದೆ
ಮೊಟ್ಟೆ- ಮೊಟ್ಟೆಗಳು ಕೊಲಾಯಿನ್ ನ ಉತ್ತಮ ಮೂಲಗಳಾಗಿವೆ. ಹೀಗಿರುವಾಗ ನೀವೂ ಕೂಡ ನಿಮ್ಮ ಡಯಟ್ ನಲ್ಲಿ ಮೊಟ್ಟೆಗಳನ್ನು ತಪ್ಪದೆ ಶಾಮೀಲುಗೊಳಿಸಿ ಫ್ಯಾಟಿ ಲೀವರ್ ಸಮಸ್ಯೆಯಿಂದ ಪಾರಾಗಬಹುದು.
ಸೋಯಾಬೀನ್- ಅರ್ಧ ಬಟ್ಟಲು ಹುರಿದ ಸೋಯಾಬೀನ್ ನಲ್ಲಿ 107ಎಂಜಿ ಕೊಲಾಯಿನ್ ಇರುತ್ತದೆ. ಇದು ನಿಮ್ಮ ಲೀವರ್ ಅನ್ನು ಆರೋಗ್ಯವಂತವಾಗಿರಿಸುತ್ತದೆ. ಹೀಗಾಗಿ ನೀವೂ ಕೂಡ ನಿಮ್ಮ ಡಯಟ್ ನಲ್ಲಿ ಸೋಯಾಬೀನ್ ಅನ್ನು ಸೇರಿಸಿಕೊಳ್ಳಿ

ಕೊಲೈನ್ ಯುಕ್ತ ಆಹಾರ ಯಾವ್ದು?
•    ಮೊಟ್ಟೆಯಲ್ಲಿ (Egg) ಕೊಲೈನ್ ಅಂಶ ಅಧಿಕವಾಗಿದೆ. ಒಂದು ಮೊಟ್ಟೆಯಲ್ಲಿ 147 ಎಂಜಿ ಕೊಲೈನ್ ದೊರೆಯುತ್ತದೆ. ನೆನಪಿಡಿ, ರಾಸಾಯನಿಕಮುಕ್ತ ವಿಧಾನದಲ್ಲಿ ಬೆಳೆಸಿದ ಮೊಟ್ಟೆಯನ್ನು ಮಾತ್ರ ಸೇವಿಸಬೇಕು. 

•    ಸೋಯಾಬೀನ್ (Soya Bean) ನಲ್ಲೂ ಕೊಲೈನ್ ಮಟ್ಟ ಉತ್ತಮವಾಗಿರುತ್ತದೆ.  ಅರ್ಧ ಕತ್ತರಿಸಿದ ರೋಸ್ಟೆಡ್ ಸೋಯಾದಲ್ಲಿ 107 ಎಂಜಿ ಕೊಲೈನ್ ಸಿಗುತ್ತದೆ. 
•    ರೋಸ್ಟೆಡ್ ಚಿಕನ್ ನಲ್ಲೂ ಕೊಲೈನ್ ಇದೆ. ಸುಮಾರು 85 ಗ್ರಾಮ್ ರೋಸ್ಟೆಡ್ ಚಿಕನ್ ನಲ್ಲಿ 72 ಎಂಜಿ ಕೊಲೈನ್ ಇರುತ್ತದೆ.
•    ಕೆಂಪು ಆಲೂಗಡ್ಡೆಯಲ್ಲಿ (Red Potato) 57 ಎಂಜಿ ಕೊಲೈನ್ ಇರುತ್ತದೆ. 
•    ಅರ್ಧ ಕಪ್ ರಾಜ್ಮಾದಲ್ಲಿ ಅಥವಾ ಕಿಡ್ನಿ ಬೀನ್ಸ್ (Kidney Beans) ನಲ್ಲಿ 45 ಎಂಜಿ ಕೊಲೈನ್ ಅಂಶ ಇರುವುದು ಸಾಬೀತಾಗಿದೆ. ಹೀಗಾಗಿಯೇ, ರಾಜ್ಮಾ ಅತ್ಯುತ್ತಮ ಆಹಾರ ಪದಾರ್ಥ ಎನಿಸಿದೆ.
•    ಹೆಚ್ಚು ಕೊಬ್ಬಿನಂಶವಿಲ್ಲದ ಒಂದು ಕಪ್ ಹಾಲಿನಲ್ಲಿ (Milk) 42 ಎಂಜಿ ಕೊಲೈನ್ ಅಂಶವಿರುತ್ತದೆ. 
•    ಅರ್ಧ ಕಪ್ ಬ್ರೊಕೊಲಿಯಲ್ಲಿ 31 ಎಂಜಿ, ಒಂದು ಕಪ್ ಪನ್ನೀರಿ(Paneer)ನಲ್ಲಿ 26 ಎಂಜಿ, 85 ಗ್ರಾಮ್ ಟೂನಾ ಮೀನಿನಲ್ಲಿ 25 ಎಂಜಿಯಷ್ಟು ಕೊಲೈನ್ ಅಂಶ ಕಂಡುಬರುತ್ತದೆ. ಫ್ಯಾಟಿ ಲಿವರ್ ಸಮಸ್ಯೆಯಿಂದ ದೂರವಿರಲು ಈ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಉತ್ತಮ.  


Leave a Reply

Your email address will not be published. Required fields are marked *