rtgh

ಐತಿಹಾಸಿಕ ಶೃಂಗಸಭೆ: ಭಾರತದಲ್ಲಿ ಮೊದಲ ಬಾರಿಗೆ ಇಂದಿನಿಂದ ಜಿ20 ಶೃಂಗಸಭೆ: ಐತಿಹಾಸಿಕ ಶೃಂಗಸಭೆಯ ನಿರೀಕ್ಷೆಗಳು ಹೀಗಿದೆ.


ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ವಿಶ್ವದ ಶಕ್ತಿಶಾಲಿ ಮತ್ತು ಪ್ರಭಾವಿ ನಾಯಕರು ಈಗಾಗಲೇ ನವದೆಹಲಿಗೆ ಆಗಮಿಸುತ್ತಿದ್ದಾರೆ. ಮತ್ತೊಂದಷ್ಟು ನಾಯಕರು ನಿನ್ನೆಯೇ ಭಾರತದ ನೆಲಕ್ಕೆ ಕಾಲಿಟ್ಟಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬಿಡನ್ ನಿನ್ನೆ ಸಂಜೆ ದೆಹಲಿಗೆ ಆಗಮಿಸಿದ್ದಾರೆ. ಈ ಮೆಗಾ ಶೃಂಗಸಭೆಯಲ್ಲಿ 30 ಕ್ಕೂ ಹೆಚ್ಚು ದೇಶಗಳ ಉನ್ನತ ನಾಯಕರು, ಯುರೋಪಿಯನ್ ಒಕ್ಕೂಟದ ಉನ್ನತ ಅಧಿಕಾರಿಗಳು, ಆಹ್ವಾನಿತ ಅತಿಥಿ ದೇಶಗಳು ಮತ್ತು 14 ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ.

g20 shrunga sabha 2023 update and news in kannada
g20 shrunga sabha 2023 update and news in kannada

ಇದರ 20 ಸದಸ್ಯ ರಾಷ್ಟ್ರಗಳಾದ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ಮೆಕ್ಸಿಕೋ, ರಿಪಬ್ಲಿಕ್ ಆಫ್ ಕೊರಿಯಾ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುಕೆ, ಯುಎಸ್ಎ ಮತ್ತು ಇಯು ದೇಶದ ಪ್ರತಿನಿಧಿಗಳು ಕೂಡ ಭಾಗವಹಿಸುತ್ತಿದ್ದಾರೆ.

ಇದಲ್ಲದೆ, ಬಾಂಗ್ಲಾದೇಶ, ಈಜಿಪ್ಟ್, ಮಾರಿಷಸ್, ನೆದರ್ಲ್ಯಾಂಡ್ಸ್, ನೈಜೀರಿಯಾ, ಓಮನ್, ಸಿಂಗಾಪುರ್, ಸ್ಪೇನ್ ಮತ್ತು ಯುಎಇಯ ಪ್ರತಿನಿಧಿಗಳನ್ನು ಈ ಶೃಂಗಸಭೆಗೆ ಆಹ್ವಾನಿಸಲಾಗಿದೆ. ವಿಶ್ವಸಂಸ್ಥೆ, IMF, ವಿಶ್ವ ಬ್ಯಾಂಕ್, WHO, WTO, ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ, ಹಣಕಾಸು ಸ್ಥಿರತೆ ಮಂಡಳಿ ಮತ್ತು OECD ನಂತಹ ವಿಶ್ವ ಸಂಸ್ಥೆಗಳು ಸಹ G20 ಶೃಂಗಸಭೆಯಲ್ಲಿ ಭಾಗವಹಿಸುತ್ತಿವೆ.

ಇವುಗಳಲ್ಲದೆ, ಆಫ್ರಿಕನ್ ಯೂನಿಯನ್, AUDA-NEPAD, ASEAN, ISA, CDRI ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಕೂಡ G20 ಶೃಂಗಸಭೆಯಲ್ಲಿ ಭಾಗವಹಿಸಲಿವೆ. ದೆಹಲಿಯ ಪ್ರಗತಿ ಮೈದಾನದಲ್ಲಿರುವ ಅಂತಾರಾಷ್ಟ್ರೀಯ ಕನ್ವೆನ್ಷನ್ ಸೆಂಟರ್ ‘ಭಾರತ್ ಮಂಡಪಂ’ ಜಿ20 ಶೃಂಗಸಭೆಯ ಕೇಂದ್ರ ಸ್ಥಾನವಾಗಿ ಮಾರ್ಪಟ್ಟಿದೆ.

ಜಿ20 ಔತಣಕೂಟ

ಜಿ20 ಔತಣಕೂಟಕ್ಕೆ ಹೋಗದಿರಲು ಸಿದ್ದರಾಮಯ್ಯ ನಿರ್ಧಾರ G20 ಔತಣಕೂಟದಲ್ಲಿ ಭಾಗವಹಿಸುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಅಧಿಕೃತವಾಗಿ ತಿಳಿಸಿದ್ದಾರೆ ಎಂದು ಸಿಎಂ ಆಪ್ತ ಮೂಲಗಳಿಂದ ತಿಳಿದುಬಂದಿದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಅತಿಥಿಗಳ ಪಟ್ಟಿಯಲ್ಲಿ ಇಲ್ಲ ಎಂಬ ಕಾರಣಕ್ಕೆ ಅಸಮಾಧಾನದಿಂದ ಔತಣಕೂಟಕ್ಕೆ ಹೋಗದಿರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಡಿಜಿಲಾಕರ್ ಬಳಸಿದ ಮೊದಲ ದೇಶ ಭಾರತ

ಭಾರತ್ ಮಂಟಪದ ಡಿಜಿಲಾಕರ್ ಪ್ರತಿನಿಧಿ ಪ್ರಕಾಶ್ ಪಾಂಡೆ ಡಿಜಿಲಾಕರ್ ನ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನದ ಬಗ್ಗೆ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಜನರು ತಮ್ಮ ದಾಖಲೆಗಳನ್ನು ಡಿಜಿ ಲಾಕರ್‌ನಲ್ಲಿ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬಹುದು ಎಂದು ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದರು. ಇದರಲ್ಲಿ ನೀವು ಜನನ ಪ್ರಮಾಣಪತ್ರ, ಗುರುತಿನ ಚೀಟಿ, ಆಸ್ತಿ, ಭೂ ದಾಖಲೆಗಳು, ವಿಮೆ ಪತ್ರ ಇತ್ಯಾದಿಗಳನ್ನು ಸಂಗ್ರಹಿಸಬಹುದು. ಇದರಲ್ಲಿ ನೀಡಿರುವ ಎಲ್ಲಾ ದಾಖಲೆಗಳು ಮಾನ್ಯವಾಗಿರುತ್ತವೆ. ಈ ವೇದಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಈ ರೀತಿಯ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸುವಲ್ಲಿ ಮುಂಚೂಣಿಯಲ್ಲಿರುವ ದೇಶಗಳಲ್ಲಿ ಭಾರತವು ಒಂದಾಗಿದೆ.

ವಿದೇಶಿ ಪ್ರತಿನಿಧಿಗಳು UPI ಪಾವತಿಯ ತಂತ್ರಜ್ಞಾನವನ್ನು ತಿಳಿಯಲಿದ್ದಾರೆ

ಭಾರತೀಯ ರಿಸರ್ವ್ ಬ್ಯಾಂಕ್‌ನ ಪಾವತಿ ಮತ್ತು ಸೆಟ್ಲ್‌ಮೆಂಟ್ ಸಿಸ್ಟಮ್ ವಿಭಾಗದ ಜನರಲ್ ಮ್ಯಾನೇಜರ್ ಕಶ್ಯಪ್ ಬಾಲಕೃಷ್ಣನ್ ಜಿ20 ಶೃಂಗಸಭೆಯಲ್ಲಿ ತಮ್ಮ ಸ್ಟಾಲ್ ಮೂಲಕ ಆನ್‌ಲೈನ್ ಪಾವತಿಗಳಲ್ಲಿ ಭಾರತೀಯ ತಂತ್ರಜ್ಞಾನದ ಕೊಡುಗೆಯ ಬಗ್ಗೆ ಮಾಹಿತಿ ನೀಡಿದರು. ಭಾರತ ಮಂಟಪದಲ್ಲಿರುವ ನಮ್ಮ ಸ್ಟಾಲ್ ಮೂಲಕ ನಾವು ವಿದೇಶಿ ಪ್ರತಿನಿಧಿಗಳಿಗೆ ಭಾರತದಲ್ಲಿ ಡಿಜಿಟಲ್ ಪಾವತಿಗಳ ಅಭಿವೃದ್ಧಿಯನ್ನು ತೋರಿಸುತ್ತಿದ್ದೇವೆ ಮತ್ತು ವಿದೇಶಿ ಅತಿಥಿಗಳಿಗೆ ಯುಪಿಐ ಅನ್ನು ಅನುಭವಿಸುವ ಅವಕಾಶ ನೀಡುತ್ತಿದ್ದೇವೆ ಎಂದು ಅವರು ಹೇಳಿದರು. ಸಂಪರ್ಕರಹಿತ ಪಾವತಿಯ ಇತರ ವಿಧಾನಗಳನ್ನು ಬಳಸಲು ನಿಮಗೆ ಅವಕಾಶ ನೀಡುತ್ತಿದ್ದೇವೆ. ಭಾರತ್ ಬಿಲ್ ಪೇಮೆಂಟ್‌ ವ್ಯವಸ್ಥೆ ಬಳಸಿ ಎನ್‌ಆರ್‌ಐಗಳು ವಿದೇಶಗಳಿಂದ ಹೇಗೆ ಪಾವತಿ ಮಾಡಬಹುದು ಎಂಬುದನ್ನು ಕೂಡ ನಾವು ಪ್ರದರ್ಶಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ವಿದೇಶಿಗರಿಗೆ ಕರಕುಶಲ ಮತ್ತು ಕೈಮಗ್ಗಗಳ ಪರಿಚಯ ಮಾಡಿಸಲಿದೆ ಜಿ20 ಸಭೆ

ಈಶಾನ್ಯ ಕರಕುಶಲ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬ್ರಿಗೇಡಿಯರ್ (ನಿವೃತ್ತ) ಆರ್.ಕೆ.ಸಿಂಗ್ ಮಾತನಾಡಿ, ಭಾರತ ಮಂಟಪದ ಮೂಲಕ ಇಲ್ಲಿಗೆ ಬರುವ ಪ್ರತಿಯೊಬ್ಬ ವಿದೇಶಿ ಪ್ರತಿನಿಧಿಗಳಿಗೆ ಈಶಾನ್ಯ ಕಲೆಯನ್ನು ತೋರಿಸಲು ನಾವು ಬಯಸುತ್ತೇವೆ ಎಂದು ಹೇಳಿದರು.

ಜಿ20 ಅಧ್ಯಕ್ಷ ಸ್ಥಾನವು ಭಾರತಕ್ಕೆ ಹಲವು ರೀತಿಯಲ್ಲಿ ಸಹಾಯಕವಾಗಿದೆ ; ಪ್ರೊಫೆಸರ್ ರಿಷಿಕೇಶ ಟಿ ಕೃಷ್ಣನ್

ಇದು ಇಡೀ ದೇಶವೇ ಒಟ್ಟಾಗಿ ಜಾಗತಿಕ ನಾಯಕತ್ವದ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಉತ್ತಮ ಅವಕಾಶವಾಗಿದೆ. ನಾವು ನಮ್ಮ ಜನರನ್ನು ಜಾಗತಿಕ ಮಟ್ಟಕ್ಕೆ ಕರೆದೊಯ್ಯಲು ಪೂರಕವಾದ ಉತ್ತಮ ಡಿಜಿಟಲ್ ಮೂಲಸೌಕರ್ಯ ಹೊಂದಿರಬೇಕು ಎಂಬುದನ್ನು ತಿಳಿಸಿಕೊಟ್ಟಿದೆ. ಎಂದು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ನ ನಿರ್ದೇಶಕರಾದ ಪ್ರೊಫೆಸರ್ ರಿಷಿಕೇಶ ಟಿ ಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.

ಉದ್ಯಮ ಸಂಘಗಳು, ಥಿಂಕ್-ಟ್ಯಾಂಕ್‌ಗಳು ಮತ್ತು ಸಲಹಾ ಸಂಸ್ಥೆಗಳಂತಹ ವಿಶಾಲ ವ್ಯವಸ್ಥೆಯಲ್ಲಿ ಹಲವಾರು ಪ್ರವರ್ತಕರು ನಮ್ಮ ಭವಿಷ್ಯದ ಆರ್ಥಿಕ ವಿಕಾಸಕ್ಕೆ ಮತ್ತು ಬೆಳವಣಿಗೆಗೆ ರಾಷ್ಟ್ರೀಯ ನಾಯಕತ್ವದ ಮಹತ್ವಾಕಾಂಕ್ಷೆಯ ಗುರಿಗಳನ್ನು ಬೆಂಬಲಿಸಲು ತಮ್ಮ ಸಾಮರ್ಥ್ಯ ಹೆಚ್ಚಿಸಲು ಸಹಕಾರಿಯಾಗಿದೆ. G-20 ವೇದಿಕೆಯಲ್ಲಿ ಸಮಾಜದ ಬಹು-ಹಂತದ ಪಾಲ್ಗೊಳ್ಳುವಿಕೆಯು ಜಾಗತಿಕ ಸವಾಲುಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿದೆ ಮತ್ತು ಮಹತ್ವದ ಕೊಡುಗೆ ನೀಡಲು ಭಾರತಕ್ಕೆ ಅವಕಾಶ ನೀಡಿದೆ ಎಂದು ತಿಳಿಸಿದ್ದಾರೆ.


Leave a Reply

Your email address will not be published. Required fields are marked *