rtgh

ಗಂಗಾ ಕಲ್ಯಾಣ ಯೋಜನೆ: ಬೋರ್ ವೆಲ್ ಕೊರೆಸಲು ರೈತರಿಗೆ ಆರ್ಥಿಕ ನೆರವು.! ಹೇಗೆ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲೆಗಳೇನು.?


ನಮಸ್ಕಾರ ಸ್ನೇಹಿತರೇ! ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬೋರ್ ವೆಲ್ ಕುಡಿಯುವ ನೀರಿನ ಹಾಗೂ ಕೃಷಿ ಚಟುವಟಿಕೆಗಳ ಪ್ರಮುಖ ಮೂಲವಾಗಿದೆ. ಬಹುತೇಕ ಗ್ರಾಮೀಣ ರೈತರು ಬೋರ್ ವೆಲ್ ಮೂಲಕವೇ ತಮ್ಮ ಕೃಷಿ ಚಟುವಟಿಕೆ ನಡೆಸುತ್ತಾರೆ. ಈ ಹಿನ್ನೆಲೆ, ಸರ್ಕಾರವು ‘ಗಂಗಾ ಕಲ್ಯಾಣ ನೀರಾವರಿ ಯೋಜನೆ’ಯನ್ನು ಪರಿಚಯಿಸಿದ್ದು, ರೈತರಿಗೆ ಬೋರ್ ವೆಲ್ ಕೊರೆಸಲು ಆರ್ಥಿಕ ನೆರವು ನೀಡಲಾಗುತ್ತಿದೆ.

Ganga Kalyan Yojana has invited application for drilling bore well
Ganga Kalyan Yojana has invited application for drilling bore well

ಗಂಗಾ ಕಲ್ಯಾಣ ಯೋಜನೆ

‘ಗಂಗಾ ಕಲ್ಯಾಣ ನೀರಾವರಿ ಯೋಜನೆ’ದ ಮೂಲಕ ರೈತರಿಗೆ ಬೋರ್ ವೆಲ್ ಕೊರೆಸಲು ಸಾಲ ಸೌಲಭ್ಯವನ್ನು ಸರ್ಕಾರ ಒದಗಿಸುತ್ತಿದೆ. ಈ ಯೋಜನೆಯ ಮುಖ್ಯ ಉದ್ದೇಶ ರೈತರಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವುದು ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸುವುದು. ಹೀಗೆ, ರೈತರು ತೋಟಗಾರಿಕೆ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು.

ಯೋಜನೆಗೆ ಅರ್ಹರು ಯಾರು?

  • ಹಿಂದುಳಿದ ವರ್ಗಗಳ ಪ್ರ-1, 2ಎ, 3ಎ, 3ಬಿ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
  • ಅರ್ಜಿದಾರರು ಕನಿಷ್ಠ 2 ಎಕರೆಗಿಂತಲೂ ಕಡಿಮೆ ಹಾಗೂ ಗರಿಷ್ಠ 5 ಎಕರೆ ಹೊಲವನ್ನು ಹೊಂದಿರಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  • ಆಧಾರ್ ಕಾರ್ಡ್
  • ಪಡಿತರ ಚೀಟಿ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಸಣ್ಣ ಮತ್ತು ಅತಿ ಸಣ್ಣ ರೈತ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಪಹಣಿ ಹಾಗೂ ಫ್ರೂಟ್ಸ್ ಐಡಿ

ಅರ್ಜಿ ಸಲ್ಲಿಸಲು ನಿಗಮಗಳು:

ಅರ್ಜಿದಾರರು ಕೆಳಗಿನ ನಿಗಮಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು:

  • ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
  • ಉಪ್ಪಾರ ಅಭಿವೃದ್ಧಿ ನಿಗಮ
  • ಮರಾಠ ಅಭಿವೃದ್ಧಿ ನಿಗಮ
  • ವಿಶ್ವಕರ್ಮ ಅಭಿವೃದ್ಧಿ ನಿಗಮ
  • ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
  • ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ
  • ಸವಿತಾ ಸಮಾಜ ಅಭಿವೃದ್ಧಿ ನಿಗಮ
  • ಅಲೆಮಾರಿ, ಅರೆ-ಅಲೆಮಾರಿ ಅಭಿವೃದ್ಧಿ ನಿಗಮ
  • ಒಕ್ಕಲಿಗ ಅಭಿವೃದ್ಧಿ ನಿಗಮ

ಅರ್ಜಿ ಸಲ್ಲಿಸುವ ಸ್ಥಳ:

ಅರ್ಜಿ ಸಲ್ಲಿಸಲು ಆಸಕ್ತರು ತಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಇನ್ನೂ ಹೆಚ್ಚಿನ ಮಾಹಿತಿ ಹಾಗೂ ಆನ್‌ಲೈನ್ ಅರ್ಜಿಗಾಗಿ ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್ ಅನ್ನು ಸಂಪರ್ಕಿಸಿ.


2 thoughts on “ಗಂಗಾ ಕಲ್ಯಾಣ ಯೋಜನೆ: ಬೋರ್ ವೆಲ್ ಕೊರೆಸಲು ರೈತರಿಗೆ ಆರ್ಥಿಕ ನೆರವು.! ಹೇಗೆ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲೆಗಳೇನು.?

Leave a Reply

Your email address will not be published. Required fields are marked *